For Quick Alerts
  ALLOW NOTIFICATIONS  
  For Daily Alerts

  ನಿಹಾರಿಕಾ ಮದುವೆ: ಚಿರಂಜೀವಿ ಭಾವುಕ ಟ್ವೀಟ್

  |

  ಚಿರಂಜೀವಿ ಕುಟುಂಬದಲ್ಲಿ ಬಹು ವರ್ಷಗಳ ನಂತರ ಮದುವೆಯೊಂದು ನಡೆಯುತ್ತಿದೆ. ಚಿರಂಜೀವಿ ಸಹೋದರ ನಾಗಬಾಬು ಮಗಳು ನಿಹಾರಿಕಾ ಮದುವೆ.

  ನಿಹಾರಿಕಾ-ಚೈತನ್ಯ ಮದುವೆ ರಾಜಸ್ಥಾನದ ಉದಯ್‌ಪುರ ಪ್ಯಾಲೆಸ್‌ನಲ್ಲಿ ಇಂದು (ಡಿಸೆಂಬರ್ 09) ನಡೆದಿದೆ. ಈ ಮದುವೆಗೆ ಚಿರಂಜೀವಿ ಕುಟುಂಬಸ್ಥರೆಲ್ಲರೂ ಮೂರು ದಿನ ಮುಂಚಿತವಾಗಿಯೇ ತೆರಳಿ ಮದುವೆಯಲ್ಲಿ ಸಂಭ್ರಮದಿಂದ ಭಾಗವಹಿಸಿದ್ದಾರೆ.

  ಚಿರಂಜೀವಿ ಕುಟುಂಬ ಸೇರುತ್ತಿರುವ ಅಳಿಯ ಚೈತನ್ಯ ಯಾರು ಗೊತ್ತೆ?

  ನಿಹಾರಿಕಾ ಚಿರಂಜೀವಿ ಕುಟುಂಬದ ಮುದ್ದು ಮಗಳು. ಚಿರಂಜೀವಿ ಕುಟುಂಬದಿಂದ ಈ ವರೆಗೆ ಸಿನಿಮಾ ನಟಿಯಾದ ಏಕೈಕ ಹೆಣ್ಣುಮಗಳು ನಿಹಾರಿಕಾ. ನಿಹಾರಿಕಾ ಎಂದರೆ ನಟ ಚಿರಂಜೀವಿಗೆ ಸಹ ಅಚ್ಚುಮೆಚ್ಚು.

  ನಿಹಾರಿಕಾ ಮದುವೆ ಸಂದರ್ಭದಲ್ಲಿ ನಟ ಚಿರಂಜೀವಿ ಭಾವುಕ ಟ್ವೀಟ್ ಒಂದನ್ನು ಮಾಡಿದ್ದಾರೆ. ನಿಹಾರಿಕಾ ಸಣ್ಣ ಹುಡುಗಿಯಾಗಿದ್ದಾಗ ಆಕೆಯನ್ನು ಎತ್ತಿಕೊಂಡಿರುವ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಚಿರಂಜೀವಿ, 'ನನ್ನ ಕೈಯಲ್ಲಿ ಬೆಳೆದ ಚಿನ್ನಾರಿ ನಿಹಾರಿಕಾಳನ್ನು, ಚೈತನ್ಯ ಕೈಗೆ ನೀಡುತ್ತಿದ್ದೇನೆ' ಎಂದಿದ್ದಾರೆ.

  ಇಬ್ಬರು ದಂಪತಿಗಳಿಗೆ ಶುಭಾಶಯಗಳು, ಆಶೀರ್ವಾದಗಳು, ಇಬ್ಬರ ಭವಿಷ್ಯ ಚೆನ್ನಾಗಿರಲಿ ಎಂದು ಚಿರಂಜೀವಿ ಆಶೀರ್ವದಿಸಿದ್ದಾರೆ. ನಿಹಾರಿಕಾ-ಚೈತನ್ಯ ಮದುವೆ ಇಂದು ನಡೆಯಲಿದೆ.

  ಚಿರಂಜೀವಿ ಕುಟುಂಬ, ಪವನ್ ಕಲ್ಯಾಣ್ ಕುಟುಂಬ, ಅಲ್ಲು ಅರ್ಜುನ್ ಕುಟುಂಬ ಇನ್ನೂ ಹಲವಾರು ಮಂದಿ ಮೂರು ದಿನ ಮುಂಚಿತವಾಗಿಯೇ ರಾಜಸ್ಥಾನ ತಲುಪಿದ್ದಾರೆ. ಪ್ರತಿದಿನ ಹಾಡು-ಕುಣಿತಗಳೊಂದಿಗೆ ಮದುವೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.

  English summary
  Megastar Chiranjeevi emotional tweet about Niharika's marriage. He said she raised in my hand, now i giving her hand to Chaitanya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X