For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಕುಟುಂಬ ಸೇರುತ್ತಿರುವ ಅಳಿಯ ಚೈತನ್ಯ ಯಾರು ಗೊತ್ತೆ?

  |

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಕಟ್ಟಿದೆ. ಚಿರಂಜೀವಿ ಸಹೋದರ ನಾಗಬಾಬು ಮಗಳು ನಿಹಾರಿಕಾ ಮದುವೆ ನಾಳೆ (ಡಿಸೆಂಬರ್ 9) ರಾಜಸ್ಥಾನದಲ್ಲಿ ನಡೆಯಲಿದ್ದು, ನಿನ್ನೆಯೇ ಚಿರಂಜೀವಿ ಹಾಗೂ ಕುಟುಂಬದವರೆಲ್ಲಾ ಉದಯ್‌ಪುರ ತಲುಪಿದ್ದಾರೆ.

  ದಕ್ಷಿಣ ಭಾರತ ಸಿನಿಉದ್ಯಮದ ದುಬಾರಿ ಮದುವೆಗಳಲ್ಲಿ ಒಂದಾಗಿ ಹೆಸರಾಗಿದೆ ನಿಹಾರಿಕಾ-ಚೈತನ್ಯ ಜೊನ್ನಲಘಡ ಮದುವೆ. ಉದಯ್‌ಪುರದ ಉದಯ್‌ವಿಲಾಸ್ ಪ್ಯಾಲೆಸ್‌ನಲ್ಲಿ ಈಗಾಗಲೇ ಮದುವೆ ಸಂಭ್ರಮ ಜೋರಾಗಿದೆ.

  ಮಕ್ಕಳ ಅನುಮತಿಯೊಂದಿಗೆ ಎರಡನೇ ಮದುವೆಗೆ ತಯಾರಾದ ಗಾಯಕಿಮಕ್ಕಳ ಅನುಮತಿಯೊಂದಿಗೆ ಎರಡನೇ ಮದುವೆಗೆ ತಯಾರಾದ ಗಾಯಕಿ

  ಆದರೆ ನಿಹಾರಿಕಾ ಕೋನಿಡೇಲ ಮದುವೆ ಆಗುತ್ತಿರುವ ವರ ಯಾರೆಂಬ ಕುತೂಹಲ ಹಲವರಿಗೆ ಇದೆ. 27 ವರ್ಷದ ಚೈತನ್ಯ ಜೊನ್ನಲಘಡ ಸಾಮಾನ್ಯ ವ್ಯಕ್ತಿಯಂತೂ ಅಲ್ಲ. ಚಿರಂಜೀವಿ ಕುಟುಂಬಕ್ಕೆ ತಕ್ಕುದಾದ ವರನೇ ಎಂಬುದು ಅವರ ಹಿಮ್ಮಾಹಿತಿ ನೋಡಿದರೆ ಗೊತ್ತಾಗುತ್ತದೆ.

  ಚೈತನ್ಯ ತಂದೆ ಪೊಲೀಸ್ ಇಲಾಖೆ ಐಜಿಪಿ

  ಚೈತನ್ಯ ತಂದೆ ಪೊಲೀಸ್ ಇಲಾಖೆ ಐಜಿಪಿ

  ಚೈತನ್ಯ ತಂದೆ ಪ್ರಭಾಕರ್, ಆಂಧ್ರ ಪೊಲೀಸ್ ಇಲಾಖೆಯಯಲ್ಲಿ ಐಜಿಪಿ. ಅವರ ತಾಯಿ ಗೃಹಿಣಿ. ಜುಲೈ 27, 1990 ರಲ್ಲಿ ಹುಟ್ಟಿರುವ ಚೈತನ್ಯ, ಗಣಿತ ವಿಷಯದಲ್ಲಿ ಎಂಎಸ್‌ಸಿ ಮಾಡಿದ್ದಾರೆ. ಅದೂ ಭಾರತದ ಪ್ರತಿಷ್ಟಿತ ವಿವಿಗಳಲ್ಲಿ ಒಂದಾದ ಟಾಟಾ ಇನ್‌ಸ್ಟಿಟ್ಯೂಟ್‌ನಿಂದ.

  ಟೆಕ್ ಮಹೀಂದ್ರಾದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ

  ಟೆಕ್ ಮಹೀಂದ್ರಾದಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ

  ಇದರ ನಂತರ, ವ್ಯವಹಾರ ಶಾಸ್ತ್ರ ಹಾಗೂ ತಂತ್ರ ವಿಷಯದಲ್ಲಿ ಎಂಬಿಎ ಸಹ ಮಾಡಿದ್ದಾರೆ. ಆ ನಂತರ ಸೂರ್ಯಾ ಎಲಿಕ್ಸೈರ್ಸ್‌ ಸಂಸ್ಥೆಯಲ್ಲಿ ಉದ್ಯೋಗ ಆರಂಭಿಸಿದ ಚೈತನ್ಯ, ಆ ನಂತರ ಆಂಧ್ರ ಸರ್ಕಾರದ ಕೆಪಿಎಂಜಿ ಕಾರ್ಯಕ್ರಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದರು. ಟೆಕ್ ಮಹೀಂದ್ರಾ ದಲ್ಲಿ ಸಹ ಕೆಲ ಕಾಲ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದಾರೆ.

  ಮದುವೆ ಸಂಭ್ರಮದಲ್ಲಿ ನಿಹಾರಿಕಾ; ಸಂಗೀತ ಸಮಾರಂಭದಲ್ಲಿ ಮಿಂಚಿದ ಮೆಗಾಸ್ಟಾರ್ ಕುಟುಂಬಮದುವೆ ಸಂಭ್ರಮದಲ್ಲಿ ನಿಹಾರಿಕಾ; ಸಂಗೀತ ಸಮಾರಂಭದಲ್ಲಿ ಮಿಂಚಿದ ಮೆಗಾಸ್ಟಾರ್ ಕುಟುಂಬ

  ಎರಡು ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ ಚೈತನ್ಯ

  ಎರಡು ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ ಚೈತನ್ಯ

  ನಂತರ ದಿ ಹರಿಕೇನ್ಸ್‌ ಮತ್ತು ಐಎಸ್‌ಬಿ ಸಂಸ್ಥೆಗಳನ್ನು ಪಾಲುದಾರಿಕೆಯಲ್ಲಿ ಪ್ರಾರಂಭಿಸಿದ ಚೈತನ್ಯ ಸಿಇಒ ಸಹ ಆಗಿದ್ದರು. ಇದು ಮಾತ್ರವಲ್ಲದೆ, ಅವರೊಬ್ಬ ಹೂಡಿಕೆದಾರ ಸಹ ಆಗಿದ್ದು, ಹಲವು ಕಂಪೆನಿಗಳಲ್ಲಿ ಹೂಡಿಕೆ ಸಹ ಮಾಡಿದ್ದಾರೆ.

  ಹಲವು ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ

  ಹಲವು ಕಂಪೆನಿಗಳಲ್ಲಿ ಹೂಡಿಕೆ ಮಾಡಿದ್ದಾರೆ

  ನೆಕ್ಸ್ಲೆ ಇಂಡಿಯಾ, ಐಬಿಎಂ, ಏರ್‌ಟೆಲ್ ಇನ್ನೂ ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಚೈತನ್ಯ. ವರದಿ ಪ್ರಕಾರ ಅವರ ವಾರ್ಷಿಕ ಮೌಲ್ಯ 4 ಕೋಟಿಯಂತೆ. ಇದೇ ಸೆಪ್ಟೆಂಬರ್‌ ನಿಂದ ಗೊಟ್ಲಿಚ್‌ ಡಿಸೈನ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

  ಅಮ್ಮನ ನಿಶ್ಚಿತಾರ್ಥದ ಸೀರೆಯಲ್ಲಿ ಮಿಂಚಿದ ಮದುಮಗಳು ನಿಹಾರಿಕಾಅಮ್ಮನ ನಿಶ್ಚಿತಾರ್ಥದ ಸೀರೆಯಲ್ಲಿ ಮಿಂಚಿದ ಮದುಮಗಳು ನಿಹಾರಿಕಾ

  English summary
  Niharika Konidela marrying Chaitanya Jonnalagadda. Here is all u need to know about him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X