ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ ಮೆಗಾಸ್ಟಾರ್ ಚಿರಂಜೀವಿ ಮಗಳು

ತೆಲುಗಿನ ನಟ ಚಿರಂಜೀವಿ ಅವರ ಕುಟುಂಬದಲ್ಲಿ ಹಲವು ಮಂದಿ ತೆಲುಗು ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚುತ್ತಿದ್ದಾರೆ. ಆದರೆ ಆ ಕುಟುಂಬದ ಮಹಿಳೆಯರು ಸಿನಿಮಾದಲ್ಲಿ ನಟಿಸಿದ್ದು ಬಹಳ ಕಡಿಮೆ. ನಾಗಬಾಬು ಮಗಳು ನಿಹಾರಿಕಾ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಇತ್ತೀಚೆಗಷ್ಟೆ ಅವರಿಗೆ ವಿವಾಹವಾಗಿದೆ ಇನ್ನು ಮುಂದೆ ಆಕೆಯೂ ನಟಿಸುವುದು ಅನುಮಾನ.

ಚಿರಂಜೀವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಆದರೆ ಒಬ್ಬರೂ ಸಹ ನಟನೆಯನ್ನು ಆರಿಸಿಕೊಳ್ಳಲಿಲ್ಲ. ಚಿರಂಜೀವಿ ಅವರ ಮೊದಲನೇ ಪುತ್ರಿ ಸುಶ್ಮಿತಾ ವಸ್ತ್ರ ವಿನ್ಯಾಸ ಹಾಗೂ ಇತರೆ ಕಾರ್ಯಗಳ ಮೂಲಕ ಅಪ್ಪ ಹಾಗೂ ಅಣ್ಣನ ಸಿನಿಮಾಗಳಲ್ಲಿ ತೆರೆ ಮರೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.

ಕಳೆದ ವರ್ಷವಷ್ಟೆ ವೆಬ್ ಸರಣಿ ನಿರ್ಮಾಣ ಮಾಡಿದ್ದ ಸುಶ್ಮಿತಾ, ಇದೇ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮಿಳಿನ '8 ತೊಟ್ಟಕ್ಕಲ್' ಸಿನಿಮಾದ ರೀಮೇಕ್ ಹಕ್ಕುಗಳನ್ನು ಖರೀದಿಸಿದ್ದು ಅದೇ ಸಿನಿಮಾವನ್ನು ತೆಲುಗಿನಲ್ಲಿ ನಿರ್ಮಿಸಲಿದ್ದಾರೆ.

 Chiranjeevis Daughter Sushmita Producing A Movie

ತಮಿಳಿನ '8 ತೊಟ್ಟಕ್ಕಲ್' ಸಿನಿಮಾವು ಕ್ರೈಂ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಆಗಿದೆ. ಇದೇ ಸಿನಿಮಾ ಕನ್ನಡದಲ್ಲಿ '8 ಎಂಎಂ' ಹೆಸರಿನಲ್ಲಿ ನಿರ್ಮಾಣಗೊಂಡಿದೆ. ಜಗ್ಗೇಶ್ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್‌ ಒಬ್ಬನ ಹಿಂದೆ ಬಿದ್ದಿದ್ದಾಗ ಪೊಲೀಸ್ ತನ್ನ ಸರ್ವಿಸ್ ಬಂದೂಕನ್ನು ಕಳೆದುಕೊಳ್ಳುತ್ತಾನೆ ಆ ಬಂದೂಕು ಬಳಸಿ ಗ್ಯಾಂಗ್ ಒಂದು ಬ್ಯಾಂಕ್ ದೋಚುತ್ತದೆ, ಪೊಲೀಸನ ಕೆಲಸ ಹೋಗಿ ಬಂಧನ ಭೀತಿಗೆ ಸಿಲುಕುತ್ತಾನೆ. ಪೊಲೀಸ್ ಬಂದೂಕಿಗಾಗಿ ಹುಡುಕುವ ಯತ್ನ ಮಾಡುವ ಥ್ರಿಲ್ಲರ್ ಕತೆಯನ್ನು ಸಿನಿಮಾ ಹೊಂದಿದೆ.

ಸುಶ್ಮಿತಾ ಈಗಾಗಲೇ ಪೊಲೀಸರ ಕತೆಯನ್ನೇ ಹೊಂದಿರುವ ವೆಬ್ ಸರಣಿ 'ಶೂಟೌಟ್ ಅಟ್ ಅಲಿಯಾರ್' ವೆಬ್ ಸರಣಿ ನಿರ್ಮಾಣ ಮಾಡಿದ್ದಾರೆ. ಇದೀಗ ಪೊಲೀಸರ ಕತೆಯನ್ನೇ ಹೊಂದಿರುವ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಸುಶ್ಮಿತಾಗೆ ಅವರ ಸಹೋದರ ರಾಮ್ ಚರಣ್ ಬೆಂಬಲ ಇರಲಿದೆ. ಸಿನಿಮಾದ ಪಾತ್ರವರ್ಗ, ಸಿನಿಮಾವನ್ನು ನಿರ್ದೇಶಿಸಲಿರುವುದು ಯಾರು ಎನ್ನುವುದು ಇನ್ನೂ ಅಂತಿಮಗೊಳ್ಳಬೇಕಿದೆ.

Recommended Video

ಆರೋಗ್ಯದ ಬಗ್ಗೆ ಮಾಹಿತಿ ಶೇರ್ ಮಾಡಿದ ಕಿಚ್ಚ ಸುದೀಪ್ | Filmibeat Kannada

ಚಿರಂಜೀವಿ ಅವರ ಮತ್ತೊಬ್ಬ ಮಗಳು ಶ್ರಿಜಾ ಈ ಹಿಂದೆ ಪ್ರೇಮವಿವಾಹವಾಗಿ ಸುದ್ದಿಯಾಗಿದ್ದರು. ಆ ನಂತರ ಪತಿಯೊಡನೆ ವಿಚ್ಛೇಧನ ಪಡೆದು ಎರಡನೇ ಮದುವೆಯಾಗಿದ್ದಾರೆ. ಅವರು ಸಿನಿಮಾಗಳಲ್ಲಿ ತೊಡಗಿಕೊಂಡಿಲ್ಲ.

More from Filmibeat

English summary
Megastar Chiranjeevi's daughter Sushmita producing a movie in Telugu. She purchased remake rights of Tamil movie 8 Thottakkal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X