ಊಟಿಯಲ್ಲಿ 'ಗಾಡ್‌ಫಾದರ್' ಚಿತ್ರೀಕರಣ ಅರಂಭಿಸಿದ ಮೆಗಾಸ್ಟಾರ್

ಮಲಯಾಳಂ ಹಿಟ್ ಚಿತ್ರ ಲೂಸಿಫರ್ ತೆಲುಗು ರಿಮೇಕ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವುದು ಗೊತ್ತಿರುವ ಸಂಗತಿ. ಈ ಚಿತ್ರಕ್ಕೆ 'ಗಾಡ್‌ಫಾದರ್' ಎಂದು ಹೆಸರಿಡಲಾಗಿದ್ದು, ಇಂದಿನಿಂದ ಊಟಿಯಲ್ಲಿ ಚಿತ್ರೀಕರಣ ಶುರುವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು ಒಂದು ವಾರಗಳ ಕಾಲ ಊಟಿಯಲ್ಲಿ 'ಗಾಡ್‌ಫಾದರ್' ಚಿತ್ರದ ಶೂಟಿಂಗ್ ನಡೆಯಲಿದೆ. ಮಲಯಾಳಂ ಭಾಷೆಯಲ್ಲಿ ಮೋಹನ್ ಲಾಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಸೂಪರ್ ಹಿಟ್ ಆದ ಚಿತ್ರ ಇದಾಗಿದೆ. ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಚಿರಂಜೀವಿ ಜೊತೆ ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ. ಇದು ಚಿರು ನಟನೆಯ 153ನೇ ಸಿನಿಮಾ ಆಗಿದ್ದು, ಮೆಗಾಸ್ಟಾರ್ ಹುಟ್ಟುಹಬ್ಬದಂದು ಪೋಸ್ಟರ್ ಅನಾವರಣ ಮಾಡಿ ಅಧಿಕೃತವಾಗಿ ಸಿನಿಮಾ ಘೋಷಿಸಿದ್ದರು.

Chiranjeevis God Father shoot has begun today in Ooty

ತೆಲುಗಿನಲ್ಲಿ ಈ ಚಿತ್ರಕ್ಕೆ ಮೋಹನ್ ರಾಜ್ ನಿರ್ದೇಶನ ಮಾಡ್ತಿದ್ದಾರೆ. ಎಸ್ ಎಸ್ ತಮನ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ಮಲಯಾಳಂ ಚಿತ್ರದಲ್ಲಿ ನಾಯಕಿನಟಿಯ ಪಾತ್ರ ಇರಲಿಲ್ಲ. ಆದರೆ, ತೆಲುಗಿಗೆ ಬಂದಾಗ ಕೆಲವು ಬದಲಾವಣೆಗಳೊಂದಿಗೆ ಈ ಚಿತ್ರ ತಯಾರು ಮಾಡಲಾಗುತ್ತಿದೆಯಂತೆ. ಹಾಗಾಗಿ, ಈ ಸಿನಿಮಾದಲ್ಲಿ ಇಬ್ಬರು ಪ್ರಮುಖ ನಟಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಲೂಸಿಫರ್ ಚಿತ್ರದಲ್ಲಿ ಮೋಹನ್ ಲಾಲ್‌ಗೆ ಸಹೋದರಿ ಪಾತ್ರದಲ್ಲಿ ಮಂಜು ವಾರಿಯರ್ ನಟಿಸಿದ್ದಾರೆ. ಅದೇ ಪಾತ್ರವನ್ನು ತೆಲುಗಿನಲ್ಲಿ ಸುಹಾಸಿನಿ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ನಾಯಕಿ ಪಾತ್ರ ಸೃಷ್ಟಿಸಿದ್ದು, ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಿಸಲಿದ್ದಾರೆ ಎಂದು ವರದಿಯಾಗಿದೆ. ಇದು ಅಧಿಕೃತವಾಗಿಲ್ಲ. ಈ ನಡುವೆ ಬಾಲಿವುಡ್ ನಟಿ ವಿದ್ಯಾ ಬಾಲನ್ ಅಥವಾ ತ್ರಿಷಾ ನಟಿಸಬಹುದು ಎನ್ನಲಾಗಿದೆ.

Chiranjeevis God Father shoot has begun today in Ooty

ಚಿರಂಜೀವಿ ಜೊತೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಸಲಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಮೂಲ ಚಿತ್ರದ 'ಲೂಸಿಫರ್'ನಲ್ಲಿ ಪೃಥ್ವಿರಾಜ್ ಸುಕುಮಾರ್ ನಿರ್ವಹಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ಸಲ್ಮಾನ್ ಖಾನ್ ನಿರ್ವಹಿಸಲಿದ್ದಾರೆ ಎಂದು ಹೇಳಲಾಯಿತು. ಆಮೇಲೆ ಅದು ವದಂತಿ ಅಷ್ಟೇ ಎಂದರು. ಈಗ ಪಾತ್ರಕ್ಕೆ ಸೌತ್ ಇಂಡಸ್ಟ್ರಿಯ ಖ್ಯಾತ ಕಲಾವಿದರೊಬ್ಬರನ್ನು ಅಪ್ರೋಚ್ ಮಾಡಲಾಗಿದೆಯಂತೆ.

2019ರಲ್ಲಿ ಬಿಡುಗಡೆಯಾಗಿದ್ದ ಲೂಸಿಫರ್ ಚಿತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದರು. ಮೋಹನ್ ಲಾಲ್ ಜೊತೆ ವಿವೇಕ್ ಒಬೆರಾಯ್, ಮಂಜು ವಾರಿಯರ್ ಸೇರಿದಂತೆ ಹಲವರು ನಟಿಸಿದ್ದರು. ಈಗ ಲೂಸಿಫರ್ 2 ಚಿತ್ರವೂ ಘೋಷಣೆಯಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.

ಲೂಸಿಫರ್ ಹೊರತುಪಡಿಸಿ, ತಮಿಳಿನಲ್ಲಿ ಅಜಿತ್ ಕುಮಾರ್ ನಟಿಸಿದ್ದ 'ವೇದಲಂ' ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದೆ. ಚಿರಂಜೀವಿ ನಾಯಕನಾಗಿ ನಟಿಸಲಿದ್ದು, ತಂಗಿ ಪಾತ್ರದಲ್ಲಿ ಕೀರ್ತಿಸುರೇಶ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ತೆಲುಗಿನಲ್ಲಿ ಭೋಲಾ ಶಂಕರ್ ಎಂದು ಹೆಸರಿಡಲಾಗಿದೆ. ಮೆಹರ್ ರಮೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದರ ಬೆನ್ನಲ್ಲೆ ಅಜಿತ್ ನಟಿಸಿರುವ ಇನ್ನೊಂದು ಚಿತ್ರವನ್ನು ರಿಮೇಕ್ ಮಾಡಲು ಚಿರು ಮುಂದಾಗಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದೆ. 2015ರಲ್ಲಿ ತೆರೆಕಂಡಿದ್ದ ಎನ್ನೈ ಅರಿಂದಾಲ್ ಚಿತ್ರದ ಮೇಲೆ ಮೆಗಾಸ್ಟಾರ್ ಕಣ್ಣಾಕಿದ್ದಾರೆ ಎಂದು ಸುದ್ದಿಗಳು ವರದಿಯಾಗಿದೆ. ಈ ಸುದ್ದಿ ಕಳೆದ ಒಂದೂವರೆ ವರ್ಷದಿಂದಲೂ ಚರ್ಚೆಯಲ್ಲಿದೆ. ಆದರೆ ಅಧಿಕೃತವಾಗಿ ಎಲ್ಲಿಯೂ ಅನೌನ್ಸ್ ಆಗಿಲ್ಲ. ಇದೊಂದು ಪೊಲೀಸ್ ಥ್ರಿಲ್ಲಿಂಗ್ ಕಥೆಯಾಗಿದ್ದು, ಅಜಿತ್ ನಾಯಕನಾಗಿ ನಟಿಸಿದ್ದರು. ಅನುಷ್ಕಾ ಶರ್ಮಾ ಮತ್ತು ತ್ರಿಷಾ ಕೃಷ್ಣನ್ ಇಬ್ಬರು ನಾಯಕಿಯರು. ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದರು. ಯುವತಿಯೊಬ್ಬಳನ್ನು ಕ್ರಿಮಿನಲ್‌ಗಳಿಂದ ಕಾಪಾಡುವ ಪೊಲೀಸ್ ಅಧಿಕಾರಿಯಾಗಿ ಅಜಿತ್ ಅಭಿನಯಿಸಿದ್ದಾರೆ. ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ ಅವರೇ ಈ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಇನ್ನು ನಿರ್ದೇಶಕನನ್ನು ಆಯ್ಕೆ ಮಾಡಿಕೊಂಡಿಲ್ಲ.

More from Filmibeat

English summary
Megastar Chiranjeevi Starrer God Father movie shoot has begun today in Ooty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X