ಇವರು ನನ್ನ ತಾಯಿ ಅಲ್ಲ, ಮಹಾನ್ ಕೆಲಸ ಮಾಡುತ್ತಿರುವ ಈ ತಾಯಿಗೆ ಧನ್ಯವಾದ: ನಟ ಚಿರಂಜೀವಿ

ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಿಲ್ಲರ್ ವೈರಸ್ ನಿಂದ ಕಾಪಾಡಿಕೊಳ್ಳಲು ಮಾಸ್ಕ್, ಸ್ಯಾನಿಟೈಸರ್ ಗಳ ಬಳಕೆ ಹೆಚ್ಚಾಗುತ್ತಿದೆ. ಹಾಗಾಗಿ ಈಗ ಮಾಸ್ಕ್ ಗಳ ಕೊರತೆಯೊಂಟಾಗಿದೆ. ಈ ಸಮಯದಲ್ಲಿ ಅನೇಕರು ಮನೆಯಲ್ಲಿಯೇ ಮಾಸ್ಕ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ತೆಲುಗು ನಟ ಚಿರಂಜೀವಿ ಅವರ ತಾಯಿ ಅಂಜನಾ ದೇವಿ ಸಹ ಮಾಸ್ಕ್ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಜೊತೆಗೆ ಫೋಟೋ ಕೂಡ ವೈರಲ್ ಆಗಿದೆ. ಚಿರಂಜೀವಿ ಅವರ ತಾಯಿ ಸ್ನೇಹಿತರ ಜೊತೆ ಸೇರಿ ದಿನಕ್ಕೆ 700 ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಎಂದು ಕೆಲವು ಸುದ್ದಿ ಪತ್ರಿಕೆಗಳಲ್ಲಿ ಮತ್ತು ಟಿವಿ ಚಾನಲ್ ಗಳಲ್ಲಿ ಪ್ರಕಟವಾಗಿದೆ.

Chiranjeevi Clarified About His Mother Not Preparing Mask

ಇದನ್ನು ನೋಡಿದ ನಟ ಚಿರಂಜೀವಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇವರು ನನ್ನ ತಾಯಿ ಅಲ್ಲ. ಆದರೆ ಮಹಾನ್ ಕೆಲಸ ಮಾಡುತ್ತಿರುವ ಈ ತಾಯಿಗೆ ಧನ್ಯವಾದ ಎಂದು ಹೇಳಿದ್ದಾರೆ. ಮಹಿಳೆ ಮನೆಯಲ್ಲಿಯೇ ಕುಳಿತು ಮಾಸ್ಕ್ ತಯಾರಿಸುತ್ತಿರುವ ಫೋಟೋ ನೋಡಿ ಅನೇಕರು ಚಿರಂಜೀವಿ ತಾಯಿ ಅಂಜನಾ ದೇವಿ ಎಂದೇ ಭಾವಿಸಿದ್ದರು.

ಈ ಬಗ್ಗೆ ಚಿರಂಜೀವಿ ಟ್ವೀಟ್ ಮಾಡಿದ್ದಾರೆ. " ನನ್ನ ತಾಯಿ ಈ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಕೆಲವು ಪತ್ರಿಕೆಗಳು ಮತ್ತು ಚಾನಲ್ ಗಳಲ್ಲಿ ವರದಿಯಾಗುತ್ತಿದೆ. ಇದು ನನ್ನ ತಾಯಿ ಅಲ್ಲ. ಆದೆ ಯಾವತಾಯಿಯಾದರು ಈ ಮಹಾನ್ ಕೆಲಸಕ್ಕೆ ಹೃದಯಪೂರ್ವಕ ಧನ್ಯವಾದ ತಿಳಿಸುತ್ತೇನೆ."ಎಂದು ಟ್ವೀಟ್ ಮಾಡಿದ್ದಾರೆ.

ಆಂಧ್ರಪ್ರದೇಶದಲ್ಲಿಯೂ ಕೊರೊನಾ ಅಟ್ಟಹಾಸ ಮರೆಯುತ್ತಿದ್ದು, ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿದೆ. ಇನ್ನು ಟಾಲಿವುಡ್ ನ ಸಾಕಷ್ಟು ಮಂದಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೋಟಿ ಕೋಟಿ ದೇಣಿಗೆ ನೀಡಿದ್ದಾರೆ. ನಟ ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಇಬ್ಬರು ಆಂಧ್ರ ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ.

More from Filmibeat

English summary
Telugu Actor Chiranjeevi clarified about his mother not preparing Mast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X