twitter
    For Quick Alerts
    ALLOW NOTIFICATIONS  
    For Daily Alerts

    ಮೆಗಾಸ್ಟಾರ್‌ಗೆ ಜಗನ್ ಸರ್ಕಾರದ ಪರ ಟ್ವೀಟ್ ಮಾಡಬೇಡಿ ಎಂದು ಪಟ್ಟು ಹಿಡಿದ ಚಿರಂಜೀವಿ ಫ್ಯಾನ್ಸ್

    |

    ಆಂಧ್ರದ ಜಗನ್ ಸರ್ಕಾರ ಸಿನಿಮಾಗಳ ಟಿಕೆಟ್ ದರವನ್ನು ಕಡಿತಗೊಳಿಸಿತ್ತು. ದಿನಕ್ಕೆ ನಾಲ್ಕು ಶೋಗಿಂತ ಹೆಚ್ಚು ನಿಶಿದ್ಧವೆಂಬ ನೀತಿಯನ್ನು ಜಾರಿಗೆ ತರಲಾಗಿತ್ತು. ಆಂಧ್ರ ಸರ್ಕಾರದ ಈ ನೀತಿಯನ್ನು ಟಾಲಿವುಡ್‌ನ ಸೆಲೆಬ್ರೆಟಿಗಳು ವಿರೋಧಿಸಿದ್ದರು. ಆಂಧ್ರದಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ಬಿಡುಗಡೆ ಮಾಡುವುದೇ ದೊಡ್ಡ ಸಮಸ್ಯೆಯಾಗಿತ್ತು. ಇನ್ನೊಂದು ಕಡೆ ಸರ್ಕಾರದ ಈ ನೀತಿಯ ವಿರುದ್ಧ ಕೆಲ ಸ್ಟಾರ್‌ಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ತೆಲುಗಿನ ಸ್ಟಾರ್ ನಟ ಜಗನ್ ಭೇಟಿ ಮಾಡಿದ್ದರು. ಈ ಭೇಟಿ ಯಶಸ್ವಿಯಾಗಿ ಈಗ ಸರ್ಕಾರ ಹೊಸ ಆರ್ಡರ್ ಅನ್ನು ಫಾಲೋ ಮಾಡುತ್ತಿದೆ.

    ಚಿರಂಜೀವಿ ಮುಂದಾಳತ್ವದಲ್ಲಿ ಟಾಲಿವುಡ್ ಸೂಪರ್‌ ಸ್ಟಾರ್ ಮಹೇಶ್ ಬಾಬು, ಪ್ರಭಾಸ್, ಹಾಗೂ ನಿರ್ದೇಶಕರಾದ ಎಸ್‌ಎಸ್ ರಾಜಮೌಳಿ, ಕೊರಟಾಲ ಶಿವ ಸೇರಿದಂತೆ ಫೆಬ್ರವರಿ 10 ರಂದು ಹೈದರಾಬಾದ್‌ನಿಂದ ವಿಜಯವಾಡಕ್ಕೆ ತೆರಳಿದ್ದರು. ಆಂಧ್ರ ಸಿ ಎಂ ಜಗನ್ ಭೇಟಿ ಮಾಡಿ ತಮಗಾಗುತ್ತಿರುವ ಸಮಸ್ಯೆಯನ್ನು ವಿವರಿಸಿದ್ದರು. ಆ ಭೇಟಿಯ ಪರಿಣಾಮ ಟಿಕೆಟ್ ಬೆಲೆ ಏರಿಸಲು ಹಾಗೂ ವಿಶೇಷ ಪ್ರದರ್ಶನಗಳಿಗೆ ಅವಕಾಶ ನೀಡಲಿದೆ ಎನ್ನಲಾಗಿದೆ. ಈ ವಿಷಯಕ್ಕೆ ಚಿತ್ರತಂಡ ಖುಷಿಯಾಗಿದ್ದರೆ, ಅತ್ತ ಇನ್ನೊಂದ್ಕಡೆ ಚಿರು ಫ್ಯಾನ್ಸ್ ಮಾತ್ರ ಹೊಸ ಆರ್ಡರ್ ಪಾಸ್ ಆದರೆ, ಟ್ವೀಟ್ ಮಾಡಬೇಡಿ ಎಂದು ಹೇಳುತ್ತಿದ್ದಾರೆ.

     ಜೇಮ್ಸ್ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ- ಜೂ.ಎನ್‌ಟಿಆರ್ ಗೆಸ್ಟ್ ಜೇಮ್ಸ್ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ- ಜೂ.ಎನ್‌ಟಿಆರ್ ಗೆಸ್ಟ್

     ಟ್ವೀಟ್ ಮಾಡದೆ ಇರಲು ಫ್ಯಾನ್ಸ್ ಒತ್ತಾಯ

    ಟ್ವೀಟ್ ಮಾಡದೆ ಇರಲು ಫ್ಯಾನ್ಸ್ ಒತ್ತಾಯ

    ಟಾಲಿವುಡ್ ತಾರೆಯರು ನೀಡಿದ ಸಲಹೆಯನ್ನು ಸಿ ಎಂ ಜಗನ್ ಒಪ್ಪಿಕೊಂಡಿದ್ದು, ಸಿನಿಮಾ ಟಿಕೆಟ್ ದರವನ್ನು ಹೆಚ್ಚಿಸಲು ಅನುಮತಿ ನೀಡಿ ಆದೇಶ ಹೊರಡಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇದೇ ಖುಷಿಯಲ್ಲಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿ, ಟ್ವೀಟ್ ಮಾಡಬೇಡಿ ಎಂದು ಫ್ಯಾನ್ಸ್ ಚಿರಂಜೀವಿಗೆ ಒತ್ತಡ ಹೇರುತ್ತಿದ್ದಾರಂತೆ. ಅಷ್ಟಕ್ಕೂ ಫ್ಯಾನ್ಸ್ ಟ್ವೀಟ್ ಮಾಡಬೇಡಿ ಎನ್ನುತ್ತಿರುವುದು ಏಕೆ? ಅಭಿಮಾನಿಗಳ ಒತ್ತಾಯಕ್ಕೆ ಚಿರು ಎಂದಿದ್ದೇನು? ತಿಳಿಯಲು ಮುಂದೆ ಓದಿ.

     'ಭೀಮ್ಲಾ ನಾಯಕ್' ಕಾರಣ

    'ಭೀಮ್ಲಾ ನಾಯಕ್' ಕಾರಣ

    ಚಿರಂಜೀವಿ ಅಭಿಮಾನಿಗಳು ಟ್ವೀಟ್ ಮಾಡದೆ ಇರುವಂತೆ ಒತ್ತಡ ಹೇರಲು ಬಲವಾದ ಕಾರಣವಿದೆ. ಅದು ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್. ಪವನ್ ಕಲ್ಯಾಣ್ ಹಾಗೂ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರಲ್ಲೂ ರಾಜಕೀಯ ಭಿನ್ನಾಭಿಪ್ರಾಯವಿದೆ. ಕಳೆದ ಕೆಲವು ದಿನಗಳಿಂದ ಪವನ್ ಕಲ್ಯಾಣ್ ನೇರವಾಗಿ ಜಗನ್ ಸರ್ಕಾರವನ್ನು ಟೀಕೆ ಮಾಡುತ್ತಲೇ ಇದ್ದಾರೆ. ಇದಕ್ಕೆ ಪವನ್ ಸಿನಿಮಾ 'ಭೀಮ್ಲಾ ನಾಯಕ್' ಬಿಡುಗಡೆಯಾಗುತ್ತಿದ್ದಂತೆ ಜಗನ್ ಸರ್ಕಾರ ಅದರ ಮೇಲೆ ಸೇಡು ತೀರಿಸಿಕೊಂಡಿದೆ ಎನ್ನುವುದು ಅಭಿಮಾನಿಗಳ ಆರೋಪ.

     'ಭೀಮ್ಲಾ ನಾಯಕ್' ನಷ್ಟಕ್ಕೆ ಬೇಸರ

    'ಭೀಮ್ಲಾ ನಾಯಕ್' ನಷ್ಟಕ್ಕೆ ಬೇಸರ

    ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಅಭಿನಯದ 'ಭೀಮ್ಲಾ ನಾಯಕ್' ಸಿನಿಮಾ ಕಳೆದ ತಿಂಗಳು ಫೆಬ್ರವರಿ ಕೊನೆವಾರದಲ್ಲಿ ಬಿಡುಗಡೆಯಾಗಿದೆ. ಚಿತ್ರತಂಡದ ಪ್ರಕಾರ, 'ಭೀಮ್ಲಾ ನಾಯಕ್' ಸಿನಿಮಾ 15 ಕೋಟಿ ನಷ್ಟ ಆಗಿದೆ. ಇದಕ್ಕೆ ಕಾರಣ, ಜಗನ್ ಸರ್ಕಾರದ ಹೊಸ ನೀತಿ ಎಂದು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಚಿರಂಜೀವಿಗೆ ಟ್ವೀಟ್ ಮಾಡದೆ ಇರುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

     ನಟನೆಯಲ್ಲಿ ಚಿರಂಜೀವಿ ಬ್ಯುಸಿ

    ನಟನೆಯಲ್ಲಿ ಚಿರಂಜೀವಿ ಬ್ಯುಸಿ

    ಮೆಗಾಸ್ಟಾರ್ ಚಿರಂಜೀವಿ ಸದ್ಯ ರಾಜಕೀಯದಿಂದ ಹೊರಗೆ ಉಳಿದಿದ್ದಾರೆ. ಚಿರಂಜೀವಿ ಸದ್ಯ ಕೊರಟಾಲ ಶಿವ ನಿರ್ದೇಶನದ 'ಆಚಾರ್ಯ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. 'ಆಚಾರ್ಯ' ಬಳಿಕ 'ಗಾಢ್‌ಫಾದರ್', 'ಭೋಲಾ ಶಂಕರ್' ಹಾಗೂ ಇನ್ನೂ ಹೆಸರಿಡದ ಸಿನಿಮಾದಲ್ಲಿ ಮೆಗಾಸ್ಟಾರ್ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಹೇಳಿಕೆ ನೀಡಿದಂತೆ ಸದ್ಯ ರಾಜಕೀಯದ ಕಡೆ ಚಿರಂಜೀವಿ ಮುಖ ಮಾಡುವುದಿಲ್ಲ. ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.

    English summary
    Chiranjeevi fans are requesting him not to tweet on new govt order ticket price. They are pointing out that Pawan Kalyan’s Bheemla Nayak lost close Rs 15 crores in AP due to the government’s revenge politics.
    Tuesday, March 8, 2022, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X