For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್': ಸಲ್ಲು ಬ್ರದರ್ ಜೊತೆ ಬಂದ ಮೆಗಾಸ್ಟಾರ್!

  |

  'ಗಾಡ್ ಫಾದರ್' ಎಂಟ್ರಿಯಿಂದ ಒಂದು ದಿನ ಮೊದಲೇ ಮೆಗಾಸ್ಟಾರ್ ಚಿರಂಜೀವಿ ಹುಟ್ಟು'ಹಬ್ಬ' ಶುರುವಾಗಿದೆ. ಮೆಗಾಸ್ಟಾರ್ ಚಿರಂಜೀವಿ ಹಾಗೂ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ಗಾಡ್ ಫಾದರ್'. ಮಲಯಾಳಂನ 'ಲೂಸಿಫರ್' ರಿಮೇಕ್ ಆಗಿರೋ ಈ ಚಿತ್ರಕ್ಕೆ ಮೋಹನ್ ರಾಜಾ ಆಕ್ಷನ್ ಕಟ್ ಹೇಳಿದ್ದಾರೆ. ನಾಳೆ(ಆಗಸ್ಟ್ 22)ಚಿರು ಹುಟ್ಟುಹಬ್ಬದ ವಿಶೇಷ ಚಿತ್ರದ ಜಬರ್ದಸ್ತ್‌ ಟೀಸರ್ ರಿಲೀಸ್ ಆಗಿದೆ.

  'ಇಲ್ಲಿಗೆ ಯಾರು ಬಂದರೂ ಪರವಾಗಿಲ್ಲ, ಅವನು ಮಾತ್ರ ಬರಬಾರದು' ಅನ್ನುವ ನಯನತಾರಾ ಡೈಲಾಗ್ ಜೊತೆಗೆ ಶುರುವಾಗುವ 'ಗಾಡ್ ಫಾದರ್' ಟೀಸರ್, ಚಿರು- ಸಲ್ಲು ಆಕ್ಷನ್ ಧಮಾಕಾ ಮೂಲಕ ಮುಕ್ತಾಯವಾಗುತ್ತದೆ. ನಡುವೆ ಸತ್ಯದೇವ್ 'ಇಲ್ಲಿ ನಡೆಯುವ ಪ್ರತಿಯೊಂದಕ್ಕೂ ಅವನೇ ಕಾರಣ, ಸಾಯಿಸಿ ಬಿಡಿ' ಎಂದು ಅಬ್ಬರಿಸಿದ್ದಾರೆ. ಇನ್ನು ' ಈ ತಮ್ಮನನ್ನು ಮರೆಯಬೇಡ' ಎನ್ನುವ ಸಲ್ಲಾನ್ ಖಾನ್ ಡೈಲಾಗ್‌ಗೆ 'ವೇಯ್ಟ್ ಫಾರ್ ಮೈ ಕಮಾಂಡ್ ಬ್ರದರ್' ಅನ್ನುವ ಚಿರು ಡೈಲಾಗ್ ಸಖತ್ ಕಿಕ್ ಕೊಡ್ತಿದೆ. ಚಿರು ಬರ್ತ್‌ಡೇಗೆ ಸ್ಪೆಷಲ್ಲಾಗಿ ಟೀಸರ್ ರಿಲೀಸ್ ಆಗಿದ್ರು, ಚಿತ್ರ ಪಾತ್ರಗಳ ಪರಿಚಯವನ್ನು ಟೀಸರ್‌ನಲ್ಲಿ ಮಾಡಿಸಿದ್ದಾರೆ.

  ಆಕ್ಷನ್ ಸೀನ್ಸ್ ಮಿಕ್ಸ್ ಮಾಡಿ ಕುತೂಹಲಭರಿತವಾಗಿಯೇ 'ಗಾಡ್ ಫಾದರ್' ಟೀಸರ್ ಕಟ್ ಮಾಡಿದ್ದಾರೆ. ಎಸ್. ತಮನ್ ಮ್ಯೂಸಿಕ್ ಚಿತ್ರಕ್ಕಿದೆ. ಸಮುದ್ರ ಖನಿ, ಸುನಿಲ್, ಬ್ರಹ್ಮಾಜಿ, ಪೂರಿ ಜಗನ್ನಾಥ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ರಾಮ್‌ಚರಣ್, ಆರ್‌. ಬಿ ಚೌಧರಿ, ಎನ್‌. ವಿ ಪ್ರಸಾದ್ ಈ ಅದ್ಧೂರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನೀರವ್ ಶಾ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

   ಮೆಗಾಸ್ಟಾರ್ ಬರ್ತ್‌ಡೇ ಗಿಫ್ಟ್

  ಮೆಗಾಸ್ಟಾರ್ ಬರ್ತ್‌ಡೇ ಗಿಫ್ಟ್

  ಚಿರಂಜೀವಿ 'ಲೂಸಿಫರ್' ರಿಮೇಕ್ ಮಾಡ್ತಿದ್ದಾರೆ ಅಂದಾಗಲೇ ನಿರೀಕ್ಷೆ ಮೂಡಿತ್ತು. ಸಲ್ಮಾನ್ ಖಾನ್ ಎಂಟ್ರಿ ಕೊಟ್ಟಮೇಲೆ ಆ ನಿರೀಕ್ಷೆ ಡಬಲ್ ಆಗಿತ್ತು. ನಾಳೆ (ಆಗಸ್ಟ್ 22) 67ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೊರೊನಾ ಹಾವಳಿಯಿಂದ ಕಳೆದೆರಡು ವರ್ಷ ಚಿರು ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿರಲಿಲ್ಲ. ಈ ಬಾರಿ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಸಂಭ್ರಮದಲ್ಲೇ 'ಗಾಡ್ ಫಾದರ್' ಟೀಸರ್ ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ.

   'ಲೂಸಿಫರ್' ಎದುರು 'ಗಾಡ್ ಫಾದರ್' ಸಪ್ಪೆ

  'ಲೂಸಿಫರ್' ಎದುರು 'ಗಾಡ್ ಫಾದರ್' ಸಪ್ಪೆ

  ಚಿರಂಜೀವಿ ಅಭಿಮಾನಿಗಳಿಗೆ 'ಗಾಡ್ ಫಾದರ್' ಟೀಸರ್ ಇಷ್ಟವಾದರೂ ಉಳಿದವರಿಗೆ ಅಷ್ಟಾಗಿ ರುಚಿಸುತ್ತಿಲ್ಲ. ಇನ್ನು ಕಂಪ್ಲೀಟ್ ಆಕ್ಟರ್ ಮೋಹನ್‌ ಲಾಲ್‌ ಸ್ಕ್ರೀನ್‌ ಪ್ರಸೆನ್ಸ್‌ಗೆ ಕಂಪೇರ್‌ ಮಾಡಿದರೆ ಚಿರು ಡಲ್ ಅನ್ನಿಸ್ತಾರೆ. ಸೂಪರ್ ಹಿಟ್ ಸಿನಿಮಾಗಳನ್ನು ರಿಮೇಕ್ ಮಾಡುವಾಗ ಇಂತಹ ಹೋಲಿಕೆ ಸಹಜ. ಅದರಲ್ಲೂ ಮೋಹನ್ ಲಾಲ್ ಸಿನಿಮಾ ಅಂದಾಗ ರಿಸ್ಕ್‌ ಹೆಚ್ಚೇ ಇರುತ್ತದೆ. ಚಿರು ಲುಕ್ ವಿಚಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ಕಥೆಯಲ್ಲೂ ಬದಲಾವಣೆ ಮಾಡಿಕೊಂಡಿದ್ದಾರಾ ಅನ್ನುವುದನ್ನು ಕಾದು ನೋಡಬೇಕು. ಚಿರು ಜೊತೆ ಸಲ್ಮಾನ್ ಖಾನ್ ಕೈ ಜೋಡಿಸಿರುವುದರಿಂದ ಸಿನಿಮಾ ಮೇಲೆ ಕೆಲವರಿಗೆ ಇನ್ನು ಕೊಂಚ ಮಟ್ಟಿಗೆ ಭರವಸೆ ಇದೆ.

   ವಿಜಯದಶಮಿಗೆ ಚಿರು- ಸಲ್ಲು ದರ್ಬಾರ್

  ವಿಜಯದಶಮಿಗೆ ಚಿರು- ಸಲ್ಲು ದರ್ಬಾರ್

  ಹೇಳಿಕೇಳಿ 'ಗಾಡ್ ಫಾದರ್' ದೊಡ್ಡ ಬಜೆಟ್ ಸಿನಿಮಾ ಆಗಿರುವುದರಿಂದ ಹಬ್ಬದ ಸಂಭ್ರಮದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಟೀಸರ್ ಜೊತೆಗೆ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಅಕ್ಟೋಬರ್ 5ಕ್ಕೆ ಚಿತ್ರವನ್ನು ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಪ್ರೇಕ್ಷಕರ ಮುಂದೆ ತರುವ ಸಿದ್ಧತೆ ನಡೀತಿದೆ.

   ಸೋಲಿನಿಂದ ಎದ್ದು ಬರ್ತಾರಾ ಮೆಗಾಸ್ಟಾರ್?

  ಸೋಲಿನಿಂದ ಎದ್ದು ಬರ್ತಾರಾ ಮೆಗಾಸ್ಟಾರ್?

  ಚಿರಂಜೀವಿ ನಟಿಸಿದ ಕೊನೆಯ ಸಿನಿಮಾ 'ಆಚಾರ್ಯ' ಮರೆಯಲಾಗದ ಸೋಲನ್ನು ತಂದೊಡ್ಡಿತ್ತು. ತಂದೆ ಚಿರು ಜೊತೆ ರಾಮ್‌ಚರಣ್ ಬಣ್ಣ ಹಚ್ಚಿದರೂ ಪ್ರಯೋಜನ ಆಗಿರಲಿಲ್ಲ. ನಿರ್ಮಾಪಕರಾಗಿಯೂ ಈ ಚಿತ್ರದಿಂದ ಚರಣ್ ನಷ್ಟ ಅನುಭವಿಸುವಂತಾಯಿತು. 'ಗಾಡ್ ಫಾದರ್' ಚಿತ್ರಕ್ಕೂ ಬಂಡವಾಳ ಹೂಡಿದ್ದು, ಈ ಸಿನಿಮಾ 'ಆಚಾರ್ಯ' ಸೋಲನ್ನು ಮರೆಸುತ್ತದಾ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  English summary
  Chiranjeevi Salman Khan Starrer Lucifer Remake Godfather Movie Teaser Out Now. Know More.
  Monday, August 22, 2022, 9:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X