For Quick Alerts
  ALLOW NOTIFICATIONS  
  For Daily Alerts

  ಮೆಗಾ ಸ್ಟಾರ್ ಚಿರಂಜೀವಿಯ 152ನೇ ಚಿತ್ರದ ಶೀರ್ಷಿಕೆ ಇದೇನಾ.?

  |

  ಮೆಗಾ ಸ್ಟಾರ್ ಚಿರಂಜೀವಿ ಈಸ್ ಬ್ಯಾಕ್ ಇನ್ ಆಕ್ಷನ್. 'ಸೈರಾ ನರಸಿಂಹ ರೆಡ್ಡಿ' ಚಿತ್ರ ಬಿಡುಗಡೆ ಆಗಿ ಜಸ್ಟ್ ಒಂದು ತಿಂಗಳು ಕಳೆದಿದೆ ಅಷ್ಟೇ. ಅಷ್ಟು ಬೇಗ ಹೊಸ ಪ್ರಾಜೆಕ್ಟ್ ಗೆ ಚಿರಂಜೀವಿ ಜೈ ಅಂದಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಸಕ್ಸಸ್ ಆದ ಖುಷಿಯಲ್ಲೇ ನೂತನ ಚಿತ್ರಕ್ಕೆ ಚಿರಂಜೀವಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  152ನೇ ಚಿತ್ರಕ್ಕೆ ಚಿರಂಜೀವಿ ಈಗಾಗಲೇ ಅಧಿಕೃತ ಚಾಲನೆ ನೀಡಿದ್ದಾರೆ. ಸಿನಿಮಾದ ಮುಹೂರ್ತ ಸಮಾರಂಭ ಕೂಡ ಮುಗಿದಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಬಾರಿ ಚಿರಂಜೀವಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗಾದ್ರೆ, ಚಿರಂಜೀವಿ ಅಭಿನಯದ 152ನೇ ಚಿತ್ರದ ಶೀರ್ಷಿಕೆ ಏನು ಅಂತೀರಾ.? ಇದೇ ಚಿತ್ರದ ಕುರಿತು ಲೇಟೆಸ್ಟ್ ಅಪ್ ಡೇಟ್ಸ್ ಇಲ್ಲಿದೆ, ಓದಿರಿ...

  ಚಿರಂಜೀವಿ ಹೊಸ ಚಿತ್ರದ ಟೈಟಲ್ ಇದೇನಾ.?

  ಚಿರಂಜೀವಿ ಹೊಸ ಚಿತ್ರದ ಟೈಟಲ್ ಇದೇನಾ.?

  ಚಿರಂಜೀವಿ ಅಭಿನಯದ 152ನೇ ಚಿತ್ರಕ್ಕೆ 'ಗೋವಿಂದ ಹರಿ ಗೋವಿಂದ' ಎಂಬ ಟೈಟಲ್ ಇಡಲಾಗಿದ್ಯಂತೆ. ಶೀರ್ಷಿಕೆ ಕೇಳಿದ ಕೂಡಲೆ ಇದು ಭಕ್ತಿ ಪ್ರಧಾನ ಚಿತ್ರ ಇರಬಹುದಾ ಎಂಬ ಅನುಮಾನ ಮೂಡುವುದು ಸಹಜ. ಹಾಗೇ, ಈ ಚಿತ್ರದಲ್ಲಿ ದೇವರು ಮತ್ತು ಸಾಮಾಜಿಕ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಕೊರಟಾಲ ಶಿವ ರೆಡಿ ಮಾಡಿದ್ದಾರೆ. ಕಥೆ ಕೇಳಿದ ಕೂಡಲೆ ಇಂಪ್ರೆಸ್ ಆದ ಚಿರಂಜೀವಿ ಹೆಚ್ಚು ತಡ ಮಾಡದೆ ಚಿತ್ರವನ್ನು ಆರಂಭಿಸಿದ್ದಾರೆ.

  ಮೆಗಾಸ್ಟಾರ್ ಚಿರಂಜೀವಿಯ 152ನೇ ಚಿತ್ರ ಆರಂಭಮೆಗಾಸ್ಟಾರ್ ಚಿರಂಜೀವಿಯ 152ನೇ ಚಿತ್ರ ಆರಂಭ

  ಲೀಕ್ ಆದ ಒನ್ ಲೈನ್ ಸ್ಟೋರಿ

  ಲೀಕ್ ಆದ ಒನ್ ಲೈನ್ ಸ್ಟೋರಿ

  ಚಿರಂಜೀವಿಯ ಹೊಸ ಚಿತ್ರಕ್ಕೆ 'ಗೋವಿಂದ ಹರಿ ಗೋವಿಂದ' ಎಂಬ ಶೀರ್ಷಿಕೆ ಫೈನಲ್ ಆಗಿದ್ಯಂತೆ ಎಂಬ ಅಂತೆ-ಕಂತೆ ಕೇಳಿಬಂದ ಬಳಿಕ ಸಿನಿಮಾದ ಒನ್ ಲೈನ್ ಸ್ಟೋರಿ ಕೂಡ ಲೀಕ್ ಆಗಿದೆ. 'ಗೋವಿಂದ ಹರಿ ಗೋವಿಂದ' ಎಂಬ ಟೈಟಲ್ ಗೆ ತಕ್ಕ ಹಾಗೆ ದೇವಾಲಯವೊಂದರ ಸುತ್ತ ಕಥೆ ಸಾಗಲಿದ್ದು, ದೇವಸ್ಥಾನಗಳಲ್ಲಿ ನಡೆಯುವ ಅಕ್ರಮಗಳ ಬಗ್ಗೆ ನಿರ್ದೇಶಕರು ಹೇಳಲು ಹೊರಟಿದ್ದಾರೆ.

  ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!

  ಡಬಲ್ ರೋಲ್ ನಲ್ಲಿ ಚಿರಂಜೀವಿ

  ಡಬಲ್ ರೋಲ್ ನಲ್ಲಿ ಚಿರಂಜೀವಿ

  'ಗೋವಿಂದ ಹರಿ ಗೋವಿಂದ' ಚಿತ್ರದಲ್ಲಿ ಚಿರಂಜೀವಿ ಪಾತ್ರವೇನು ಎಂಬುದು ಬಹಿರಂಗ ಆಗಿಲ್ಲ. ಆದರೆ ಚಿರಂಜೀವಿ ಡಬಲ್ ರೋಲ್ ನಲ್ಲಿ ಮಿಂಚಿಲಿದ್ದಾರಂತೆ ಎಂಬ ಅಂತೆ-ಕಂತೆ ಸಹಜವಾಗಿ ಕುತೂಹಲ ಸೃಷ್ಟಿಸಿದೆ. ಚಿರಂಜೀವಿಗೆ ಈ ಚಿತ್ರದಲ್ಲಿ ಯಾರು ಜೋಡಿಯಾಗಬಹುದು ಎಂಬುದಿನ್ನೂ ಫೈನಲ್ ಆಗಿಲ್ಲ. ಆದ್ರೆ, ತ್ರಿಷಾ ಹೆಸರು ಮಾತ್ರ ಎಲ್ಲೆಡೆ ಕೇಳಿಬರುತ್ತಿದೆ.

  ರಾಮ್ ಚರಣ್ ತೇಜಾ ಕಥೆಯೇನು.?

  ರಾಮ್ ಚರಣ್ ತೇಜಾ ಕಥೆಯೇನು.?

  ಎಸ್.ಎಸ್.ರಾಜಮೌಳಿ ನಿರ್ದೇಶನದ 'ಆರ್.ಆರ್.ಆರ್' ಸಿನಿಮಾದಲ್ಲಿ ಬಿಜಿಯಾಗಿರುವುದರಿಂದ ಪುತ್ರ ರಾಮ್ ಚರಣ್ ತೇಜಾ, ಚಿರಂಜೀವಿಯ 152 ಸಿನಿಮಾದಲ್ಲಿ ಸಕ್ರಿಯವಾಗಿ ತೊಡಗುವುದು ಬಹುತೇಕ ಅನುಮಾನ. ಹಾಗ್ನೋಡಿದ್ರೆ, 'ಸೈ ರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ನಿರ್ಮಾಣ ಕಾರ್ಯದಿಂದ ರಾಮ್ ಚರಣ್ ತೇಜಾ ದೂರ ಉಳಿಯುವ ಸಾಧ್ಯತೆ ಇದೆ ಎಂಬ ಸುದ್ದಿ ತೆಲುಗು ಸಿನಿ ರಂಗದಲ್ಲಿ ಹರಿದಾಡುತ್ತಿದೆ.

  English summary
  According to the latest reports, Mega Star Chiranjeevi starrer 152nd movie is titled as Govinda Hari Govinda directed by Koratala Shiva.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X