twitter
    For Quick Alerts
    ALLOW NOTIFICATIONS  
    For Daily Alerts

    ನಾನು ಚಿತ್ರರಂಗದ ನಾಯಕನಲ್ಲ, ನನ್ನನ್ನು ಹಾಗೆ ಕರೆಯಬೇಡಿ: ಚಿರಂಜೀವಿ ಬೇಸರ

    |

    ತೆಲುಗು ಚಿತ್ರರಂಗಕ್ಕೆ ಇವು ಸಂಕಷ್ಟದ ದಿನಗಳು. ಚಿತ್ರಮಂದಿರಗಳ ಟಿಕೆಟ್ ದರಗಳನ್ನು ಧಾರುಣವಾಗಿ ತಗ್ಗಿಸಿರುವ ಆಂಧ್ರ ಸರ್ಕಾರದ ನಿರ್ಣಯದಿಂದ ತೆಲುಗು ಚಿತ್ರರಂಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇದರ ನಡುವೆ ಇದೀಗ ಚಿತ್ರರಂಗದಲ್ಲಿ ನಾಯಕತ್ವಕ್ಕಾಗಿ ಹಗ್ಗ-ಜಗ್ಗಾಟ ಆರಂಭವಾಗಿ, ಒಗ್ಗಟ್ಟಾಗಿರಬೇಕಾದ ಸಮಯದಲ್ಲಿಯೇ ಕಿತ್ತಾಟ ನಡೆಯುತ್ತಿದೆ.

    ಕೊರೊನಾ ಸಮಯದಲ್ಲಿ ತೆಲುಗು ಚಿತ್ರರಂಗದ ಹಿರಿಯ ನಟ-ನಟಿಯರು, ಪೋಷಕ ನಟರು, ತಂತ್ರಜ್ಞರಿಗೆ ಅಗತ್ಯ ನೆರವು ನೀಡಿದ್ದ ಮೆಗಾಸ್ಟಾರ್ ಚಿರಂಜೀವಿ, ಕೊರೊನಾ ನಂತರ ಚಿತ್ರರಂಗದ ಒಳಿತಾಗಿ ಆಂಧ್ರ ಹಾಗೂ ತೆಲಂಗಾಣ ಸಿಎಂ ಅವರುಗಳನ್ನು ಭೇಟಿಯಾಗಿ ಕೆಲವು ಮನವಿಗಳನ್ನು ಸಲ್ಲಿಸಿದ್ದರು. ಚಿತ್ರಮಂದಿರದ ಟಿಕೆಟ್ ದರ ಏರಿಸಬೇಕು ಹಾಗೂ ಸಿನಿಮಾ ಕಾರ್ಮಿಕರಿಗೆ ವಿಮೆ ಸೌಲಭ್ಯ ನೀಡಬೇಕೆಂದು ಎಂಬುದನ್ನು ಸೇರಿಸಿ ಇತರ ಕೆಲವು ಮನವಿಗಳನ್ನು ಮಾಡಿದ್ದರು.

    ಚಿರಂಜೀವಿ ಮನವಿಗೆ ತೆಲಂಗಾಣ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಚಿತ್ರಮಂದಿರಗಳ ಟಿಕೆಟ್ ದರ ಏರಿಸಿದರೆ, ವ್ಯತಿರಿಕ್ತವಾಗಿ ಸ್ಪಂದಿಸಿದ ಆಂಧ್ರ ಸರ್ಕಾರ ಟಿಕೆಟ್ ದರಗಳನ್ನು ಕಡಿಮೆ ಮಾಡಿತು.

    Chiranjeevi Said He Doesnt Want To Be Telugu Movie Industry Leader

    ಚಿತ್ರರಂಗದ ಪರವಾಗಿ ಚಿರಂಜೀವಿ ನೇತ್ರತ್ವದಲ್ಲಿ ಸರ್ಕಾರಗಳ ಪರ ಮಾತುಕತೆ ನಡೆಸಿದ್ದು ತೆಲುಗು ಚಿತ್ರರಂಗದಲ್ಲಿಯೇ ಕೆಲವರಿಗೆ ಅಪತ್ಯವಾಗಿದೆ. 'ಚಿರಂಜೀವಿ ಹಾಗೂ ಇತರ ಕೆಲವರು ಮಾತ್ರವೇ ತೆಲುಗು ಚಿತ್ರರಂಗ ಅಲ್ಲ, ಅವರನ್ನು ಬಿಟ್ಟು ಇನ್ನೂ ನಟರು, ಹಿರಿಯರು ಇದ್ದಾರೆ'' ಎಂದು ನಟ ಮೋಹನ್‌ಬಾಬು ಗುಡುಗಿದ್ದಾರೆ. ತೆಲುಗು ಸಿನಿಮಾ ನಟರ ಸಂಘ 'ಮಾ' ಸಹ ಚಿರಂಜೀವಿ ಅವರು ಮುಂದಾಳತ್ವ ವಹಿಸಿ ಸರ್ಕಾರಗಳೊಟ್ಟಿಗೆ ಮಾತುಕತೆ ನಡೆಸುತ್ತಿರುವುದಕ್ಕೆ ಅಸಮಾಧಾನ ಹೊರಹಾಕಿದೆ.

    ಇದರಿಂದ ಬೇಸತ್ತಿರುವ ನಟ ಚಿರಂಜೀವಿ, ''ನನಗೆ ಚಿತ್ರರಂಗದ ನಾಯಕ ಎಂಬ ಪಟ್ಟವೇ ಬೇಡ'' ಎಂದಿದ್ದಾರೆ. ಚಿರಂಜೀವಿ ಟ್ರಸ್ಟ್ ಮೂಲಕ ಚಿತ್ರರಂಗದ ಕಾರ್ಮಿಕರಿಗೆ ದೃಷ್ಟಿ ಆರೋಗ್ಯ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಚಿರಂಜೀವಿ, ''ನಾನು ತೆಲುಗು ಚಿತ್ರರಂಗದ ನಾಯಕ ಅಲ್ಲ. ತೆಲುಗು ಚಿತ್ರರಂಗದ ಪ್ರಮುಖ ಎಂಬ ಬಿರುದು ಸಹ ನನಗೆ ಬೇಕಿಲ್ಲ. ನಾನು ನನ್ನ ಆತ್ಮತೃಪ್ತಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ನನಗೆ ಯಾವುದೇ ಬಿರುದುಗಳು ಬೇಡ, ನನ್ನನ್ನು ತೆಲುಗು ಚಿತ್ರರಂಗದ ನಾಯಕ ಎಂದು ಸಂಬೋಧಿಸುವುದು ಬೇಡ'' ಎಂದು ಮಾಧ್ಯಮಗಳ ಬಳಿ ಮನವಿ ಮಾಡಿದರು.

    ''ಸಿನಿಮಾ ರಂಗಕ್ಕೆ ಸಮಸ್ಯೆ ಉಂಟಾದರೆ, ಸಿನಿಮಾ ರಂಗದಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿರುವ ಅಣ್ಣ-ತಮ್ಮಂದಿರಿಗೆ, ಅಕ್ಕ-ತಂಗಿಯರಿಗೆ ಸಮಸ್ಯೆ ಆದರೆ ನಾನು ಕೂಡಲೇ ಬರುತ್ತೇನೆ, ಎಲ್ಲ ರೀತಿಯ ಸಹಾಯ ಮಾಡುತ್ತೇನೆ. ಆದರೆ ಯಾರೊ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಅವರಿಬ್ಬರನ್ನೂ ಸೇರಿಸು, ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿಸಿಕೊಡು, ಇತರೆ ಇತರೆ ಪಂಚಾಯಿತಿಗಳನ್ನು ನಾನು ಮಾಡುವುದಿಲ್ಲ. ಯಾರಿಗೂ ಆರೋಗ್ಯ ಸಮಸ್ಯೆ ಇದ್ದರೆ, ಯಾರಾದರೂ ಕಷ್ಟದಲ್ಲಿದ್ದರೆ ನಾನು ಬಂದೇ ಬರುತ್ತೇನೆ'' ಎಂದರು.

    ''ಚಿರಂಜೀವಿ ಸಿನಿಮಾ ರಂಗದ ಪ್ರಮುಖ ವ್ಯಕ್ತಿ (ಪೆದ್ದೋಡು) ಎನಿಸಿಕೊಳ್ಳಲು ನನಗೆ ಇಷ್ಟವಿಲ್ಲ'' ಎಂದು ಚಿರಂಜೀವಿ ಸ್ಪಷ್ಟಪಡಿಸಿದರು. ಆಗ ಅಲ್ಲಿಯೇ ಇದ್ದವರೊಬ್ಬರು, ''ನೀವು ಸಿನಿಮಾ ರಂಗದ ದೊಡ್ಡಣ್ಣನಂತೆ'' ಎಂದರು ಅದನ್ನೂ ಒಪ್ಪದ ಚಿರಂಜೀವಿ, ''ನಾನು ಸಿನಿಮಾರಂಗದ ಮಗು ಮಾತ್ರ'' ಎಂದರು.

    ನಟ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಸಿನಿಮಾದಲ್ಲಿ ಚಿರಂಜೀವಿ ಜೊತೆಗೆ ಪುತ್ರ ರಾಮ್ ಚರಣ್ ತೇಜ ಸಹ ನಟಿಸಿದ್ದಾರೆ. ಪೂಜಾ ಹೆಗ್ಡೆ ಹಾಗೂ ಕಾಜಲ್ ನಾಯಕಿಯರು. ಸಿನಿಮಾವನ್ನು ಹಿಟ್ ನಿರ್ದೇಶಕ ವಿವಿ ವಿನಾಯಕ್ ನಿರ್ದೇಶನ ಮಾಡಿದ್ದಾರೆ. 'ಆಚಾರ್ಯ' ಬಳಿಕ 'ಗಾಡ್ ಫಾದರ್' ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದು, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ 'ಭೋಳಾ ಶಂಕರ್' ಹೆಸರಿನ ಸಿನಿಮಾದಲ್ಲಿಯೂ ಚಿರು ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ನಟಿ ಕೀರ್ತಿ ಸುರೇಶ್ ಚಿರಂಜೀವಿ ತಂಗಿಯ ಪಾತ್ರದಲ್ಲಿ ನಟಿಸಲಿದ್ದಾರೆ.

    English summary
    Chiranjeevi said I am not Telugu movie industry leader. I don't want to referred as Telugu movie industry leader.
    Monday, January 3, 2022, 19:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X