For Quick Alerts
  ALLOW NOTIFICATIONS  
  For Daily Alerts

  ಸಹೋದರನ ಮಗಳು ನಿಹಾರಿಕಾಗೆ ದುಬಾರಿ ಉಡುಗೊರೆ ನೀಡಿದ ನಟ ಚಿರಂಜೀವಿ

  |

  ಮೆಗಾ ಸ್ಟಾರ್ ಇಡೀ ಕುಟುಂಬ ಮದುವೆ ಸಂಭ್ರಮದಲ್ಲಿದ್ದಾರೆ. ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ, ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಕೊನಿಡೇಲ ಮದುವೆ ರಾಜಸ್ಥಾನದ ಉದಯ್ ಪುರದಲ್ಲಿ ನಡೆಯುತ್ತಿದೆ. ನಟಿ ನಿಹಾರಿಕಾ, ಚೈತನ್ಯ ಜೊನ್ನಲಗಡ್ಡ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  ಈಗಾಗಲೇ ಮದುವೆ ಪೂರ್ವ ಸಮಾರಂಭಗಳು ಅದ್ದೂರಿಯಾಗಿ ನಡೆೆದಿದ್ದು, ನಿಹಾರಿಕಾ ಮದುವೆಯ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೂರ್ನಾಲ್ಕು ದಿನಗಳಿಂದ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು, ಡಿಸೆಂಬರ್ 7ರಂದು ಸಂಗೀತ ಕಾರ್ಯಕ್ರಮ, ಡಿಸೆಂಬರ್ 8ರಂದು ಮೆಹಂದಿ ಮತ್ತು ಅರಿಶಿಣ ಶಾಸ್ತ್ರ ಸಮಾರಂಭವನ್ನು ಅದ್ದೂರಿಯಾಗಿ ಮಾಡಲಾಗಿದೆ. ನಿಹಾರಿಕಾ ಮದುವೆ ಸಮಾರಂಭದಲ್ಲಿ ಮೆಗಾ ಇಡೀ ಕುಟುಂಬ ಹಾಜರಿದ್ದು, ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾಗೆ ದೊಡ್ಡಪ್ಪ ಚಿರಂಜೀವಿ ನೀಡಿರುವ ದುಬಾರಿ ಗಿಫ್ಟ್ ಸುದ್ದಿ ವೈರಲ್ ಆಗಿದೆ.

  ಮದುವೆ ಸಂಭ್ರಮದಲ್ಲಿ ಮೆಗಾಸ್ಟಾರ್ ಕುಟುಂಬ; ನಿಹಾರಿಕಾ ಮೆಹಂದಿ ಶಾಸ್ತ್ರದ ಫೋಟೋ ವೈರಲ್

  2 ಕೋಟಿ ಬೆಲೆಬಾಳುವ ನೆಕ್ಲೇಸ್ ಗಿಫ್ಟ್ ಮಾಡಿದ ಚಿರಂಜೀವಿ

  2 ಕೋಟಿ ಬೆಲೆಬಾಳುವ ನೆಕ್ಲೇಸ್ ಗಿಫ್ಟ್ ಮಾಡಿದ ಚಿರಂಜೀವಿ

  ಮೆಗಾಸ್ಟಾರ್ ಕುಟುಂಬದ ಮುದ್ದಿನ ಮಗಳು ನಿಹಾರಿಕಾಗೆ ನಟ ಚಿರಂಜೀವಿ ದುಬಾರಿ ಗಿಫ್ಟ್ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. 2 ಕೋಟಿ ಬೆಲೆಬಾಳುವ ವಿಶೇಷವಾಗಿ ವಿನ್ಯಾಸ ಮಾಡಿಸಿರುವ ಡೈಮಂಡ್ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಚಿರಂಜೀವಿ ಮತ್ತು ಪತ್ನಿ ಸುರೇಖಾ ಉಡುಗೊರೆ ನೀಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾತ್ತಿದೆ.

  ಉದಯ್ ಪುರದಲ್ಲಿ ಮದುವೆ

  ಉದಯ್ ಪುರದಲ್ಲಿ ಮದುವೆ

  ನಿಹಾರಿಕಾ ಮತ್ತು ಚೈತನ್ ಮದುವೆ ರಾಜಸ್ಥಾನದ ಉದಯ್ ಪುರದಲ್ಲಿ ನಡೆಯುತ್ತಿದೆ. ಮದುವೆಗೆ ಮೆಗಾಸ್ಟಾರ್ ಕುಟುಂಬ ಮೂರು ದಿನಗಳ ಮುಂಚಿತವಾಗಿಯೇ ತೆರಳಿದ್ದಾರೆ. ಖಾಸಗಿ ವಿಮಾನದಲ್ಲಿ ಉದಯ್ ಪುರಕ್ಕೆ ತೆರಳಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಾಜಸ್ಥಾನದ ಉದಯ್ ವಿಲಾಸ ಅರಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

  ನಿಹಾರಿಕಾ ಮದುವೆ: ಚಿರಂಜೀವಿ ಭಾವುಕ ಟ್ವೀಟ್

  ಚಿರಂಜೀವಿ ಭಾವುಕ ಪೋಸ್ಟ್

  ಚಿರಂಜೀವಿ ಭಾವುಕ ಪೋಸ್ಟ್

  ನಟಿ ಚಿರಂಜೀವಿಗೆ ನಿಹಾರಿಕಾ ಎಂದರೆ ತುಂಬಾ ಇಷ್ಟ. ಮುದ್ದಾಗಿ ಬೆಳೆಸಿದ ಮಗಳನ್ನು ಮದುವೆ ಮಾಡಿ ಕೊಡುತ್ತಿರುವ ಕುಟುಂಬಕ್ಕೆ ತುಂಬಾ ಭಾವುಕ ಕ್ಷಣ. ನಟ ಚಿರಂಜೀವಿ ತೋಳಲ್ಲಿ ಇರುವ ಪುಟ್ಟ ನಿಹಾರಿಕಾಳ ಫೋಟೋವನ್ನು ಶೇರ್ ಮಾಡಿ, 'ನನ್ನ ಕೈಯಲ್ಲಿ ಬೆಳೆದ ಚಿನ್ನಾರಿ ನಿಹಾರಿಕಾಳನ್ನು, ಚೈತನ್ಯ ಕೈಗೆ ನೀಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಅಮ್ಮನ ನಿಶ್ಚಿತಾರ್ಥದ ಸೀರೆಯಲ್ಲಿ ಮಿಂಚಿದ ಮದುಮಗಳು ನಿಹಾರಿಕಾ

  8 ವರ್ಷದ ಕನಸು ನನಸು ಮಾಡಿಕೊಂಡ ಅಕ್ಷತಾ ಪಾಂಡವಪುರ | Filmibeat kannada
  ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಜ್ ಚರಣ್

  ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಜ್ ಚರಣ್

  ನಿಹಾರಿಕಾ ಮದುವೆಯಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಒಂದಾಗಿದೆ. ಚಿರಂಜೀವಿ ಕುಟುಂಬ, ಪವನ್ ಕಲ್ಯಾಣ್ ಕುಟುಂಬ, ಅಲ್ಲು ಅರ್ಜುನ್ ತಂದೆ, ಸಹೋದರ, ರಾಮ್ ಚರಣ್ ದಂಪತಿ ಸೇರಿದಂತೆ ಇಡೀ ಕುಟುಂಬ ನಿಹಾರಿಕಾ ಮದುವೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

  English summary
  Actor Chiranjeevi and his wife gift to Niharika a specially crafted diamond necklace worth Rs 2 Crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X