ಮುನ್ನುಗ್ಗಿದ ನಾಗಾರ್ಜುನ, ಹಿಂದೆ ಸರಿದ ಚಿರಂಜೀವಿ!

ಕೊರೊನಾ ಮೂರನೇ ಅಲೆಯಿಂದಾಗಿ ಭಾರತೀಯ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ಅಲೆಯ ಬಳಿಕ ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುತ್ತಿದೆ ಎಂದುಕೊಳ್ಳುವಾಗಲೇ ಮೂರನೇ ಅಲೆ ಬಂದು ಅಪ್ಪಳಿಸಿ ಎಲ್ಲರನ್ನೂ ಹೈರಾಣು ಮಾಡಿದೆ.

ತೆಲುಗು ಚಿತ್ರರಂಗವಂತೂ ಕೊರೊನಾದ ಜೊತೆಗೆ ಸರ್ಕಾರದ ಜೊತೆಗೂ ಬಡಿದಾಡುವ ಕಾರ್ಯದಲ್ಲಿ ನಿರತವಾಗಿದೆ. ಆಂಧ್ರ ಸರ್ಕಾರವು ರಾಜ್ಯದ ಚಿತ್ರಮಂದಿರಗಳ ಟಿಕೆಟ್ ದರವನ್ನು ತೀವ್ರವಾಗಿ ತಗ್ಗಿಸಿರುವ ಕಾರಣದಿಂದಾಗಿ ತೆಲುಗು ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದೆ.

ತೆಲುಗಿನ ದೊಡ್ಡ ಬಜೆಟ್‌ನ ಸ್ಟಾರ್ ನಟರ ಸಿನಿಮಾಗಳು ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿ ಪ್ರಚಾರ ಕಾರ್ಯದಲ್ಲಿ ನಿರವಾಗಿದ್ದಾಗಲೇ ಲಾಕ್‌ಡೌನ್ ಆಗಿ ಬಹುತೇಕ ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದವು. 'ಆರ್ಆರ್ಆರ್', 'ರಾಧೆ-ಶ್ಯಾಮ್' ಅದರಲ್ಲಿ ಪ್ರಮುಖ ಸಿನಿಮಾಗಳು. ಇದೀಗ ನಟ ಚಿರಂಜೀವಿ ಸಹ ತಮ್ಮ ಹೊಸ ಸಿನಿಮಾ 'ಆಚಾರ್ಯ' ಬಿಡುಗಡೆಯನ್ನು ಮುಂದೂಡಿದೆ.

Chiranjeevi Starrer Acharya Movie Release Postponed

ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗುವುದಕ್ಕಿತ್ತು. ಆದರೆ 'ಆರ್ಆರ್ಆರ್' ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು. ಬಳಿಕ 'ಆರ್ಆರ್ಆರ್' ಸಿನಿಮಾ ಬಿಡುಗಡೆ ಮುಂದೂಡಿದಾಗ 'ಆಚಾರ್ಯ' ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ ಎನ್ನಲಾಯಿತು. ಆದರೆ ಅದು ಸುಳ್ಳಾಗಿದೆ. 'ಆಚಾರ್ಯ' ಸಿನಿಮಾ ಬಿಡುಗಡೆಯನ್ನು ಮುಂದೂಡಿದ್ದು, ಹೊಸ ದಿನಾಂಕವನ್ನು ಘೋಷಣೆ ಮಾಡಿಲ್ಲ.

ಆದರೆ ನಟ ನಾಗಾರ್ಜುನ ಹಾಗೂ ಅವರ ಪುತ್ರ ನಾಗ ಚೈತನ್ಯ ನಟಿಸಿರುವ 'ಬಂಗಾರ್ರಾಜು' ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಿದೆ. 'ಆರ್ಆರ್ಆರ್', 'ರಾಧೆ-ಶ್ಯಾಮ್', 'ವಾಲಿಮೈ' ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆಯನ್ನು ಮುಂದೂಡಿದ ಕಾರಣ ಜೊತೆಗೆ ಸಂಕ್ರಾಂತಿ ಹಬ್ಬದ ಸುವರ್ಣಾವಕಾಶವೂ ಇದ್ದ ಕಾರಣ ನಾಗಾರ್ಜುನ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಒಳ್ಳೆಯ ಓಪನಿಂಗ್ ಅನ್ನು ಸಹ ಕಂಡಿದೆ.

'ಬಂಗಾರ್ರಾಜು' ಸಿನಿಮಾ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿಲ್ಲವಾದರೂ ಯಾವುದೇ ಪ್ರತಿಸ್ಪರ್ಧೆಯೇ ಇರದ ಕಾರಣ ಒಳ್ಳೆಯ ಪ್ರದರ್ಶನವನ್ನೇ ಸಿನಿಮಾ ಕಾಣುತ್ತಿದೆ. 'ಬಂಗಾರ್ರಾಜು' ಜೊತೆಗೆ 'ರೌಡಿ ಬಾಯ್' ಹಾಗೂ ಕನ್ನಡತಿ ರಚಿತಾ ರಾಮ್ ನಟಿಸಿರುವ ತೆಲುಗು ಸಿನಿಮಾ 'ಸೂಪರ್ ಮಚ್ಚಿ' ಹಾಗೂ ಇನ್ನೂ ಕೆಲವು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಆ ಸಿನಿಮಾಗಳು ಹೊಸಬರ ಸಿನಿಮಾಗಳಾಗಿರುವ ಕಾರಣ 'ಬಂಗಾರ್ರಾಜು' ಸಿನಿಮಾಕ್ಕೆ ಪೈಪೋಟಿ ನೀಡುವಲ್ಲಿ ವಿಫಲವಾಗಿವೆ. ಮೊದಲ ದಿನವೇ ಈ ಸಿನಿಮಾ 11.50 ಕೋಟಿ ಗಳಿಸಿದೆ. ಇದು ನಾಗ ಚೈತನ್ಯ ಅಭಿನಯದ ಸಿನಿಮಾಕ್ಕೆ ದೊರೆತಿರುವ ಅತಿ ದೊಡ್ಡ ಮೊತ್ತ.

ತೆಲುಗಿನಲ್ಲಿ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್', ಪ್ರಭಾಸ್ ನಟನೆಯ 'ರಾಧೆ-ಶ್ಯಾಮ್', ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್', ಮಹೇಶ್ ಬಾಬು ನಟನೆಯೆ 'ಸರ್ಕಾರು ವಾರಿ ಪಾಟ', ರವಿತೇಜ ನಟನೆಯ 'ಖಿಲಾಡಿ', ವೆಂಕಟೇಶ್, ವರುಣ್ ತೇಜ್ ನಟನೆಯ 'ಎಫ್‌ 3' ಇನ್ನೂ ಹಲವು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಆದರೆ ಕೋವಿಡ್ ಕಾರಣದಿಂದಾಗಿ ಈ ಎಲ್ಲ ಸಿನಿಮಾಗಳ ಬಿಡುಗಡೆ ಮುಂದೂಡಲಾಗಿದೆ.

More from Filmibeat

English summary
Actor Chiranjeevi starrer Acharya movie release postponed. Nagarjuna and Naga Chaitanya's Bangarraju movie released and collects good money of first day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X