'ದೇಶದ ನಂಬರ್ 1 ನಟ': ಚಿರಂಜೀವಿ ಹೊಗಳಿದ್ದು ಯಾವ ನಟನನ್ನು?

ದೇಶದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಚಿರಂಜೀವಿ ಸಹ ಒಬ್ಬರು. ವಯಸ್ಸು 65 ಆಗಿದ್ದರೂ ಈಗಲೂ ಡಾನ್ಸ್, ಫೈಟ್ ದೃಶ್ಯಗಳಲ್ಲಿ ಯುವಕರನ್ನು ನಾಚಿಸುತ್ತಾರೆ ಚಿರಂಜೀವಿ.

ಹಲವು ದಶಕಗಳಿಂದ ದೇಶದ ಟಾಪ್ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಚಿರಂಜೀವಿ ನಟರೊಬ್ಬರನ್ನು 'ದೇಶದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ನಟ' ಎಂದು ಹೊಗಳಿದ್ದಾರೆ.

ನಟರು ಇತರ ನಟರನ್ನು ಹೊಗಳುವುದು ಕಡಿಮೆ, ಅದರಲ್ಲೂ ಚಿರಂಜೀವಿ ಅಂಥಹಾ ಮೇರು ನಟರು ನಟನೊಬ್ಬನನ್ನು 'ದೇಶದ ಅತ್ಯುತ್ತಮ' ನಟ ಎಂದು ಹೊಗಳಿದ್ದಾರೆಂದರೆ ಅದು ಸಾಮಾನ್ಯ ವಿಷಯವಂತೂ ಖಂಡಿತ ಅಲ್ಲ.

ಚಿರಂಜೀವಿ ಅವರು ಹೀಗೆ ಮನಸಾರೆ ಹೊಗಳಿರುವ ನಟ ಮತ್ತಾರು ಅಲ್ಲ, ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ. ತಮ್ಮ ಅತ್ಯದ್ಭುತ ಅಭಿನಯದಿಂದ ಕೋಟ್ಯಂತರ ಮನಸ್ಸನ್ನು ಸೂರಿಗೊಂಡಿದ್ದಾರೆ ನಟ ವಿಜಯ್ ಸೇತುಪತಿ.

'ಉಪ್ಪೆನ' ಸಿನಿಮಾದ ಕಾರ್ಯಕ್ರಮದಲ್ಲಿ ಮಾತು

'ಉಪ್ಪೆನ' ಸಿನಿಮಾದ ಕಾರ್ಯಕ್ರಮದಲ್ಲಿ ಮಾತು

ನಟ ವಿಜಯ್ ಸೇತುಪತಿ ನಟನೆ 'ಉಪ್ಪೆನ' ಸಿನಿಮಾದ 'ಪ್ರೀ ರಿಲೀಜ್' ಕಾರ್ಯಕ್ರಮ ಇತ್ತೀಚೆಗಷ್ಟೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಚಿರಂಜೀವಿ, ವಿಜಯ್ ಸೇತುಪತಿ ಅವರನ್ನು ಬಹುವಾಗಿ ಹೊಗಳಿದರು. 'ಮಾನವೀಯತೆ ಉಳ್ಳ ವ್ಯಕ್ತಿ. ಇಷ್ಟು ಖ್ಯಾತಿ, ಹಣವಿದ್ದರೂ ಸರಳವಾಗಿ ಬದುಕುವ ವ್ಯಕ್ತಿ ವಿಜಯ್ ಸೇತುಪತಿ' ಎಂದರು ಚಿರಂಜೀವಿ.

ಲೀಲಾಜಾಲವಾಗಿ ನಟಿಸುತ್ತಾರೆ ವಿಜಯ್ ಸೇತುಪತಿ: ಚಿರು

ಲೀಲಾಜಾಲವಾಗಿ ನಟಿಸುತ್ತಾರೆ ವಿಜಯ್ ಸೇತುಪತಿ: ಚಿರು

'ದೇಶದ ಅತ್ಯದ್ಭುತ ನಟ ವಿಜಯ್ ಸೇತುಪತಿ. ತಮಿಳಿನಲ್ಲಿ ಹಲವರು ಸಿನಿಮಾಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಆದರೆ ಅವರಿಗೆ ತಾವು ನಾಯಕ ಪಾತ್ರದಲ್ಲಿಯೇ ನಟಿಸಬೇಕು ಎಂಬ ಹಂಬಲ ಇಲ್ಲ. ಬದಲಿಗೆ ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ. ಎಂಥಹಾ ಪಾತ್ರವಾದರೂ ಸರಿಯೇ ಅದನ್ನು ಲೀಲಾಜಾಲವಾಗಿ ನಿರ್ವಹಿಸುತ್ತಾರೆ ವಿಜಯ್ ಸೇತುಪತಿ' ಎಂದು ಹೊಗಳಿದ್ದಾರೆ ಚಿರಂಜೀವಿ.

ಜಾರ್ಜಿಯಾದಲ್ಲಿ ನಡೆದ ಘಟನೆ ಮೆಲಕು ಹಾಕಿದ ಚಿರಂಜೀವಿ

ಜಾರ್ಜಿಯಾದಲ್ಲಿ ನಡೆದ ಘಟನೆ ಮೆಲಕು ಹಾಕಿದ ಚಿರಂಜೀವಿ

'ಸೈರಾ ನರಸಿಂಹ ರೆಡ್ಡಿ' ಸಿನಿಮಾದ ಚಿತ್ರೀಕರಣವನ್ನು 'ಜಾರ್ಜಿಯಾ'ನಲ್ಲಿ ಮಾಡುತ್ತಿದ್ದೆವು. ಆಗ ಅಲ್ಲಿ ನಾವು ತಂಗಿದ್ದ ಹೋಟೆಲ್‌ ರಿಸೆಪ್ಶನ್‌ನಲ್ಲಿ ಗದ್ದಲ ಆರಂಭವಾಯಿತು. ಏನಪ್ಪಾ ಇಲ್ಲಿಯೂ ಅಭಿಮಾನಿಗಳ ಗಲಾಟೆ ಎಂದು ಕೊಂಡು ಕೆಳಗೆ ಹೋಗೋಣ ಎಂದುಕೊಂಡೆ. ಆ ವೇಳೆಗೆ ವಿಜಯ್ ಸೇತುಪತಿ ಅಭಿಮಾನಿಗಳೊಟ್ಟಿಗೆ ಮಾತನಾಡುತ್ತಿದ್ದರು. ಅಭಿಮಾನಿಗಳು ವಿಜಯ್ ಸೇತುಪತಿಯನ್ನು ನೋಡದೇ ವಾಪಸ್ ಹೋಗುವುದಿಲ್ಲ ಎಂದು ಗಲಾಟೆ ಮಾಡುತ್ತಿದ್ದರಂತೆ. ವಿಜಯ್ ಸೇತುಪತಿಗೆ ಎಲ್ಲೆಲ್ಲಿಯೂ ಅಭಿಮಾನಿಗಳು ಇದ್ದಾರೆ' ಎಂದರು ಚಿರಂಜೀವಿ.

Recommended Video

ಸಲಾರ್ ಗೆ ಎಂಟ್ರಿ ಕೊಟ್ಟ ಕನ್ನಡದ ಸ್ಟಾರ್ ವಿಲನ್ | Filmibeat Kannada
ಮಾಸ್ಟರ್ ಸಿನಿಮಾದ ಭವಾನಿ ನನ್ನ ಅಚ್ಚು-ಮೆಚ್ಚು: ಚಿರಂಜೀವಿ

ಮಾಸ್ಟರ್ ಸಿನಿಮಾದ ಭವಾನಿ ನನ್ನ ಅಚ್ಚು-ಮೆಚ್ಚು: ಚಿರಂಜೀವಿ

'ಇತ್ತೀಚೆಗೆ 'ಮಾಸ್ಟರ್' ಸಿನಿಮಾ ನೋಡಿದೆ. ಸಿನಿಮಾದಲ್ಲಿ ಭವಾನಿ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಭವಾನಿ ಪಾತ್ರದ ಮೂಲಕ ನಾಯಕ ನಟನ ಪಾತ್ರ ಸಪ್ಪೆ ಆಗುವಂತೆ ಮಾಡಿಬಿಟ್ಟಿದ್ದಾರೆ. ಭವಾನಿ ಪಾತ್ರ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ ಚಿರಂಜೀವಿ. 'ನನ್ನ್ ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಸಹ ನಟಿಸಿದ್ದಾರೆ ವಿಜಯ್ ಸೇತುಪತಿ. ಪಾತ್ರ ದೊಡ್ಡದು-ಚಿಕ್ಕದು ಎಂಬುದನ್ನೆಲ್ಲಾ ಯೋಚಿಸದೇ, ಚಿರಂಜೀವಿ ಕೇಳಿದ್ದಾರೆ ಎಂಬ ಕಾರಣಕ್ಕೆ ಬಂದು ಕಡಿಮೆ ಅವಧಿಯಲ್ಲಿಯೇ ನಟಿಸಿದ್ದಾರೆ ಎಂದರು ಚಿರಂಜೀವಿ.

More from Filmibeat

English summary
Megastar Chiranjeevi praised actor Vijay Sethupathi in Uppena movie pre release event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X