ತೆಲುಗು ಸಿನಿರಂಗವನ್ನು ಚಿರಂಜೀವಿ ಒಡೆಯುತ್ತಿದ್ದಾರೆ: ನಿರ್ಮಾಪಕ ಗಂಭೀರ ಆರೋಪ
ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಬಂದ ಬಳಿಕ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿನಿಮಾ ಕುಟುಂಬಗಳಿಗೆ ಸ್ವತಃ ಹಣಕಾಸು ಸಹಾಯ ಮಾಡಿದ ಈ ಹಿರಿಯ ನಟ ತೆಲುಗು ರಾಜ್ಯಗಳ ಸಿಎಂಗಳನ್ನು ಖುದ್ದಾಗಿ ಭೇಟಿಯಾಗಿ ಸಿನಿಮಾ ರಂಗದ ನೆರವು ನಿಡುವಂತೆ ಸತತವಾಗಿ ಮನವಿಗಳನ್ನು ಮಾಡುತ್ತಿದ್ದಾರೆ.
ಆದರೆ ಈ ನಡುವೆ ನಟ ಚಿರಂಜೀವಿ ತೆಲುಗು ಚಿತ್ರರಂಗವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕರೊಬ್ಬರು ಮಾಡಿದ್ದಾರೆ. ಅದಕ್ಕೆ ಕಾರಣವೂ ಇದೆ.
ತೆಲುಗು ಸಿನಿಮಾ ಪ್ರಮುಖರನ್ನೆಲ್ಲ ಸೇರಿಸಿ ನಿಯೋಗವೊಂದನ್ನು ರಚಿಸಿ ತೆಲಂಗಾಣ ರಾಜ್ಯ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಆಂಧ್ರಪ್ರದೇಶ ಮುಖ್ಯ ಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿ ಸಭೆ ನಡೆಸಿ ಮನವಿ ಸಲ್ಲಿಸಿದ್ದರು. ಆದರೆ ಈ ಸಭೆಗೆ ತೆಲುಗು ಚಿತ್ರರಂಗದ ಮತ್ತೊಬ್ಬ ಹಿರಿಯ ನಟ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ. ಆಗಸ್ಟ್ 16ರಂದು ಚಿರಂಜೀವಿ ತಮ್ಮ ಮನೆಯಲ್ಲಿ ಮಾಡಿದ ಪೂರ್ವಭಾವಿ ಸಭೆಗೂ ಬಾಲಕೃಷ್ಣಗೆ ಆಹ್ವಾನ ನೀಡಿರಲಿಲ್ಲ. ಇದು ಬಾಲಕೃಷ್ಣ ಅಭಿಮಾನಿಗಳನ್ನು ಕೆರಳಿಸಿದ್ದು, ಬಾಲಕೃಷ್ಣ ಅವರನ್ನು ನಿರ್ಲಕ್ಷ್ಯ ಮಾಡಿರುವುದು ಚಿತ್ರರಂಗವನ್ನು ಒಡೆಯುವ ಸಂಚು ಎಂದು ಹಿರಿಯ ನಿರ್ಮಾಪಕರೊಬ್ಬರು ಆರೋಪ ಮಾಡಿದ್ದಾರೆ.
ತೆಲುಗು ಹಾಗೂ ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ನಿರ್ಮಾಣ ಮಾಡಿರುವ ನಟ್ಟಿ ಕುಮಾರ್, ಚಿರಂಜೀವಿ ಉದ್ದೇಶಗಳ ಬಗ್ಗೆ ಪ್ರಶ್ನೆ ಮಾಡಿದ್ದು, ''ನಟ ಚಿರಂಜೀವಿ ಕುರಿತು ಗೌರವ ಇದೆ. ಆದರೆ ತೆಲುಗು ಸಿನಿಮಾ ಉದ್ಯಮವನ್ನು ವಿಭಜನೆ ಮಾಡುವ ಕಾರ್ಯ ಮಾಡಬೇಡಿ. ತೆಲುಗು ಸಿನಿಮೋದ್ಯಮ ಎಂದರೆ ಕೇವಲ 'ಮಾ' ಅಸೋಸಿಯೇಷನ್ ಮಾತ್ರವೇ ಅಲ್ಲ ಇನ್ನೂ ಹಲವು ವಿಭಾಗಗಳು, ಸಂಘಗಳು ಇವೆ. ಸಿನಿಮಾ ರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಎಂ ಬಳಿ ಕರೆದುಕೊಂಡ ಹೋದ ನಿಯೋಗಕ್ಕೆ ನಿರ್ಮಾಪಕರ ಕೌನ್ಸಿಲ್, ಫಿಲಂ ಚೇಂಬರ್ ಸದಸ್ಯರನ್ನು ಆಹ್ವಾನಿಸಿದೆ ಕೇವಲ ಸಿನಿಮಾ ಗಣ್ಯರನ್ನು ಮಾತ್ರವೇ ಏಕೆ ಕರೆಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ'' ಎಂದು ನಟ್ಟಿ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ನಿರ್ಮಾಪಕ ನಟ್ಟಿ ಕುಮಾರ್ ಪ್ರಶ್ನೆ
ತೆಲುಗು ಹಾಗೂ ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ನಿರ್ಮಾಣ ಮಾಡಿರುವ ನಟ್ಟಿ ಕುಮಾರ್, ಚಿರಂಜೀವಿ ಉದ್ದೇಶಗಳ ಬಗ್ಗೆ ಪ್ರಶ್ನೆ ಮಾಡಿದ್ದು, ''ನಟ ಚಿರಂಜೀವಿ ಕುರಿತು ಗೌರವ ಇದೆ. ಆದರೆ ತೆಲುಗು ಸಿನಿಮಾ ಉದ್ಯಮವನ್ನು ವಿಭಜನೆ ಮಾಡುವ ಕಾರ್ಯ ಮಾಡಬೇಡಿ. ತೆಲುಗು ಸಿನಿಮೋದ್ಯಮ ಎಂದರೆ ಕೇವಲ 'ಮಾ' ಅಸೋಸಿಯೇಷನ್ ಮಾತ್ರವೇ ಅಲ್ಲ ಇನ್ನೂ ಹಲವು ವಿಭಾಗಗಳು, ಸಂಘಗಳು ಇವೆ. ಸಿನಿಮಾ ರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಿಎಂ ಬಳಿ ಕರೆದುಕೊಂಡ ಹೋದ ನಿಯೋಗಕ್ಕೆ ನಿರ್ಮಾಪಕರ ಕೌನ್ಸಿಲ್, ಫಿಲಂ ಚೇಂಬರ್ ಸದಸ್ಯರನ್ನು ಆಹ್ವಾನಿಸಿದೆ ಕೇವಲ ಸಿನಿಮಾ ಗಣ್ಯರನ್ನು ಮಾತ್ರವೇ ಏಕೆ ಕರೆಯುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ'' ಎಂದು ನಟ್ಟಿ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಬಾಲಕೃಷ್ಣ ಹಾಗೂ ಇನ್ನೂ ಹಲವರನ್ನು ಸಭೆಗೆ ಕರೆದಿಲ್ಲ: ನಟ್ಟಿ ಕುಮಾರ್
''ಆಗಸ್ಟ್ 16 ರಂದು ಚಿರಂಜೀವಿ ತಮ್ಮ ಮನೆಯಲ್ಲಿ ನಡೆಸಿದ ಸಭೆಗೆ ನಟ ಬಾಲಕೃಷ್ಣ ಅನ್ನು, ನಿರ್ಮಾಪಕರ ಮಂಡಳಿ ವೈಸ್ ಪ್ರೆಸಿಡೆಂಟ್ ಅನ್ನು, ಕಾರ್ಯದರ್ಶಿಯನ್ನು ಇತರ ಮಂಡಳಿಗಳಗಳವರನ್ನು ಏಕೆ ಕರೆದಿಲ್ಲ. ಚಿರಂಜೀವಿ ಕರೆದಿದ್ದ ಸಭೆಯಲ್ಲಿ ಕೇವಲ ದೊಡ್ಡ ನಿರ್ಮಾಪಕರು ಮಾತ್ರವೇ ಕಾಣಿಸುತ್ತಿದ್ದರು ಯಾವ ಸಣ್ಣ ನಿರ್ಮಾಪಕರೂ ಕಾಣಲಿಲ್ಲ. ಸಿನಿಮಾ ರಂಗದಲ್ಲಿ ಸಣ್ಣವರು, ದೊಡ್ಡವರು ಎಂಬ ಭೇದ ಮಾಡದೆ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಬೇಕು. ದಾಸರಿ ಅವರ ನಂತರ ಚಿರಂಜೀವಿ ಅವರನ್ನೇ ಸಿನಿಮಾ ರಂಗದ ನಾಯಕ ಎಂದು ನಾವು ಗುರುತಿಸುತ್ತೇವೆ ಹಾಗಾಗಿ ಅವರು ಇಂಥಹಾ ವಿಷಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ವ್ಯವಹರಿಸಬೇಕು'' ಎಂದಿದ್ದಾರೆ ನಟ್ಟಿ ಕುಮಾರ್.

ಸರಿಯಾಗಿ ಫಾಲೋಅಪ್ ಮಾಡಿಲ್ಲ: ನಟ್ಟಿ ಕುಮಾರ್
''ಕಳೆದ ಬಾರಿ ನಟ ಚಿರಂಜೀವಿ, ನಾಗಾರ್ಜುನ ಹಾಗೂ ಇನ್ನೂ ಕೆಲವರು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯನ್ನು ಭೇಟಿ ಮಾಡಿದ್ದರು. ಆಗ ಸರ್ಕಾರ ಕೊಟ್ಟ ಭರವಸೆಗಳು ಯಾವುದು ಸಹ ಈಡೇರಲಿಲ್ಲ. ಜಗನ್ ಅನ್ನು ಭೇಟಿ ಮಾಡಿದವರು ನಂತರ ಸರ್ಕಾರದ ಅಧಿಕಾರಿಗಳನ್ನು ಫಾಲೋ ಅಪ್ ಮಾಡಿ ಭರವಸೆಗಳು ನೆರವೇರುವಂತೆ ನೋಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಸರ್ಕಾರ ಕೊಟ್ಟಿದ್ದ ಭರವಸೆಗಳು, ಈಗ ಕೊಡುತ್ತಿರುವ ಭರವಸೆಗಳು ಈಡೇರುತ್ತವೆ ಎಂಬ ನಂಬಿಕೆ ನನಗಿಲ್ಲ.

ಸರ್ಕಾರ ನೀಡಿದ ಭರವಸೆ ಈಡೇರಿಲ್ಲ: ನಟ್ಟಿ ಕುಮಾರ್
ಆಂಧ್ರ ಸರ್ಕಾರವು ಜಿಒ 35 ಮಾದರಿ ಟಿಕೆಟ್ ಬೆಲೆಯನ್ನು ಬದಲಾಯಿಸ ಬಾರದು. ಕೊರೊನಾ ಸಮಯದಲ್ಲಿ ನಷ್ಟ ಅನುಭವಿಸಿರುವ ಚಿತ್ರಮಂದಿರಗಳ ಮೂರು ತಿಂಗಳ ಕರೆಂಟ್ ಬಿಲ್ಲು, ತೆರಿಗೆಗಳನ್ನು ಮಾಫಿ ಮಾಡುವುದಾಗಿ ಸರ್ಕಾರ ಹೇಳಿತ್ತು ಆದರೆ ಅದು ಈವರೆಗೆ ಸಾಧ್ಯವಾಗಿಲ್ಲ. ಸಿನಿಮಾ ರಂಗದಲ್ಲಿ ಸಣ್ಣ ನಿರ್ಮಾಪಕರಿಗೆ ಸೂಕ್ತ ನೆರವು ಸಿಗುತ್ತಿಲ್ಲ. ಸಣ್ಣ ಸಿನಿಮಾಗಳಿಗಾಗಿ ಐದನೇ ಶೋ ಬಿಟ್ಟುಕೊಡುವುದಾಗಿ ಅಥವಾ ದಿನಕ್ಕೆ ಐದು ಶೋ ಕೊಡುವುದಾಗಿ ಈ ಹಿಂದೆ ಹೇಳಿದ್ದರು. ಆದರೆ ಅದು ಜಾರಿಯಾಗಿಲ್ಲ. ಇನ್ನು ಚಿರಂಜೀವಿ ಜೊತೆ ಸಭೆಗೆ ಹೋದ ಕೆಲವು ನಿರ್ಮಾಪಕರೇ ತಮ್ಮ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ಚಿತ್ರಮಂದಿರಗಳಿಗೆ ಅನ್ಯಾಯ ಮಾಡಿದ್ದಾರೆ. ಅವರು ಚಿತ್ರಮಂದಿರಗಳಿಗೆ ನ್ಯಾಯ ಒದಗಿಸಬಲ್ಲರೆ ಎಂದು ಪ್ರಶ್ನೆ ಮಾಡಿದ್ದಾರೆ ನಟ್ಟಿ ಕುಮಾರ್.

ಚಿರು ಮನೆಯಲ್ಲಿ ನಡೆದ ಸಭೆಯಲ್ಲಿ ಯಾರ್ಯಾರಿದ್ದರು?
ಸಿಎಂ ಜಗನ್ ಭೇಟಿಗೆ ಮುನ್ನ ಚಿರಂಜೀವಿ ನಿವಾಸದಲ್ಲಿ ಆಗಸ್ಟ್ 16 ರಂದು ನಡೆದ ಪೂರ್ವಭಾವಿ ಸಭೆ ನಡೆದಿದ್ದು, ಸಭೆಯಲ್ಲಿ ನಟ ಅಕ್ಕಿನೇನಿ ನಾಗಾರ್ಜುನ, ನಿರ್ಮಾಪಕ ಅಲ್ಲು ಅರವಿಂದ, ನಿರ್ದೇಶಕ ಕೊರಟಾಲ ಶಿವ, ವಿವಿ ವಿನಾಯಕ್, ನಿರ್ಮಾಪಕರಾದ ದಿಲ್ ರಾಜು, ಸುರೇಶ್ ಬಾಬು, ಕೆ.ಎಸ್.ರಾಮಾರಾವ್, ದಾಮೋದರ್ ಪ್ರಸಾದ್, ಏಷಿಯನ್ ಸಿನಿಮಾಸ್‌ನ ಸುನಿಲ್ ನಾರಂಗ್, ಶ್ರವಂತಿ ಮೂವೀಸ್‌ನ ರವಿ ಕಿಶೋರ್, ಯುವಿ ಕ್ರಿಯೇಶನ್ಸ್‌ನ ವಿಕ್ಕಿ, ಬಿವಿಎಸ್‌ಎನ್ ಪ್ರಸಾದ್, ಮೆಹರ್ ರಮೇಶ್, ಸುಪ್ರಿಯಾ, ಎನ್‌ವಿ ಪ್ರಸಾದ್, ಸಿ ಕಲ್ಯಾಣ್ ಇನ್ನೂ ಕೆಲವರು ಭಾಗವಹಿಸಿದ್ದರು. ಆದರೆ ನಂದಮೂರಿ ಕುಟುಂಬದಿಂದ ಯಾರೂ ಸಭೆಗೆ ಬಂದಿರಲಿಲ್ಲ.


Click it and Unblock the Notifications











