For Quick Alerts
  ALLOW NOTIFICATIONS  
  For Daily Alerts

  'ಸೂಪರ್ ಮಚ್ಚಿ' ನಾಯಕನಿಗೆ ಕೊರೊನಾ ಪಾಸಿಟಿವ್

  |

  ಕೊರೊನಾ ಎರಡನೇ ಅಲೆಯಿಂದ ದೇಶ ನಲುಗಿ ಹೋಗಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕು ಜನರಲ್ಲಿ ಆತಂಕ ಸೃಷ್ಟಿಸಿದೆ. ಅನೇಕ ಸಿನಿ ಸೆಲೆಬ್ರಿಟಿಗಳಿಗೂ ಕೊರೊನಾ ಸೋಂಕು ತಗುಲಿದ್ದು, ಕಿಚಿತ್ಸೆ ಪಡೆಯುತ್ತಿದ್ದಾರೆ. ಇದೀಗ ತೆಲುಗಿನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.

  ಈ ಬಗ್ಗೆ ನಟ ಕಲ್ಯಾಣ್ ದೇವ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಕಲ್ಯಾಣ್ ದೇವ್ ಕಿಚಿತ್ಸೆ ಪಡೆಯುತ್ತಿದ್ದಾರೆ. 'ನಿನ್ನೆ (ಏಪ್ರಿಲ್ 21) ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಕಡಿಮೆ ಲಕ್ಷಣ ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿದ್ದೇನೆ. ಮತ್ತೆ ಸ್ಟ್ರಾಂಗ್ ಆಗಿ ವಾಪಸ್ ಆಗುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಕಲ್ಯಾಣ್ ದೇವ್ ಮಾವ ಮೆಗಾಸ್ಟಾರ್ ಚಿರಂಜೀವಿ ಅವರ ವ್ಯಾನಿಟಿ ವ್ಯಾನ್ ಚಾಲಕ ಕೊರೊನಾಗೆ ಬಲಿಯಾಗಿದ್ದಾರೆ. ಹಾಗಾಗಿ ಚಿರಂಜೀವಿ ಕುಟುಂಬ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ರಾಮ್ ಚರಣ್ ಮತ್ತು ಚಿರಂಜೀವಿ ಕೂಡ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

  ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಅವರ ತೋಟದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿರುವ ನಟ ಸೋನು ಸೂದ್ ಕೂಡ ಕೊರೊನಾ ಪಾಸಿಟಿವ್‌ನಿಂದ ಕ್ವಾರಂಟೈನ್ ಆಗಿದ್ದಾರೆ. ಸದ್ಯ ಆಚಾರ್ಯ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ.

  ಇತ್ತೀಚಿಗಷ್ಟೆ ನಟ ರಾಮ್ ಚರಣ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದೀಗ ಮತ್ತೆ ಕುಟುಂಬದ ಸದಸ್ಯರಿಗೆ ಮತ್ತು ಚಿತ್ರೀಕರಣ ಸೆಟ್‌ನಲ್ಲಿ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.

  ಕೊರೋನಾ ಸಂಕಷ್ಟದಲ್ಲಿ ಸ್ಟಾರ್ ನಟರಿಗೆ ಬಹಿರಂಗ ಪತ್ರ ವೈರಲ್!! | Filmibeat Kannada

  ಕಲ್ಯಾಣ್ ಸದ್ಯ ಸೂಪರ್ ಮಚ್ಚಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಚಿತ್ರದಲ್ಲಿ ಕನ್ನಡದ ನಟಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್‌ನ ಮತ್ತೋರ್ವ ನಟಿ ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಕೂಡ ಬಣ್ಣ ಹಚ್ಚಿದ್ದಾರೆ.

  English summary
  Telugu Actor Chiranjeevi son in law Kalyaan Dhev tests positive for Corona.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X