ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಭಾವನಾತ್ಮಕ ಪೋಸ್ಟ್: ಕಾಡ್ತಿದೆಯಾ ಶ್ರೀಜಾ ದೂರಾದ ನೋವು?

ಹಲವು ದಿನಗಳಿಂದ ನಟ ಚಿರಂಜೀವಿ ಮಗಳು ಶ್ರೀಜಾ ಮತ್ತು ಕಲ್ಯಾಣ್ ದೇವ್ ವಿಚ್ಛೇದನದ ಸುದ್ದಿ ಹರಿದಾಡುತ್ತಿದೆ. ಚಿರಂಜೀವಿ ಮಗಳು ನಟ ಕಲ್ಯಾಣ್ ದೇವ್ ಜೊತೆಗೆ ಎರಡನೇ ಮದುವೆ ಆಗಿದ್ದಾರೆ. ಈ ಜೋಡಿ ಕೂಡ ತಮ್ಮ ಪತಿ ಇಂದ ದೂರ ಆಗಿದ್ದಾರೆ ಎನ್ನಲಾಗುತ್ತಿದೆ.

ಚಿರಂಜೀವಿ ಮಗಳ ವಿಚ್ಛೇದನದ ವಿಚಾರ ಸದ್ದು ಮಾಡಲು ಕಾರಣ ಶ್ರೀಜಾ ಅವರೇ. ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ಕಲ್ಯಾಣ್ ದೇವ್ ಹೆಸರನ್ನು ಡಿಲೀಟ್ ಮಾಡಿದ್ದು, ಗುಮನಿಗೆ ಕಾರಣವಾಗಿತ್ತು. ಶ್ರೀಜಾ ಪತಿಯ ಹೆಸರನ್ನು ಕೈ ಬಿಟ್ಟಿ ಕಾರಣ. ಇವರು ದೂರಾದ ಬಗ್ಗೆ ಸುದ್ದಿ ಹಬ್ಬಿತ್ತು.

ಪತಿಯ ಹೆಸರು ಕಿತ್ತು ಹಾಕಿದ ಶ್ರೀಜಾ ಕೋನಿಡೇಲಾ!

ಪತಿಯ ಹೆಸರು ಕಿತ್ತು ಹಾಕಿದ ಶ್ರೀಜಾ ಕೋನಿಡೇಲಾ!

ಶ್ರೀಜಾ ಇದ್ದಕ್ಕಿದ್ದ ಹಾಗೆ ತಮ್ಮ ಪತಿಯ ಹೆಸರನ್ನು ಇನ್‌ಸ್ಟಾಗ್ರಾಮ್ ಖಾತೆ ಇಂದ ತೆಗೆದು ಹಾಕಿದ್ದಾರೆ. ಸದ್ಯ 'ಶ್ರೀಜಾ ಕೋನಿಡೇಲಾ' ಎಂದು ಬದಲಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರ ಹೆಸರು 'ಶ್ರೀಜಾ ಕಲ್ಯಾಣ್' ಎಂದು ಇತ್ತು. ಮದುವೆಯ ಬಳಿಕ ಪತಿಯ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಶ್ರೀಜಾ ಸೇರಿಸಿಕೊಂಡಿದ್ದರು. ಆದರೆ ಕೆಲವು ದಿನಗಳ ಹಿಂದೆ ಪತಿಯ ಹೆಸರನ್ನು ಕಿತ್ತು ಹಾಕಿ ಅನುಮಾನಕ್ಕೆ ಕಾರಣ ಆಗಿದ್ದರು.

ವಿಚ್ಛೇದನದ ಗಾಸಿಪ್ ಬಗ್ಗೆ ಮೌನ!

ವಿಚ್ಛೇದನದ ಗಾಸಿಪ್ ಬಗ್ಗೆ ಮೌನ!

ಇನ್ನು ಸಿನಿಮಾ ತಾರೆಯರ ಬಗ್ಗೆ ಗಾಸಿಪ್ ಹಬ್ಬುವುದು ಹೊಸದೇನಲ್ಲ. ಆದರೆ ಈ ರೀತಿಯ ವಿಚ್ಛೇದನದ ಸುದ್ದಿ ಹಬ್ಬಿದ್ದರೂ ಕೂಡ, ಕಲ್ಯಾಣ್ ದೇವ್, ಶ್ರೀಜಾ ಮತ್ತು ಮೆಘಾ ಕುಟುಂಬ ಸುಮ್ಮನೆ ಇದೆ. ಇದು ಜಿನ ಎನ್ನುವುದಿರಲಿ ಇದು ಸುಳ್ಳು ಅಂತಲೂ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಹಾಗಾಗಿ ಕಲ್ಯಾಣ್, ಶ್ರೀಜಾ ದೂರಾಗಿದ್ದರೆ ಎನ್ನಲಾಗಿದ್ದು, ಕಲ್ಯಾಣ್ ಹಂಚಿಕೊಂಡ ಹೊಸ ಪೋಸ್ಟ್ ಇದಕ್ಕೆ ಪುಷ್ಠಿ ಕೊಟ್ಟಿದೆ.

ಕಲ್ಯಾಣ್ ದೇವ್ ಭಾವನಾತ್ಮಕ ಪೋಸ್ಟ್!

ಇನ್ನು ನಟ ಕಲ್ಯಾಣ್ ದೇವ್ ತಮ್ಮ ತಾಯಿಯ ಹುಟ್ಟು ಹಬ್ಬಕ್ಕೆ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಅಮ್ಮ... ಕೆಲವೊಮ್ಮೆ ಜೀವನ ಕಠಿಣ ಅನಿಸುತ್ತೆ. ಆದರೆ ನಿಮ್ಮ ಪ್ರೀತಿಯ ಶಕ್ತಿಯಿಂದ ನನ್ನ ದಾರಿಯಲ್ಲಿ ಯಾವುದೇ ಅಡೆತಡೆಗಳನ್ನು, ನಾನು ನಿಭಾಯಿಸಬಲ್ಲೆ ಎಂದು ನನಗೆ ಯಾವಾಗಲೂ ಭರವಸೆ ಇದೆ. ಯಾವಾಗಲೂ ನನ್ನೊಂದಿಗೆ ಇರುವುದಕ್ಕೆ ಧನ್ಯವಾದಗಳು. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಅಮ್ಮ" ಎಂದು ಕಲ್ಯಾಣ್ ದೇವ್ ಬರೆದುಕೊಂಡಿದ್ದಾರೆ.

2011ರಲ್ಲಿ ಶ್ರೀಜಾ ಮೊದಲ ಮದುವೆ ವಿಚ್ಛೇದನ!

2011ರಲ್ಲಿ ಶ್ರೀಜಾ ಮೊದಲ ಮದುವೆ ವಿಚ್ಛೇದನ!

ಇನ್ನು ಶ್ರೀಜಾ ಕಲ್ಯಾಣ್ ಅವರ ಜೊತೆಗೆ ಶ್ರೀಜಾ ಎರಡನೇ ಮದುವೆ ಆಗಿದ್ದಾರೆ. ಶ್ರೀಜಾ ಕಲ್ಯಾಣ್‌ಗೂ ಮೊದಲು 19 ವಯಸ್ಸಿನಲ್ಲಿ ಸಿರಿಶ್ ಭಾರದ್ವಾಜ್ ಎಂಬುವರನ್ನು ವಿವಾಹ ಆಗಿದ್ದರು. ನಂತರ ಅತ್ತೆ ಮನೆಯಲ್ಲಿ ಹಣಕ್ಕಾಗಿ ಕಾಟ ಕೊಡುತ್ತಿದ್ದಾರೆ ಎಂದು ಅವರ ಮೇಲೆ ದೂರು ನೀಡಿ, 2011ರಲ್ಲಿ ಮೊದಲ ಪತಿಯಿಂದ ದೂರಾಗಿದ್ದರು ಶ್ರೀಜಾ. 2016ರಲ್ಲಿ ಶ್ರೀಜಾ ಕಲ್ಯಾಣ್ ದೇವ್‌ ಅವರ ಜೊತೆಗೆ ಮದುವೆ ಆದರು. ಈಗ ಕಲ್ಯಾಣ್ ದೇವ್ ಇಂದಲೂ ದೂರಾಗಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Chiranjeevi's Daughter Sreeja Husband Kalyan Dev Emotional Post Hints Divorce,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X