ಅಮಿತಾಭ್ ಬಚ್ಚನ್ ಹುಟ್ಟುಹಬ್ಬಕ್ಕೆ ಚಿರಂಜೀವಿ, ಪ್ರಭಾಸ್, ಮಹೇಶ್ ಬಾಬು ವಿಶ್
ಭಾರತೀಯ ಸಿನಿಮಾರಂಗದ ದಿಗ್ಗಜ ಕಲಾವಿದ ಅಮಿತಾಭ್ ಬಚ್ಚನ್ ಅಂದ್ರೆ ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಬಹಳ ಗೌರವ ಹಾಗೂ ಬಹಳ ಪ್ರೀತಿ. ಅಮಿತಾಭ್ ಅವರಿಗೂ ಅಷ್ಟೇ ಚಿರಂಜೀವಿ ಅಷ್ಟೇ ಅಭಿಮಾನ.
'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಚಿರಂಜೀವಿ ಅವರ ಗುರು ಪಾತ್ರವನ್ನು ಬಿಗ್ ಬಿ ಅವರಿಂದಲೇ ಮಾಡಿಸಬೇಕು ಎಂದು ನಿರ್ದೇಶಕ ಸುರೇಂದರ್ ರೆಡ್ಡಿ ಹಠ ಹಿಡಿದಿದ್ದರು. ಕೇಳುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದ ಚಿರಂಜೀವಿ, ''ಗುರುಗಳೇ, ನನಗೋಸ್ಕರ ಸೈರಾದಲ್ಲಿ ಒಂದು ಪಾತ್ರ ಮಾಡಬೇಕು, ಅದು ನಿಮಗೆ ಅಂತಾನೇ ಮಾಡಿರುವುದು ಅಂದಾಗ, ನೀನು ನನ್ನನ್ನು ಕೇಳಬೇಕಾ, ಹೇಳಿದ್ರೆ ಸಾಕು ಮಾಡ್ತೀನಿ'' ಎಂದು ಖುಷಿಯಿಂದ ಪಾತ್ರ ಮಾಡಿಕೊಟ್ಟಿದ್ದರು. ಅಂತಹ ಆತ್ಮೀಯತೆ ಇಬ್ಬರಲ್ಲೂ ಇದೆ. ಇಂತಹ ನೆಚ್ಚಿನ ನಟನಿಗೆ ಚಿರಂಜೀವಿ ಶುಭಕೋರಿದ್ದಾರೆ. ಮುಂದೆ ಓದಿ...

ಭಾರತೀಯ ಚಿತ್ರರಂಗದ ಬಿಗ್ ಬಿ
''ನನ್ನ ಪ್ರೀತಿಯ ದೊಡ್ಡ ಅಣ್ಣ...ಭಾರತೀಯ ಚಿತ್ರರಂಗದ ಬಿಗ್ ಬಿ. ಪ್ರತಿಭೆಗಳಿಗೆ ಪವರ್ ಹೌಸ್ ನೀವು. ನನ್ನ ಗುರುಗಳಾದ ಅಮಿತಾಭ್ ಬಚ್ಚನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಪ್ರತಿಭೆಯಿಂದ ಪ್ರೇಕ್ಷಕರನ್ನು ರಂಜಿಸುವುದನ್ನು ಮುಂದುವರಿಸಲಿ ಮತ್ತು ಸದಾ ನಮಗೆ ಸ್ಫೂರ್ತಿ ನೀಡುತ್ತಿರಲಿ'' ಎಂದು ವಿಶ್ ಮಾಡಿದ್ದಾರೆ.

ನಮಗೆ ಸದಾ ಸ್ಫೂರ್ತಿ ನೀಡುತ್ತೀರಿ
ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸಹ ಅಮಿತಾಭ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ''ನಮಗೆ ಸದಾ ಸ್ಫೂರ್ತಿ ನೀಡುತ್ತೀರಿ. ಹೀಗೆ, ಇನ್ನು ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ನಿಮ್ಮ ಕಲಾಸೇವೆ ಮುಂದುವರಿಯಲಿ'' ಎಂದು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಮತ್ತು ಸಂತೋಷ ಸದಾ ಇರಲಿ
''ಹ್ಯಾಪಿ ಬರ್ತಡೇ ಅಮಿತಾಭ್ ಬಚ್ಚನ್ ಸರ್. ನನಗೂ ಹಾಗೂ ಜಗತ್ತಿನ ಲಕ್ಷಾಂತರ ಜನರಿಗೆ ಸ್ಫೂರ್ತಿ. ನಿಮ್ಮ ಆರೋಗ್ಯ ಮತ್ತು ಸಂತೋಷ ಸದಾ ಇರಲಿ'' ಎಂದು ಪ್ರಿನ್ಸ್ ಮಹೇಶ್ ಬಾಬು ಶುಭಾಶಯ ತಿಳಿಸಿದ್ದಾರೆ.
Recommended Video

ಡಾರ್ಲಿಂಗ್ ಪ್ರಭಾಸ್
''ಇಂತಹ ಹುಟ್ಟುಹಬ್ಬಗಳನ್ನು ಮತ್ತಷ್ಟು ಬಾರಿ ಆಚರಿಸಿಕೊಳ್ಳಬೇಕು. ನೀವು ನಮ್ಮೆಲ್ಲರಿಗೂ ಸ್ಫೂರ್ತಿ'' ಎಂದು ನಟ ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ವಿಶ್ ಮಾಡಿದ್ದಾರೆ. ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟಿಸಲಿರುವ ಮುಂದಿನ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಸಹ ನಟಿಸುತ್ತಿದ್ದಾರೆ.


Click it and Unblock the Notifications











