twitter
    For Quick Alerts
    ALLOW NOTIFICATIONS  
    For Daily Alerts

    ರಾಜೀನಾಮೆ ನೀಡಿ 'ಮಾ' ಸಂಘದಿಂದ ಹೊರಬಂದ ಚಿರಂಜೀವಿ

    |

    'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್‌)ನ ಶಿಸ್ತು ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಗೆ ನಡೆದಿದ್ದಾರೆ ನಟ ಚಿರಂಜೀವಿ.

    ತೆಲುಗು ಸಿನಿಮಾ ನಟರ ಕಲ್ಯಾಣಕ್ಕಾಗಿ 'ಮಾ' ಸಂಘವನ್ನು ಸ್ಥಾಪಿಸಲಾಗಿತ್ತು. ನಟ ಕೃಷ್ಣಂ ರಾಜು ಸಮಿತಿಯ ಅಧ್ಯಕ್ಷರಾಗಿದ್ದರು. ನಟ ಚಿರಂಜೀವಿ ಅವರು ಶಿಸ್ತು ಸಮಿತಿಯ ಸದಸ್ಯರಾಗಿದ್ದರು. ಆದರೆ ಸಂಘದ ಕೆಲವರ ಧೋರಣೆ ಇಷ್ಟವಾಗದೆ ಚಿರಂಜೀವಿ ಅವರು ರಾಜೀನಾಮೆ ನೀಡಿ ಹೊರಬಂದಿದ್ದಾರೆ.

    ಪವನ್ ಕಲ್ಯಾಣ್ ಜೊತೆಗಿನ ಸುಂದರ ಚಿತ್ರ ಹಂಚಿಕೊಂಡು ಶುಭ ಹಾರೈಸಿದ ಚಿರಂಜೀವಿಪವನ್ ಕಲ್ಯಾಣ್ ಜೊತೆಗಿನ ಸುಂದರ ಚಿತ್ರ ಹಂಚಿಕೊಂಡು ಶುಭ ಹಾರೈಸಿದ ಚಿರಂಜೀವಿ

    ಸಂಘದಲ್ಲಿನ ಕೆಲವರು ವೃತ್ತಿಪರವಲ್ಲದ ವರ್ತನೆಗಳನ್ನು ತೋರುತ್ತಿದ್ದಾರೆ ಎಂದು ಆರೋಪಿಸಿ ಚಿರಂಜೀವಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ತೆಲುಗಿನ ಪತ್ರಿಕೆಗಳು ವರದಿ ಮಾಡಿವೆ. 'ಮಾ' ಒಳಗೆ ಸಾಕಷ್ಟು ಸಮಸ್ಯೆಗಳು ಇರುವುದಾಗಿಯೂ ಚಿರಂಜೀವಿ ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    Chiranjeevi Resigned from MAA Disciplinary Committee Post

    ಈ ಹಿಂದೆ 'ಮಾ' ಗೆ ಸಂಬಂಧಿಸಿದಂತೆ ಹಲವು ವಿವಾದಗಳು ಆಗಿದ್ದವು. ನಟ ರಾಜಶೇಖರ್ ಅವರು 'ಮಾ'ದ ಕಾರ್ಯಕ್ರಮ ನಡೆಯಬೇಕಾದರೆ ವೇದಿಕೆ ಏರಿ ಸಂಘದ ಮುಖ್ಯಸ್ಥರ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು. ರಾಜಶೇಖರ್ ಮಾತ್ರವೇ ಅಲ್ಲದೆ ಇನ್ನೂ ಕೆಲವರು ಸಂಘದ ವಿರುದ್ಧ ಆರೋಪಗಳನ್ನು ಮಾಡಿದ್ದರು.

    2019 ರಲ್ಲಿ ಮಾ ಗೆ ನಡೆದ ಚುನಾವಣೆಯಲ್ಲಿಯೂ ಸಾಕಷ್ಟು ಗೊಂದಲ, ಗದ್ದಲಗಳು ಆಗಿ ವಿವಾದ ಸೃಷ್ಟಿಯಾಗಿತ್ತು.

    English summary
    Megastar Chiranjeevi resigned from MAA disciplinary committee post. He is upset because of some peoples unprofessional behavior.
    Friday, April 9, 2021, 9:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X