ವಿಡಿಯೋ: ಅಬ್ಬಾ! ಎನಿಸುವಂತಿದೆ ಭಾರತದ ಅತಿ ದೊಡ್ಡ ಸಿನಿಮಾ ಸೆಟ್‌

ಬಾಹುಬಲಿಯ ಭಾರಿ ದೊಡ್ಡ ಸೆಟ್‌ಗಳನ್ನು ನೋಡಿ ಆಶ್ಚರ್ಯಪಟ್ಟಿದ್ದ ಸಿನಿಮಾ ಪ್ರೇಕ್ಷಕರಿಗೆ ಅದಕ್ಕಿಂತಲೂ ಅದ್ಭುತವಾದ ಬೃಹತ್‌ ಆದ ಸೆಟ್‌ ನ ದರ್ಶನ ತೆಲುಗು ಸಿನಿಮಾವೊಂದರಲ್ಲಿ ಶೀಘ್ರದಲ್ಲಿಯೇ ಆಗಲಿದೆ.

ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಆಚಾರ್ಯ' ಸಿನಿಮಾಕ್ಕಾಗಿ ಭಾರಿ ದೊಡ್ಡ ಸೆಟ್ ಒಂದನ್ನು ಹಾಕಲಾಗಿದ್ದು, ಈ ಸೆಟ್‌ ಈ ವರೆಗೆ ಭಾರತದಲ್ಲಿ ನಿರ್ಮಿಸಲಾದ ಬೃಹತ್ ಆದ ಸಿನಿಮಾ ಸೆಟ್ ಎಂಬ ದಾಖಲೆಗೆ ಸೇರಿದೆ.

ನೂರಾರು ಮಂದಿ ಕಾರ್ಮಿಕರ ಜೊತೆ ಸೇರಿ ಭಾರಿ ಬೃಹತ್ ಆದ ದೇವಸ್ಥಾನ ನಗರವನ್ನೇ ನಿರ್ಮಿಸಿದ್ದಾರೆ ಸಿನಿಮಾದ ಕಲಾ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕ. ತಮ್ಮ ಸಿನಿಮಾದ ಬೃಹತ್ ಸೆಟ್‌ ನ ವಿಡಿಯೋವನ್ನು ನಟ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

20 ಎಕರೆಯಲ್ಲಿ ನಿರ್ಮಿಸಲಾಗಿರುವ ಸೆಟ್

ಹೈದರಾಬದ್‌ ಹೊರ ಭಾಗದಲ್ಲಿ ಬರೋಬ್ಬರಿ 20 ಎಕರೆ ಪ್ರದೇಶದಲ್ಲಿ ದೊಡ್ಡ ಟೆಂಪಲ್ ಟೌನ್ ಅನ್ನು ನಿರ್ಮಿಸಲಾಗಿದೆ. ಸೆಟ್‌ನ ಮುಂಭಾಗವಾದ ದೇವಸ್ಥಾನದ ಗಾಳಿಗೋಪುರದ ವಿಡಿಯೋವನ್ನು ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅದ್ಭುತವಾಗಿ ನಿರ್ಮಿಸಲಾಗಿರುವ ಗೋಪುರ

ಅದ್ಭುತವಾಗಿ ನಿರ್ಮಿಸಲಾಗಿರುವ ಗೋಪುರ

ಚಿರಂಜೀವಿ ಹಂಚಿಕೊಂಡಿರುವ ವಿಡಿಯೋದಲ್ಲಿರುವ ಗಾಳಿ ಗೋಪುರ ನಿಜದ ಗೋಪುರವೇನೋ ಎಂಬಂತೆ ಅದ್ಭುತವಾಗಿ ಸೃಷ್ಟಿಸಲಾಗಿದೆ. ದೇವತೆಗಳು, ಪ್ರಾಣಿಗಳು ಪ್ರತಿಯೊಂದು ಸಣ್ಣ ವಿವರಗಳ ಮೇಲೂ ವಿಶೇಷ ಕಾಳಜಿ ವಹಿಸಿ ನಿರ್ಮಿಸಿರುವುದು ವಿಡಿಯೋದಲ್ಲಿ ತಿಳಿದುಬರುತ್ತಿದೆ.

ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್

ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್

ವಿಡಿಯೋದಲ್ಲಿ ಮಾತನಾಡಿರುವ ಚಿರಂಜೀವಿ, ಈ ಸೆಟ್ ನಿರ್ಮಿಸಿದ ಕಲಾ ನಿರ್ದೇಶಕ ಸುರೇಶ್ ಸೆಲ್ವರಾಜನ್, ಸೆಟ್‌ ನ ಕಲ್ಪನೆ ಮಾಡಿದ ನಿರ್ದೇಶಕ ಕೊರಟಾಲ ಶಿವ, ನಿರ್ಮಾಪಕರಾದ ನಿರಂಜನ ರೆಡ್ಡಿ, ರಾಮ್ ಚರಣ್ ಅವರುಗಳಿಗೆ ಅಭಿನಂದಿಸಿದ್ದಾರೆ ಚಿರಂಜೀವಿ.

ಭಾರಿ ಬಜೆಟ್‌ನ ಸೆಟ್‌

ಭಾರಿ ಬಜೆಟ್‌ನ ಸೆಟ್‌

ಈ ಬೃಹತ್ ಸೆಟ್‌ಗಾಗಿ ಸುಮಾರು 80 ಕೋಟಿ ಖರ್ಚಾಗಿದೆ ಎನ್ನಲಾಗುತ್ತಿದೆ. ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ, ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Actor Chiranjeevi shared India's biggest movie set which built for Acharya Telugu movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X