ಚಿರು ಮಾಜಿ ಅಳಿಯ ಸಾವು; ಅಂದು ಮನೆಯಿಂದ ಓಡಿ ಹೋಗಿ ಮದುವೆ ಆಗಿದ್ದರು ಶ್ರೀಜ- ಶಿರೀಶ್!

ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಕೊನೆಯುಸಿರೆಳೆದಿದ್ದಾರೆ. 2007ರಲ್ಲಿ ಚಿರು ಪುತ್ರಿ ಶ್ರೀಜ ಹಾಗೂ ಶಿರೀಶ್ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಈ ಮದುವೆ ವಿಚಾರ 17 ವರ್ಷಗಳ ಹಿಂದೆ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿತ್ತು.

ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರೀಶ್(39) ಚಿಕಿತ್ಸೆ ಫಲಕಾರಿಯಾಗದೇ ಇಂದು(ಜೂನ್ 19) ಮೃತಪಟ್ಟಿದ್ದಾರೆ. ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎಂದು ವರದಿಯಾಗಿದೆ. ಶಿರೀಶ್ 2019ರಲ್ಲಿ ಹೈದರಾಬಾದ್ ಮೂಲಕ ಡಾಕ್ಟರ್ ವಿಹಾನರನ್ನು 2ನೇ ಮದುವೆ ಆಗಿದ್ದರು.

Chiranjeevi daughter Srija Konidela s Ex Husband Sirish Bharadwaj Passed Away

ಚಿರಂಜೀವಿ ವಿರೋಧದ ನಡುವೆಯೂ ಶ್ರೀಜ- ಶಿರೀಶ್ ಮದುವೆ ಆಗಿದ್ದರು. ಆದರೆ 2012ರಲ್ಲಿ ಪತಿಯ ವಿರುದ್ಧ ಶ್ರೀಜ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವರದಕ್ಷಿಣೆಗಾಗಿ ಶಿರೀಶ್ ತನಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. 2024ರಲ್ಲಿ ದಂಪತಿ ವಿಚ್ಛೇದನ ಪಡೆದು ದೂರಾಗಿದ್ದರು.

ಶ್ರೀಜಾ ಮತ್ತು ಶಿರೀಶ್ ಭಾರದ್ವಾಜ್‌ಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ದಂಪತಿ ಬೇರ್ಪಟ್ಟ ನಂತರ, ಶ್ರೀಜಾ ತನ್ನ ಮಗಳೊಂದಿಗೆ ಚಿರಂಜೀವಿ ಮನೆಯಲ್ಲಿ ಉಳಿದರು. ಬಳಿಕ ಕಲ್ಯಾಣ್ ದೇವ್ ಎಂಬುವವರ ಜೊತೆ 2ನೇ ಮದುವೆ ಆಗಿದ್ದರು. ಶ್ರೀಜ- ಕಲ್ಯಾಣ್ ಕೂಡ ದೂರಾಗಿದ್ದಾರೆ ಎನ್ನುವ ಗುಸುಗುಸು ಕೂಡ ಕೇಳಿಬರ್ತಿದೆ.

ಇನ್ನು 2007ರಲ್ಲಿ ಶ್ರೀಜ-ಶಿರೀಶ್ ಪೋಷಕರ ಒಪ್ಪಿಗೆ ಇಲ್ಲದೇ ಆರ್ಯ ಸಮಾಜದಲ್ಲಿ ಮದುವೆ ಆಗಿದ್ದರು. ಬಳಿಕ ಶ್ರೀಜ ದೆಹಲಿಗೆ ಹೋಗಿ ತಮ್ಮ ಕುಟುಂಬದಿಂದ ನನಗೆ ರಕ್ಷಣೆ ಬೇಕು ಎಂದು ಕೋರ್ಟ್‌ ಮೆಟ್ಟಿಲೇರಿದ್ದರು. ಅದೇ ಶ್ರೀಶ 2011ರಲ್ಲಿ ಮತ್ತೆ ತಮ್ಮ ತಂದೆ ಮನೆಗೆ ವಾಪಸ್ ಆಗಿದ್ದರು. ನನ್ನ ಪತ್ನಿ ಬಳಿ ಮಾತನಾಡಲು ನನಗೆ ಅವಕಾಶ ಕೊಡಿಸಿ ಎಂದು ಶಿರೀಶ್ ಆಂಧ್ರ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಹಾಕುವಂತಾಗಿತ್ತು.

Chiranjeevi daughter Srija Konidela s Ex Husband Sirish Bharadwaj Passed Away

ಅವತ್ತಿನ ಕಾಲಕ್ಕೆ ಶ್ರೀಜ- ಶಿರೀಶ್ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಹೈಸ್ಕೂಲ್ ದಿನಗಳಲ್ಲೇ ಇಬ್ಬರೂ ಪ್ರೀತಿಸುತ್ತಿದ್ದರು. ಅಂದು ಮದುವೆ ಬಳಿಕ ಶ್ರೀಜ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ನಾನು ಇವತ್ತು ಮನೆಯಿಂದ ಎಸ್ಕೇಪ್ ಆಗಿ ಶಿರೀಶ್ ಭಾರಧ್ವಜ್‌ ಜೊತೆ ಮದುವೆ ಆದೆ. ನನನೆ 19 ವರ್ಷ, ಶಿರೀಶ್ಗೆ 21 ವರ್ಷ ವಯಸ್ಸು. ನಾವಿಬ್ಬರು ಮೇಜರ್, ಹಾಗಾಗಿ ನಮಗೆ ಮದುವೆ ಆಗುವ ಹಕ್ಕು ಇದೆ" ಎಂದಿದ್ದರು.

ಕಳೆದ ನಾಲ್ಕು ವರ್ಷಗಳಿಂದ ನಾವಿಬ್ಬರು ಪ್ರೀತಿಸುತ್ತಿದ್ದೀವಿ. ಈಗ ಮದುವೆ ಆಗಲು ನಿರ್ಧರಿಸಿದೆವು. ನಮಗೆ ಮಾಧ್ಯಮ ಹಾಗೂ ಪೊಲೀಸರ ರಕ್ಷಣೆ ಬೇಕು. ಯಾಕಂದ್ರೆ ನನಗೆ ನಮ್ಮ ಮನೆಯವರಿಂದ ಬೆದರಿಕೆ ಇದೆ ಎಂದು ಹೇಳಿದ್ದರು. ಥೇಟ್ ಸಿನಿಮಾ ಶೈಲಿಯಲ್ಲಿ ನಡೆದ ಈ ಘಟನೆ ನಡೆದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆಯಿಂದ ಮೆಗಾಸ್ಟಾರ್ ಚಿರಂಜೀವಿ ಮುಜುಗರಕ್ಕೀಡಾಗಿದ್ದರು.

ಮದುವೆ ಮಾಡಿಕೊಂಡು ಹೊರ ಬರುತ್ತಿದ್ದಂತೆ ಮಾಧ್ಯಮಗಳ ವಾಹನದಲ್ಲೇ ಶ್ರೀಜ- ಶಿರೀಶ್ ಮಾತನಾಡಿದ್ದರು. ತಮಗೆ ಬೆದರಿಕೆ ಇದೆ ಎಂದು ಆರೋಪಿಸಿದ್ದು ಭಾರೀ ವೈರಲ್ ಆಗಿತ್ತು. ಶಿರೀಶ್ ಮೃತಪಟ್ಟ ಹಿನ್ನೆಲೆಯಲ್ಲಿ ಮದುವೆ ಘಟನೆಯನ್ನು ಕೆಲವರು ನೆನಪಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Tollywood actor Chiranjeevi's Ex son in law Sirish Bharadwaj death;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X