"ಸೀರೆ, ರವಿಕೆ ಬಿಟ್ಟರೆ ಏನೂ ಇಲ್ಲ.. ": ಹಾಡಿನ ಶ್ರುತಿ ಹಾಸನ್ ಅಪಸ್ವರ.. ಮೆಗಾ ಫ್ಯಾನ್ಸ್ ಕಿಡಿ!
ಶ್ರುತಿ ಹಾಸನ್ ಟಾಲಿವುಡ್‌ನ ಬೇಡಿಕೆಯ ನಟಿಯರಲ್ಲೊಬ್ಬರು. ಈ ವರ್ಷ ತೆಲುಗಿನಲ್ಲಿ ಎರಡು ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿವೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿದ 'ವಾಲ್ತೇರು ವೀರಯ್ಯ' ಹಾಗೂ ಬಾಲಯ್ಯ ನಟನೆಯ 'ವೀರ ಸಿಂಹ ರೆಡ್ಡಿ'. ಈ ಎರಡೂ ಸಿನಿಮಾಗಳಲ್ಲೂ ಶ್ರುತಿ ಹಾಸನ್ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.
ಆದ್ರೀಗ, ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿದ 'ವಾಲ್ತೇರು ವೀರಯ್ಯ' ಸಿನಿಮಾ ಬಗ್ಗೆ ಕಮೆಂಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಕಳೆದ ಕೆಲವು ದಿನಗಳಿಂದ ಟಾಲಿವುಡ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಶ್ರುತಿ ಹಾಸನ್ ವಿರುದ್ಧ ಚಿರಂಜೀವಿ ಮುನಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿತ್ತು. ಅದಕ್ಕೀಗ ಸಾಕ್ಷಿ ಸಿಕ್ಕಂತಾಗಿದೆ.
ಇತ್ತೀಚೆಗೆ ಶ್ರುತಿ ಹಾಸನ್ ತಮಿಳಿನಲ್ಲಿ ಸಂದರ್ಶನ ನೀಡಿದ್ದರು. ಇದರಲ್ಲಿ 'ವಾಲ್ತೇರು ವೀರಯ್ಯ' ಸಿನಿಮಾದ "ಶ್ರೀದೇವಿ ಚಿರು" ಹಾಡಿನ ಚಿತ್ರೀಕರಣದ ವೇಳೆ ಘಟನೆಯನ್ನು ಪುರುಚ್ಚರಿಸಿದ್ದಾರೆ. ಇದು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟಕ್ಕೂ ಶ್ರುತಿ ಹಾಸನ್ ಹೇಳಿದ್ದೇನು? ತಿಳಿಯಲು ಮುಂದೆ ಓದಿ.
'ಸ್ನೋ'ದಲ್ಲಿ ಸಾಂಗ್ ಶೂಟ್ ಯಾಕೆ?
'ವಾಲ್ತೇರು ವೀರಯ್ಯ' ಸಿನಿಮಾದ "ಶ್ರೀದೇವಿ ಚಿರು" ಹಾಡನ್ನು ಸ್ನೋ ಫಾಲ್ ಇರುವಲ್ಲಿ ಶೂಟ್ ಮಾಡಲಾಗಿತ್ತು. ಶ್ರುತಿ ಹಾಸನ್ ಸೀರೆಯುಟ್ಟು ಮಿಂಚಿದ್ರೆ, ಚಿರಂಜೀವಿ ಜಾಕೆಟ್ ತೊಟ್ಟು ರೊಮ್ಯಾಂಟಿಕ್ ಆಗಿ ಕಂಡಿದ್ದರು. ಈ ಹಾಡು ಪ್ರೇಕ್ಷಕರಿಗೆ ಇಷ್ಟ ಆಗಿದ್ದರೂ, ಶ್ರುತಿ ಹಾಸನ್‌ಗೆ ಇಷ್ಟ ಆಗಿರಲಿಲ್ಲ. ಅದ್ಯಾಕೆ ಅನ್ನೋದನ್ನೇ ಸಂದರ್ಶನದಲ್ಲಿ ವಿವರಿಸಿದ್ದಾರೆ.

"ನನಗೆ ಸ್ನೋದಲ್ಲಿ (ಹಿಮ) ಡ್ಯಾನ್ಸ್ ಮಾಡೋಕೆ ಇಷ್ಟವಿಲ್ಲ. ಹಿಮವಿದ್ದಲ್ಲಿ ಡ್ಯಾನ್ಸ್ ಮಾಡೋದು ತುಂಬಾನೇ ಕಷ್ಟ. ಹೀರೊಗಳಾದರೆ ಜಾಕೆಟ್ ಧರಿಸಬಹುದು. ಅದೇ ಹೀರೊಯಿನ್ ಆದರೆ, ಸೀರೆ, ರವಿಕೆ ಬಿಟ್ಟು ಬೇರೆ ಉಡುಪು ತೊಡುವಂತೆಯೇ ಇಲ್ಲ. ಜಾಕೆಟ್,ಶಾಲು, ಕೋಟ್ ಧರಿಸಬೇಡಿ ಅಂತಾರೆ. ಇಂತಹ ಹಾಡುಗಳನ್ನು ಶೂಟ್ ಮಾಡುವುದನ್ನು ನಿಲ್ಲಿಸಿ ಎಂದು ವ್ಯಂಗ್ಯ ಮಾಡಿದ್ದಾರೆ.
ಮೆಗಾಸ್ಟಾರ್ ಫ್ಯಾನ್ಸ್ ಕಿಡಿ
ಶ್ರುತಿ ಹಾಸನ್ ಈ ಸಂದರ್ಶನವನ್ನು ನೋಡುತ್ತಿದ್ದಂತೆ ಮೆಗಾಸ್ಟಾರ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಶ್ರುತಿ ಹಾಸನ್ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಈ ಮೂಲಕ ಚಿರಂಜೀವಿ ಹಾಗೂ ಶ್ರುತಿ ಹಾಸನ್ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ.
ಶ್ರುತಿ ಹಾಸನ್ 'ವಾಲ್ತೇರು ವೀರಯ್ಯ' ಪ್ರಚಾರದಲ್ಲಿಯೂ ಭಾಗಿಯಾಗಿರಲಿಲ್ಲ. ಆಗಲೇ ಟಾಲಿವುಡ್ ಅನುಮಾನವನ್ನು ವ್ಯಕ್ತಪಡಿಸಿತ್ತು. ಶ್ರುತಿ ಹಾಗೂ ಚಿರು ನಡುವೆ ಎಲ್ಲವೂ ಸರಿಯಿಲ್ಲ ಅಂತ ಗುಲ್ಲೆದ್ದಿತ್ತು. ಈಗ ಮತ್ತೆ ಶ್ರುತಿ ಹಾಸನ್ ಕೊಟ್ಟ ಹೇಳಿಕೆ ಗಾಯದ ಮೇಲೆ ತುಪ್ಪ ಸುರಿದಂತಾಗಿದೆ.
ಸಿನಿಮಾ ಬಿಡುಗಡೆ ವೇಳೆನೂ ಇದೇ ದೂರು
'ವಾಲ್ತೇರು ವೀರಯ್ಯ' ಹಾಗೂ 'ವೀರ ಸಿಂಹ ರೆಡ್ಡಿ' ಎರಡೂ ಸಿನಿಮಾಗಳೂ ಒಟ್ಟಿಗೆ ತರೆ ಕಂಡಿದ್ದವು. ಈ ವೇಳೆ ಸಂದರ್ಶನವೊಂದರಲ್ಲಿ ಶ್ರುತಿ ಹಾಸನ್ ಇದೇ ಹಾಡಿನ ಬಗ್ಗೆ ಕಮೆಂಟ್ ಮಾಡಿದ್ದರು. " ಅಂತ ತಂಪಾದ ಪ್ರವೇಶದಲ್ಲಿ ಸೀರೆಯುಟ್ಟು ಡ್ಯಾನ್ಸ್ ಮಾಡುವುದು ತುಂಬಾನೇ ಕಷ್ಟಕರ. ಇಂತಹ ಹಾಡಿನಲ್ಲಿ ನಾನು ಮುಂದೆಂದೂ ನಟಿಸಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದರು.

ಹಾಗೇ " ಇಂತಹ ಹಾಡುಗಳು ತುಂಬಾ ಮುಜುಗರ ತರುತ್ತವೆ. ದೈಹಿಕವಾಗಿ ಇಂತಹ ಹಾಡುಗಳು ಅಹಿತಕರವೆನಿಸುತ್ತೆ" ಎಂದು ಶ್ರುತಿ ಹಾಸನ್ ಹೇಳಿದ್ದರು. ಅಲ್ಲಿಂದ ಶ್ರುತಿ ಹಾಸನ್ 'ವಾಲ್ತೇರು ವೀರಯ್ಯ' ಸಿನಿಮಾದ ಪ್ರಚಾರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ, ಚಿರಂಜೀವಿ ಜೊತೆ ನಟಿಸಿದ್ದು, ಒಳ್ಳೆ ಅನುಭವ ಕೊಟ್ಟಿದೆ ಎಂದು ಹೇಳಿದ್ದರು.


Click it and Unblock the Notifications











