For Quick Alerts
  ALLOW NOTIFICATIONS  
  For Daily Alerts

  ಚಿರು ಸಿನಿಮಾದಿಂದ ಹೊರ ನಡೆದ ತ್ರಿಷಾ: ಅಸಲಿ ಕಾರಣ ಬಹಿರಂಗ ಪಡಿಸಿದ ಮೆಗಾಸ್ಟಾರ್

  |

  ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಈ ಸಿನಿಮಾದ ಮೇಲೆ ಚಿರಂಜೀವಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನೇನು ಸುಸೂತ್ರವಾಗಿ ಚಿತ್ರೀಕರಣ ನಡೆಯುತ್ತಿದೆ ಎನ್ನುವಷ್ಟೊತ್ತಿಗೆ ನಟಿ ತ್ರಿಷಾ ಸಿನಿಮಾದಿಂದ ಹೊರನಡೆದು ಶಾಕ್ ನೀಡಿದ್ದಾರೆ.

  ಮೆಗಾ ಸ್ಟಾರ್ ಜೊತೆ ನಟಿಸಲು ನಾಯಕಿಯರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ತ್ರಿಷಾ ಸಿಕ್ಕ ಅವಕಾಶವನ್ನು ಕೈ ಚೆಲ್ಲಿ ಹೋಗಿರುವುದು ಅಚ್ಚರು ಮೂಡಿಸಿದೆ. ತ್ರಿಷಾ ಮತ್ತು ಚಿರು ಇಬ್ಬರನ್ನು ತೆರೆಮೇಲೆ ನೋಡುವ ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ತ್ರಿಷಾ ತೆಗೆದುಕೊಂಡ ನಿರ್ಧಾರ ಬೇಸರ ಮೂಡಿಸಿತ್ತು. ಆದರೀಗ ಈ ಬಗ್ಗೆ ನಟ ಚಿರಂಜೀವಿ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ತ್ರಿಷಾ ಹೊರನಡೆದ ಅಸಲಿ ಕಾರಣ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  14 ವರ್ಷದ ನಂತರ ಒಂದಾಗಿದ್ದ ಜೋಡಿ

  14 ವರ್ಷದ ನಂತರ ಒಂದಾಗಿದ್ದ ಜೋಡಿ

  ನಟಿ ತ್ರಿಷಾ ಮತ್ತು ಚಿರಂಜೀವಿ ಬರೋಬ್ಬರಿ ೧೪ ವರ್ಷದ ನಂತರ ಒಟ್ಟಿಗೆ ತೆರೆ ಮೇಲೆ ಬರಲು ಸಜ್ಜಾಗಿದ್ದರು. 2006 ರಲ್ಲಿ ರಿಲೀಸ್ ಆಗಿದ್ದ ಸ್ಟ್ಯಾಲಿನ್ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಚಿರು ಮತ್ತು ತ್ರಿಷಾ ಮತ್ತೆ ತೆರೆಹಂಚಿಕೊಂಡಿಲ್ಲ. ಸದ್ಯ ಆಚಾರ್ಯ ಚಿತ್ರದಲ್ಲಿ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒಲಿದು ಬಂದಿತ್ತು. ಆದರೀಗ ತ್ರಿಷಾ ಆಚಾರ್ಯ ಸಿನಿಮಾದಿಂದ ಹೊರ ನಡೆದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

  ಲಾಕ್ ಡೌನ್ ನಲ್ಲಿ ಅಣ್ಣನ ಮಗಳಿಗೆ ಬಿಗ್ ಗಿಫ್ಟ್ ನೀಡಿದ ಚಿರಂಜೀವಿ: ಏನದು?ಲಾಕ್ ಡೌನ್ ನಲ್ಲಿ ಅಣ್ಣನ ಮಗಳಿಗೆ ಬಿಗ್ ಗಿಫ್ಟ್ ನೀಡಿದ ಚಿರಂಜೀವಿ: ಏನದು?

  'ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು..'

  'ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು..'

  ನಟಿ ತ್ರಿಷಾ ಸಿನಿಮಾದಿಂದ ಹೊರನಡೆದ ಬಗ್ಗೆ ಚಿರಂಜೀವಿ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಮಾಧ್ಯಮದ ಜೊತೆ ಮಾತನಾಡಿದ ಚಿರು " ನನ್ನ ತಂಡದ ಜೊತೆ ಮಾತನಾಡಿದೆ. ನಮ್ಮ ಕಡೆಯಿಂದ ತ್ರಿಷಾಗೆ ಏನಾದರು ಸಮಸ್ಯೆ ಆಗಿದೆಯಾ ಎಂದು ವಿಚಾರಿಸಿದೆ. ಅಲ್ಲದೆ ಈಗಾಗಲೆ ನನ್ನ ಮಗಳು ತ್ರಿಷಾಗೆ ಕಾಸ್ಟ್ಯೂಮ್ ಸಹ ಡಿಸೈನ್ ಮಾಡಿದ್ದರು. ತ್ರಿಷಾ ಹೊರನಡೆದಿರುವ ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಯಿತು" ಎಂದು ಹೇಳಿದ್ದಾರೆ.

  ಚಿರಂಜೀವಿ ಬಹಿರಂಗ ಪಡಿಸಿದ ಅಸಲಿ ಕಾರಣ

  ಚಿರಂಜೀವಿ ಬಹಿರಂಗ ಪಡಿಸಿದ ಅಸಲಿ ಕಾರಣ

  "ಆನಂತರ ನನಗೆ ಗೊತ್ತಾಯಿತು. ತ್ರಿಷಾ ನಿರ್ದೇಖ ಮಣಿರತ್ನಂ ನಿರ್ದೇಶನದ ಸಿನಿಮಾಗೆ ಸಹಿ ಹಾಕಿದ್ದಾರೆ. ಅನೇಕ ದಿನಗಳ ಹಿಂದೆಯೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಅಲ್ಲದೆ ಚಿತ್ರಕ್ಕಾಗಿ ಸಾಕಷ್ಟು ದಿನಗಳ ಕಾಲ್ ಶೀಟ್ ನೀಡಿದ್ದಾರೆ. ನಮ್ಮ ಸಿನಿಮಾತಂಡದಿಂದ ತ್ರಿಷಾಗೆ ಯಾವುದೆ ಸಮಸ್ಯೆ ಆಗಿಲ್ಲ. ಜೊತೆಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ" ಎಂದು ಚಿರು ಸ್ಪಷ್ಟಪಡಿಸಿದ್ದಾರೆ.

  ತ್ರಿಷಾ ಹೇಳುವುದೆ ಬೇರೆ

  ತ್ರಿಷಾ ಹೇಳುವುದೆ ಬೇರೆ

  ಆದರೆ ಈ ಬಗ್ಗೆ ತ್ರಿಷಾ ಬೇರೆಯದೆ ಯಾದ ಕಾರಣ ಹೇಳುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ ತ್ರಿಷಾ "ಕೆಲವು ವಿಚಾರಗಳು ಪ್ರಾರಂಭದಲ್ಲಿ ಹೇಳಿದ್ದಕ್ಕಿಂತ, ಚರ್ಚೆ ಮಾಡಿದ್ದಕ್ಕಿಂತ ಭಿನ್ನವಾಗಿರುತ್ತವೆ. ಕೆಲವು ಭಿನ್ನಾಭಿಪ್ರಾಯದ ಕಾರಣ ಚಿರಂಜೀವಿ ಸರ್ ಸಿನಿಮಾದಲ್ಲಿ ಅಭಿನಯಿಸುತ್ತಿಲ್ಲ. ತಂಡಕ್ಕೆ ಒಳ್ಳೆಯದಾಗಲಿ. ಮತ್ತೊಂದು ಅದ್ಭುತ ಪ್ರಾಜೆಕ್ಟ್ ಮೂಲಕ ತೆಲುಗು ಅಭಿಮಾನಿಗಳ ಮುಂದೆ ಬರುತ್ತೇನೆ" ಎಂದಿದ್ದರು. ಆದರೀಗ ಈ ಟ್ವೀಟ್ ಡಿಲೀಟ್ ಆಗಿದೆ.

  ತ್ರಿಷಾ ಜಾಗಕ್ಕೆ ಕಾಜಲ್ ಎಂಟ್ರಿ

  ತ್ರಿಷಾ ಜಾಗಕ್ಕೆ ಕಾಜಲ್ ಎಂಟ್ರಿ

  ತ್ರಿಷಾ ಹೊರಬಂದ ನಂತರ ಚಿತ್ರತಂಡಕ್ಕೆ ನಾಯಕಿ ವಿಚಾರ ತೀರ ಗೊಂದಲ ಸೃಷ್ಟಿಸಿತ್ತು. ಕೊನೆಗೆ ತ್ರಿಷಾ ಜಾಗಕ್ಕೆ ಮತ್ತೋರ್ವ ಸ್ಟಾರ್ ನಟಿಯನ್ನು ಆಯ್ಕೆ ಮಾಡಿದೆ ಸಿನಿಮಾತಂಡ. ತ್ರಿಷಾ ಬದಲಿಗೆ ನಟಿ ಕಾಜಲ್ ಅಗರ್ ವಾಲ್ ಎಂಟ್ರಿ ಕೊಟ್ಟಿದ್ದಾರೆ. ಕೈದಿ ನಂ.150 ಸಿನಿಮಾದಲ್ಲಿ ಚಿರು ಜೊತೆ ಮಿಂಚಿದ್ದ ಕಾಜಲ್ ಈಗ ಮತ್ತೆ ಆಚಾರ್ಯ ಸಿನಿಮಾ ಮೂಲಕ ಚಿರು ಜೊತೆ ರೋಮ್ಯಾನ್ಸ್ ಮಾಡುತ್ತಿದ್ದಾರೆ.

  English summary
  Telugu Actor Chiranjeevi reveals real reason behind trisha out from Acharya movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X