ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಒಂದು ಸಿಹಿಸುದ್ದಿ, ಮತ್ತೊಂದು ಕಹಿಸುದ್ದಿ

ಚಿರಂಜೀವಿ. ಭಾರತೀಯ ಚಿತ್ರರಂಗದ ದಿಗ್ಗಜ ನಟ. ದಶಕಗಳಿಂದ ತೆಲುಗು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿರುವ ಹೀರೊ. ತನ್ನದೇ ಸ್ವಂತ ಪರಿಶ್ರಮದಿಂದ ಬಣ್ಣದಲೋಕದಲ್ಲಿ ಛಾಪು ಮೂಡಿಸಿದವರು ಚಿರಂಜೀವಿ. 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮೆಗಾಸ್ಟಾರ್ ಪಟ್ಟಕ್ಕೇರಿದ್ದಾರೆ.

ತಮ್ಮ ಡ್ಯಾನ್ಸ್, ವಿಭಿನ್ನ ಮ್ಯಾನರಿಸಂ ಹಾಗೂ ನಟನೆಯಿಂದ ಚಿರಂಜೀವಿ ಮೋಡಿ ಮಾಡಿದವರು. ಪೊಲೀಸ್ ಕಾನ್ಸ್‌ಸ್ಟೇಬಲ್ ಮಗನಾದ ಶಂಕರ ವರಪ್ರಸಾದ್ ಮುಂದೆ ಚಿರಂಜೀವಿ ಎಂದು ಹೆಸರು ಬದಲಿಸಿಕೊಂಡು ಚಿತ್ರರಂಗಕ್ಕೆ ಬಂದರು. ಸಹ ಕಲಾವಿದ, ವಿಲನ್ ಹೀಗೆ ಸಣ್ಣ ಪಾತ್ರಗಳನ್ನು ಮಾಡುತ್ತಾ ಮುಂದೆ ಹೀರೋ ಆಗಿ ಬಡ್ತಿ ಪಡೆದಿದ್ದರು. ತಮ್ಮ ಅದ್ಭುತ ಡ್ಯಾನ್ಸ್‌ನಿಂದ ತೆಲುಗು ಪ್ರೇಕ್ಷಕರ ಹೃದಯಕ್ಕೆ ಲಗ್ಗೆ ಇಟ್ಟರು.

Chiranjeevi receives Guinness World Record for dance and he also suffering from chikungunya

ಚಿರಂಜೀವಿ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗೆ ಸಾಕಷ್ಟು ಪ್ರಶಸ್ತಿ ಗೌರವಗಳು ದಕ್ಕಿದೆ. ಇದೇ ವರ್ಷ ಕೇಂದ್ರ ಸರ್ಕಾರದಿಂದ ಪದ್ಮವಿಭೂಷಣ ಗೌರವವೂ ಸಿಕ್ಕಿತ್ತು. ಇದೀಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಚಿರಂಜೀವಿ ಹೆಸರು ದಾಖಲಾಗಿದೆ. ಹೈದರಾಬಾದ್‌ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇದನ್ನು ಪ್ರಕಟಿಸಲಾಯಿತು. ಬಾಲಿವುಡ್ ನಟ ಅಮೀರ್ ಖಾನ್ ಸಮ್ಮುಖದಲ್ಲಿ ಚಿರಂಜೀವಿ ಅವರಿಗೆ ಗಿನ್ನಿಸ್ ಪ್ರತಿನಿಧಿ ರಿಚರ್ಡ್ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ನಟ ಚಿರಂಜೀವಿಗೆ ವಯಸ್ಸು 60 ದಾಟಿದೆ. ಇವತ್ತಿಗೂ ಯುವ ನಟರನ್ನು ನಾಚಿಸುವಂತೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ತಮ್ಮ ಅದ್ಭುತ ಡ್ಯಾನ್ಸ್‌ನಿಂದ ಹುಬ್ಬೇರಿಸುತ್ತಾ ಬರುತ್ತಿದ್ದಾರೆ. ಚಿರು ನಟಿಸಿರುವ 156 ಚಿತ್ರಗಳಲ್ಲಿ 537 ಹಾಡುಗಳಲ್ಲಿ 24000 ಸ್ಟೆಪ್ಸ್ ಹಾಕುವ ಮೂಲಕ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರು ನಮೂದಿಸಿದ್ದಾರೆ. ಮೆಗಾಸ್ಟಾರ್ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಜಾಗ ಮಾಡಿಕೊಂಡಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

46 ವರ್ಷಗಳಿಂದ ಚಿರಂಜೀವಿ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಡ್ಯಾನ್ಸ್ ಅವರ ಚಿತ್ರಗಳ ಪ್ರಮುಖ ಆಕರ್ಷಣೆ. ತಮ್ಮ ಸಿನಿಮಾಗಳಲ್ಲಿ ಚಿರು ವಿಭಿನ್ನ ಡ್ಯಾನ್ಸ್ ಮೂಲಕ ಟ್ರೆಂಡ್ ಹುಟ್ಟು ಹಾಕಿದರು. ತೆಲುಗು ಸಿನಿಮಾಗಳಲ್ಲಿ ಮೆಗಾಸ್ಟಾರ್ ಎಂಟ್ರಿಗೂ ಮುನ್ನ ಡ್ಯಾನ್ಸ್ ಬೇರೆ ರೀತಿ ಇರುತ್ತಿತ್ತು. ಅವರು ಅದಕ್ಕೆ ಹೊಸ ರೂಪ ಕೊಟ್ಟರು. ಅವತ್ತಿನ ಕಾಲಕ್ಕೆ ಬ್ರೇಕ್ ಡ್ಯಾನ್ಸ್ ಸೇರಿದಂತೆ ವಿಭಿನ್ನ ಸ್ಟೈಲ್ ಪರಿಚಯಿಸಿದ್ದರು.

Chiranjeevi receives Guinness World Record for dance and he also suffering from chikungunya

ಪ್ರೇಕ್ಷಕರಿಗೆ ಹೊಸತನ್ನು ಕೊಡಬೇಕು ಎಂದು ಪರಿತಪಿಸುತ್ತಿದ್ದ ಚಿರಂಜೀವಿ ಹೊಸ ಹೊಸ ಡ್ಯಾನ್ಸ್ ಮೂವ್ಸ್ ಹುಡುಕಾಟದಲ್ಲಿದ್ದರು. ವಿದೇಶಕ್ಕೆ ಹೋದಾಗ ಅಲ್ಲಿನ ಡ್ಯಾನ್ಸ್ ವೀಡಿಯೋ ಕ್ಯಾಸೆಟ್ ತಂದು ಅದನ್ನು ನೋಡಿ ಕೊರಿಯೋಗ್ರಫರ್‌ಸ್‌ ತೋರಿಸಿ ಅಂತಹ ಡ್ಯಾನ್ಸ್ ತಮ್ಮ ಸಿನಿಮಾಗಳಲ್ಲಿ ಮಾಡುತ್ತಿದ್ದರು. ಇವತ್ತು ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಡ್ಯಾನ್ಸರ್ಸ್ ಇರಬಹುದು. ಆದರೆ ದಶಕಗಳ ಹಿಂದೆಯೇ ಡ್ಯಾನ್ಸ್‌ ಅನ್ನು ಮುಖ್ಯ ಎಂದು ಪರಿಗಣಿಸಿ ಅದರಲ್ಲಿ ಪ್ರಯೋಗಗಳನ್ನು ಮಾಡಿದವರು ಚಿರಂಜೀವಿ.

ಇನ್ನು ನಟ ಚಿರಂಜೀವಿ ಚಿಕುನ್ ಗುನ್ಯಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. ಮೈಕೈ ನೋವಿನ ನಡುವೆಯೇ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಗೌರವವನ್ನು ಸ್ವೀಕರಿಸಿದ್ದಾರೆ. ನೆಚ್ಚಿನ ನಟ ಚಿಕುನ್ ಗುನ್ಯಾ ಸಮಸ್ಯೆಯಿಂದ ಬಳಲುತ್ತಿರುವ ವಿಷಯ ಗೊತ್ತಾಗಿ ಅಭಿಮಾನಿಗಳು ಆತಂಕಗೊಂಡಿದ್ದಾರೆ.

ಗಿನ್ನಿಸ್ ಬುಕ್ ರೆಕಾರ್ಡ್ಸ್ ಗೌರವ ಸ್ವೀಕರಿಸಿ ಚಿರಂಜೀವಿ ಮಾತನಾಡಿದ್ದಾರೆ. "ಗಿನ್ನಿಸ್ ದಾಖಲೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಇದಕ್ಕೆಲ್ಲಾ ಕಾರಣ ನನ್ನ ಸಿನಿಮಾಗಳ ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳು. ನನಗೆ ಡ್ಯಾನ್ಸ್‌ ಮೇಲಿನ ಆಸಕ್ತಿಯೇ ಗಿನ್ನಿಸ್ ಗೌರವ ಸಿಗಲು ಕಾರಣವಾಯಿತು. ಆಮೀರ್ ಖಾನ್ ಬಂದಿದ್ದಕ್ಕೆ ಈ ಕಾರ್ಯಕ್ರಮ ರಂಗೇರಿದೆ. ಒಂದು ಕರೆ, ಮೆಸೇಜ್ ಅಷ್ಟೇ ಮಾಡಿದ್ದು, ಅವರು ಇಲ್ಲಿಗೆ ಬಂದಿದ್ದಕ್ಕೆ ಧನ್ಯವಾದ" ಎಂದು ಚಿರು ಹೇಳಿದ್ದಾರೆ.

"ಬಾಲ್ಯದಲ್ಲಿ ನಾನು ನಮ್ಮ ಸುತ್ತಮುತ್ತಲಿನ ಜನರನ್ನು ರಂಜಿಸಲು ಡ್ಯಾನ್ಸ್ ಮಾಡುತ್ತಿದ್ದೆ. ಆ ದಿನಗಳಲ್ಲಿ ಸಂಜೆ ರೇಡಿಯೋ ಸಿಲೋನ್‌ನಲ್ಲಿ ವಿವಿಧ ಭಾರತಿ ಮತ್ತು ತೆಲುಗು ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದೆ. ಆ ಸಮಯದಲ್ಲಿ ಗ್ರಾಮಫೋನ್ ಅಥವಾ ಟೇಪ್ ರೆಕಾರ್ಡರ್ ಇರಲಿಲ್ಲ. ಅದಕ್ಕೇ ಈ ರೇಡಿಯೋಗಳಲ್ಲಿ ಹಾಡುಗಳು ಬಂದಾಗ ಎಲ್ಲರೂ "ಶಂಕರ್ ಬಾಬುಗೆ ಕೂಗಿ.. ಡ್ಯಾನ್ಸ್ ಮಾಡಿ ರಂಜಿಸುತ್ತಾನೆ.." ಎನ್ನುತ್ತಿದ್ದರು. ಅವರ ಉತ್ಸಾಹ ಕಂಡು ನಾನು ಜೋಶ್‌ನಿಂದ ಡ್ಯಾನ್ಸ್ ಮಾಡ್ತಿದ್ದೆ. ಹೀಗೆ ಡ್ಯಾನ್ಸ್ ಮೇಲೆ ಒಲವು ಶುರುವಾಯಿತು" ಎಂದು ಚಿರು ಹೇಳಿದ್ದಾರೆ.

More from Filmibeat

English summary
Chiranjeevi Honored with Guinness World Record for 537 Songs, 24,000 Dance moves in 156 films;
Read more about: chiranjeevi telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X