ಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ 'ಆಚಾರ್ಯ' ಸಿನಿಮಾತಂಡ
ಟಾಲಿವುಡ್ ನ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಡಿಸೆಂಬರ್ ನಿಂದ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ. ಆಚಾರ್ಯ ತಂಡದ ಸುದ್ದಿ ಕೇಳಿ ಮೆಗಾ ಸ್ಟಾರ್ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.
ಹೌದು, ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾದ ಟೀಸರ್ ರಿಲೀಸ್ ಗೆ ದಿನಾಂಕ ಫಿಕ್ಸ್ ಆಗಿದೆ. ಆಚಾರ್ಯ ಸಿನಿಮಾ ಸೆಟ್ಟೇರಿದಾಗಿನಿಂದ ಚಿರಂಜೀವಿ ಅವರ ಒಂದು ಲುಕ್ ಬಿಟ್ಟರೆ ಸಿನಿಮಾದಿಂದ ಯಾವುದೇ ಅಪ್ ಡೇಟ್ ಹೊರಬಿದ್ದರಲಿಲ್ಲ. ಇದೀಗ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸುತ್ತಿದೆ ಸಿನಿಮಾತಂಡ.
ಅಂದಹಾಗೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿರಂಜೀವಿ, ನಿರ್ದೇಶಕ ಕೊರಟಾಲ ಶಿವ ಅವರ ಕಾಲೆಳೆದಿದ್ದಾರೆ. ಟೀಸರ್ ಮಾಡುತ್ತೀರೋ ಅಥವಾ ನಾನೇ ಲೀಕ್ ಮಾಡಬೇಕಾ ಎಂದು ನಿರ್ದೇಶಕರಿಗೆ ಹೇಳಿದ್ದಾರೆ. ಈ ಮೊದಲು ಚಿರಂಜೀವಿ ಸಿನಿಮಾದ ಟೈಟಲ್ ಅನೌನ್ಸ್ ಆಗುವ ಮೊದಲೇ ಬಾಯಿತಪ್ಪಿ ಚಿತ್ರದ ಟೈಟಲ್ ಬಹಿರಂಗ ಪಡಿಸಿದ್ದರು.

ಇದೀಗ ಟೀಸರ್ ಕೂಡ ಲೀಕ್ ಮಾಡಬೇಕಾ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿ ನಿರ್ದೇಶಕ ಕೊರಟಾಲ ಶಿವ ಟೀಸರ್ ರಿಲೀಸ್ ಡೇಟ್ ಅನ್ನು ಬಹಿರಂಗ ಪಡಿಸಿ ಚಿರಂಜೀವಿ ಅವರಿಗೆ ಟ್ಯಾಗ್ ಮಾಡಿದ್ದಾರೆ. ಕೊರಟಾಲ ಶಿವ ಅವರ ಟ್ವೀಟ್ ಗೆ ಭರವಸೆ ಉಳಿಸಿಕೊಂಡಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.
ಅಂದಹಾಗೆ ಬಹು ನಿರೀಕ್ಷೆಯ ಆಚಾರ್ಯ ಸಿನಿಮಾದ ಟೀಸರ್ ಜನವರಿ 29ರಂದು ರಿಲೀಸ್ ಆಗುತ್ತಿದೆ. ಸಂಜೆ 4.05ಕ್ಕೆ ಆಚಾರ್ಯ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಇತ್ತೀಚಿಗೆ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿ, ರಾಮ್ ಚರಣ್ ಲುಕ್ ರಿಲೀಸ್ ಮಾಡಿದ್ದರು.
ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ನಟ ಸೋನು ಸೂದ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದ ನಟ ಭಜರಂಗಿ ಲೋಕಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.


Click it and Unblock the Notifications











