For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಜೊತೆಗಿನ ಸುಂದರ ಚಿತ್ರ ಹಂಚಿಕೊಂಡು ಶುಭ ಹಾರೈಸಿದ ಚಿರಂಜೀವಿ

  |

  ನಟ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ನಡುವೆ ಕೆಲ ವರ್ಷಗಳ ಹಿಂದೆ ತುಸು ಭಿನ್ನಾಭಿಪ್ರಾಯ ಮೂಡಿತ್ತು, ಆದರೆ ಈಗ ಎಲ್ಲವೂ ಕರಗಿ ಹೋಗಿವೆ.

  ಚಿರಂಜೀವಿ ತಮ್ಮ ಕುಟುಂಬವನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿ. ಪವನ್ ಕಲ್ಯಾಣ್‌ ಬಗ್ಗೆಯೂ ಅವರಿಗೆ ಅತೀವ ಕಾಳಜಿ. ನಾಳೆ (ಏಪ್ರಿಲ್ 09) ರಂದು ಪವನ್ ಕಲ್ಯಾಣ್ ನಟಿಸಿರುವ ಸಿನಿಮಾ 'ವಕೀಲ್ ಸಾಬ್' ಬಿಡುಗಡೆ ಆಗುತ್ತಿದ್ದು. ಇದಕ್ಕಾಗಿ ಟ್ವಿಟ್ಟರ್‌ನಲ್ಲಿ ಸುಂದರ ಚಿತ್ರವೊಂದನ್ನು ಪ್ರಕಟಿಸಿ ಸಿನಿಮಾ ನೋಡಲು ಕಾತರನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಚಿರಂಜೀವಿ.

  ಚಿರಂಜೀವಿ, ಸಹೋದರ ಪವನ್ ಕಲ್ಯಾಣ್‌ರಿಗೆ ತಲೆ ಬಾಚುತ್ತಿರುವ ಹಳೆಯ ಚಿತ್ರವನ್ನು ಟ್ವೀಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರನ್ನು ಚಿತ್ರೀಕರಣಕ್ಕೆ ಸಜ್ಜು ಮಾಡುತ್ತಿರುವ ಚಿತ್ರ ಅದಾಗಿದೆ.

  ಚಿತ್ರ ಹಂಚಿಕೊಂಡಿರುವ ಚಿರಂಜೀವಿ, 'ಬಹಳ ಸಮಯದ ನಂತರ ಪವನ್ ಕಲ್ಯಾಣ್ ಅನ್ನು ಬೆಳ್ಳಿತೆರೆಯ ಮೇಲೆ ನೋಡಬೇಕೆಂದು ನಾನು ಸಹ ನಿಮ್ಮಂತೆ ಕಾತರದಿಂದ ಕಾಯುತ್ತಿದ್ದೇನೆ. ಕುಟುಂಬ ಸದಸ್ಯರೊಂದಿಗೆ ನಾಳೆ ಸಾಯಂಕಾಲ ಚಿತ್ರಮಂದಿರದಲ್ಲಿ 'ವಕೀಲ್ ಸಾಬ್' ಸಿನಿಮಾ ನೋಡಲಿದ್ದೇನೆ. ಸಿನಿಮಾ ಬಗ್ಗೆ ನನ್ನ ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಕಾತರನಾಗಿದ್ದೇನೆ' ಎಂದಿದ್ದಾರೆ ಚಿರಂಜೀವಿ.

  ಮೂರು ವರ್ಷಗಳ ನಂತರ ಪವನ್ ಕಲ್ಯಾಣ್ ನಟಿಸಿರುವ ಸಿನಿಮಾ ತೆರೆಗೆ ಬರುತ್ತಿದೆ. 2019 ರಲ್ಲಿ ಬಿಡುಗಡೆ ಆಗಿದ್ದ 'ಅಜ್ಞಾತವಾಸಿ' ಸಿನಿಮಾ ಪವನ್ ಕಲ್ಯಾಣ್ ಅವರ ಕೊನೆಯ ಸಿನಿಮಾ ಆಗಿತ್ತು. ಆ ಸಿನಿಮಾ ಫ್ಲಾಪ್ ಆಗಿತ್ತು.

  ನಾಳೆ ಬಿಡುಗಡೆ ಆಗಲಿರುವ 'ವಕೀಲ್ ಸಾಬ್' ಸಿನಿಮಾವು ಹಿಂದಿಯ 'ಪಿಂಕ್' ಸಿನಿಮಾದ ರೀಮೇಕ್ ಆಗಿದೆ. ಆದರೆ ಪವನ್ ಕಲ್ಯಾಣ್ ಮ್ಯಾನರಿಸಂ, ಸ್ಟಾರಡಂಗೆ ತಕ್ಕಂತೆ ಕತೆಯಲ್ಲಿ ಕೊಂಚ ಬದಲಾವಣೆ ಮಾಡಿರುವುದು ಸಿನಿಮಾದ ಟ್ರೇಲರ್‌ನಿಂದಲೇ ಗೊತ್ತಾಗುತ್ತಿದೆ. ಸಿನಿಮಾದಲ್ಲಿ ಶ್ರುತಿ ಹಾಸನ್, ನಿವೇತಾ ಥಾಮಸ್, ಅಂಜಲಿ, ಅನನ್ಯಾ ನಾಗಲ್ಲ, ಪ್ರಕಾಶ್ ರೈ ನಟಿಸಿದ್ದಾರೆ. ಸಿನಿಮಾವನ್ನು ವೇಣು ಶ್ರೀರಾಮ್ ನಿರ್ದೇಶನ ಮಾಡಿದ್ದಾರೆ.

  English summary
  Megastar Chiranjeevi shared an old old picture with Pawan Kalyan and said he is waiting to see Pawan Kalyan on big screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X