ಚಿರಂಜೀವಿ-ರಾಮ್ ಚರಣ್ ಸಿನಿಮಾ 'ಆಚಾರ್ಯ' ಬಿಡುಗಡೆ ಮುಂದೂಡಿಕೆ

ನಟ ಚಿರಂಜೀವಿ ಹಾಗೂ ಪುತ್ರ ರಾಮ್ ಚರಣ್ ಒಟ್ಟಿಗೆ ನಟಿಸುತ್ತಿರುವ 'ಆಚಾರ್ಯ' ಸಿನಿಮಾದ ಬಿಡುಗಡೆ ಮುಂದಿನ ತಿಂಗಳು (ಮೇ 13) ಆಗಲಿಕ್ಕಿತ್ತು. ಆದರೆ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ ಚಿತ್ರತಂಡ.

ರಾಮ್ ಚರಣ್ ಸಹ ನಿರ್ಮಾಪಕರಾಗಿರುವ 'ಆಚಾರ್ಯ' ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಚಿರಂಜೀವಿ ನಾಯಕರಾಗಿರುವ ಈ ಸಿನಿಮಾದಲ್ಲಿ ರಾಮ್ ಚರಣ್ ಅತಿಥಿ ಪಾತ್ರದಲ್ಲದೆ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾವು ಮೇ 13 ರಂದು ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಘೋಷಿಸಿ ಆಗಿತ್ತು. ಸಿನಿಮಾದ ಕೆಲವು ಪ್ರೋಮೋಗಳು ಟೀಸರ್‌ಗಳನ್ನು ಸಹ ಬಿಡುಗಡೆ ಮಾಡಲಾಗಿತ್ತು. ಆದರೆ ಕೊರೊನಾ ಪ್ರಕರಣಗಳು ದೇಶದಾದ್ಯಂತ ಹೆಚ್ಚಾಗುತ್ತಿದ್ದು ಬಹುತೇಕ ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿರುವ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.

 Chiranjeevi-Ram Charans Acharya Movie Release Postponed

ರಾಮ್‌ ಚರಣ್ ಕೋನಿಡೇಲ ಪ್ರೊಡಕ್ಷನ್‌ ಕಂಪೆನಿ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದ್ದು, 'ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರವಾಗಿ ಹೇಳುತ್ತೇವೆ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಅಂತರ ಕಾಪಾಡಿ ಸುರಕ್ಷಿತವಾಗಿರಿ' ಎಂದು ಟ್ವೀಟ್ ಮಾಡಲಾಗಿದೆ.

'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ಎದುರಿಗೆ ನಾಯಕಿಯಾಗಿ ನಟಿ ಕಾಜಲ್ ಅಗರ್ವಾಲ್ ನಟಿಸಿದ್ದಾರೆ. ಸಿನಿಮಾದಲ್ಲಿ ಸೋನು ಸೂದ್ ಖಳನ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಆಚಾರ್ಯ' ಸಿನಿಮಾಕ್ಕಾಗಿ ಏಷ್ಯಾದಲ್ಲಿ ಅತಿ ದೊಡ್ಡ ಸೆಟ್‌ ಅನ್ನು ನಿರ್ಮಿಸಲಾಗಿತ್ತು.

'ಆಚಾರ್ಯ' ಮಾತ್ರವೇ ಅಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಕನ್ನಡದಲ್ಲಿ ಸಲಗ, ಕೋಟಿಗೊಬ್ಬ 3, ಭಜರಂಗಿ 3 ಇನ್ನೂ ಕೆಲವು ಸಿನಿಮಾಗಳ ಬಿಡುಗಡೆ ಆಗುವುದಿತ್ತು ಅವೆಲ್ಲವೂ ಮುಂದೂಕ್ಕೆ ಹೋಗಿವೆ.

Recommended Video

ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡ ಜಗ್ಗೇಶ್ | Filmibeat Kannada

ಇನ್ನು ಮೆಗಾಸ್ಟಾರ್ ಚಿರಂಜೀವಿ ಅವರು ವೈಯಕ್ತಿಕವಾಗಿ ಕೊರೊನಾದಿಂದ ನಷ್ಟ ಅನುಭವಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಚಿರಂಜೀವಿ ಅವರ ವ್ಯಾನಿಟಿ ವ್ಯಾನ್‌ ಚಾಲಕ ಕೊರೊನಾದಿಂದ ಮೃತಪಟ್ಟಿದ್ದಾರೆ. ಚಿರಂಜೀವಿ ಸಹೋದರ ಪವನ್‌ ಕಲ್ಯಾಣ್ ಅವರಿಗೂ ಕೊರೊನಾ ಆಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರಿಗೆ ನೆಗೆಟಿವ್ ವರದಿ ಬಂದಿದೆ.

More from Filmibeat

English summary
Actor Chiranjeevi and Ram Charan's movie Acharya release postponed. Previously its scheduled to release on May 13.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X