For Quick Alerts
  ALLOW NOTIFICATIONS  
  For Daily Alerts

  ಆ ಸೂಪರ್‌ಸ್ಟಾರ್‌ಗೆ 'ಭಾರತ ರತ್ನ' ಕೊಡಿ ಎಂದು ಮನವಿ ಮಾಡಿದ ಚಿರಂಜೀವಿ

  |

  ತೆಲುಗು ದಿಗ್ಗಜ ನಟ ನಂದಮೂರಿ ತಾರಕ ರಾಮರಾವ್ 98ನೇ ಜನುಮದಿನದ ವಿಶೇಷವಾಗಿ ಮೆಗಾಸ್ಟಾರ್ ಚಿರಂಜೀವಿ ಸ್ಮರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಂಗತ ನಟ ಎನ್‌ಟಿಆರ್‌ಗೆ ಭಾರತ ರತ್ನ ನೀಡುವ ಮೂಲಕ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  ಮೇ 28 ರಂದು ನಟ-ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿಆರ್‌ ಅವರ 98ನೇ ವರ್ಷದ ಹುಟ್ಟುಹಬ್ಬ. ತಾರಕ್ ರಾಮರಾವ್ ಜನುಮದಿನ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಸಿನಿ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರುವ ಮೂಲಕ ಅಭಿಮಾನ ಪ್ರದರ್ಶಿಸುತ್ತಿದ್ದಾರೆ. ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಚಿರಂಜೀವಿ ಭಾರತ್ನ ಕೊಡಿ ಎಂದು ಅಭಿಯಾನ ಹುಟ್ಟುಹಾಕಿದ್ದಾರೆ. ಮುಂದೆ ಓದಿ....

  ಡಾ. ರಾಜ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರಡಾ. ರಾಜ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರ

  ಮರಣೋತ್ತರ ಭಾರತ ರತ್ನ ಕೊಡಿ

  ಮರಣೋತ್ತರ ಭಾರತ ರತ್ನ ಕೊಡಿ

  ''ಖ್ಯಾತ ಹಿನ್ನೆಲೆ ಗಾಯಕ ಭೂಪೆನ್ ಹಜಾರಿಕಾರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಲಾಗಿತ್ತು. ಅದರಂತೆ ತೆಲುಗು ರಾಜ್ಯದ ಹೆಮ್ಮೆಯ ನಾಯಕ ನಂದಮೂರಿ ತಾರಕ್ ರಾಮರಾವ್‌ಗೆ ಭಾರತ ರತ್ನ ಕೊಟ್ಟರೆ ಅದು ನಮ್ಮೆಲ್ಲರ ಹೆಮ್ಮೆ'' ಎಂದು ಚಿರಂಜೀವಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  ರಾಜ್‌ಗೆ ಭಾರತ ರತ್ನ; ಅಡ್ಡಗಾಲು ಹಾಕಿದ್ದ ವ್ಯಕ್ತಿ ಯಾರು?ರಾಜ್‌ಗೆ ಭಾರತ ರತ್ನ; ಅಡ್ಡಗಾಲು ಹಾಕಿದ್ದ ವ್ಯಕ್ತಿ ಯಾರು?

  100ನೇ ಜನ್ಮ ದಿನಕ್ಕೆ ನೀಡುವಂತೆ ಆಗ್ರಹ

  100ನೇ ಜನ್ಮ ದಿನಕ್ಕೆ ನೀಡುವಂತೆ ಆಗ್ರಹ

  98ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಮರಿಸಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ''ತಾರಕ್ ರಾಮರಾವ್‌ ಅವರ 100ನೇ ಜನುಮದಿನದ ಸಂದರ್ಭದಲ್ಲಿ ಭಾರತ ರತ್ನ ಗೌರವ ನೀಡಿದರೆ, ಅದು ತೆಲುಗು ಪ್ರಜೆಗಳನ್ನು ಗೌರವಿಸದಂತೆ'' ಎಂದು ಟ್ವೀಟ್ ಮೂಲಕ ವಿನಂತಿಸಿದರು.

  ಜನನಾಯಕನನ್ನು ನೆನೆದ ಸಿನಿರಂಗ

  ಜನನಾಯಕನನ್ನು ನೆನೆದ ಸಿನಿರಂಗ

  ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್ ಹಾಗೂ ಆಂಧ್ರಪ್ರದೇಶದಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಎನ್‌ಟಿಆರ್‌ ಅವರನ್ನು ಅನೇಕ ಸಿನಿಗಣ್ಯರು ಸ್ಮರಿಸಿದ್ದಾರೆ. ಎನ್‌ಟಿಆರ್ ಚಿತ್ರಗಳು, ಅವರ ಆಡಳಿತ ಬಗ್ಗೆ ಚರ್ಚೆ ಮಾಡ್ತಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ, ಬಾಬಿ ಸೇರಿದಂತೆ ಅನೇಕರು ಗೌರವ ಸೂಚಿಸಿದರು.

  ಸೀಲ್ ಡೌನ್ ಆಗಿರೋ ಏರಿಯಾದಲ್ಲಿ Harshaka ಮತ್ತು Bhuvan ಮಾಡಿದ್ದೇನು ನೋಡಿ | Filmibeat Kannada
  ಅಣ್ಣಾವ್ರಿಗೂ ಭಾರತ ರತ್ನ ಕೊಡಿ

  ಅಣ್ಣಾವ್ರಿಗೂ ಭಾರತ ರತ್ನ ಕೊಡಿ

  ಎನ್‌ಟಿಆರ್ ಮಾದರಿಯಲ್ಲಿ ಕನ್ನಡ ಕಂಠೀರವ, ವರನಟ ರಾಜ್ ಕುಮಾರ್‌ಗೂ ಭಾರತ ರತ್ನ ಕೊಡಿ ಎಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಅಣ್ಣಾವ್ರಿಗೆ ಮರಣೋತ್ತರ ಭಾರತ ರತ್ನ ಪ್ರಕಟಿಸಬೇಕೆಂದು ಕರ್ನಾಟಕದ ಹಲವು ಮಂದಿ ಸರ್ಕಾರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನ ಆಗಿಲ್ಲ.

  English summary
  Megastar Chiranjeevi demand govt to honour 'Bharat Ratna' to telugu film industry legend Nandamuri taraka ramarao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X