ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದ ಚಿತ್ರೀಕರಣ ಮುಂದಿನ ವರ್ಷಕ್ಕೆ ಮುಂದೂಡಿಕೆ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಬಹುನಿರೀಕ್ಷೆಯ 'ಆಚಾರ್ಯ' ಸಿನಿಮಾದ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದರು. ಆದರೆ ಶೂಟಿಂಗ್ ಗೆ ಹೊರಡುವ ಮೊದಲು ಕೊರೊನಾ ಪರೀಕ್ಷೆಗೆ ಒಳಗಾದ ಚಿರಂಜೀವಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಚಿರಂಜೀವಿ ಸದ್ಯ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಚಿರಂಜೀವಿ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಚಿರಂಜೀವಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನಲೆ 'ಆಚಾರ್ಯ' ಸಿನಿಮಾತಂಡ ದೊಡ್ಡ ನಿರ್ಧಾರಕ್ಕೆ ಬಂದಿದೆ. ಹೌದು, ಸಿನಿಮಾ ಚಿತ್ರೀಕರಣವನ್ನು ಮುಂದಿನ ವರ್ಷಕ್ಕೆ ಪೋಸ್ಟ್ ಪೋನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆಚಾರ್ಯ ಸಿನಿಮಾದ ಚಿತ್ರೀಕರಣವನ್ನು ಲಾಕ್ ಡೌನ್ ಬಳಿಕ ಪ್ರಾರಂಭಿಸಬೇಕಿತ್ತು. ಆದರೆ ಚಿತ್ರೀಕರಣಕ್ಕೆ ಹೊರಡುವ ಮೊದಲೇ ಚಿರಂಜೀವಿಗೆ ಕೊರೊನಾ ಬಂದಿರುವುದರಿಂದ ಸಿನಿಮಾತಂಡ ಚಿತ್ರೀಕರಣವನ್ನೇ ಮುಂದಕ್ಕೆ ಹಾಕಿದೆ .

Chiranjeevi Starrer Acharya Shoot Gets Postponed By Two Months

ಮೂಲಗಳ ಪ್ರಕಾರ ಆಚಾರ್ಯ ಸಿನಿಮಾದ ಚಿತ್ರೀಕರಣ 2 ತಿಂಗಳಕಾಲ ಪೋಸ್ಟ್ ಪೋನ್ ಆಗಿದೆಯಂತೆ. ಅಂದರೆ ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳಲಿದ್ದಾರೆ. ಮತ್ತೋರ್ವ ಸ್ಟಾರ್ ನಟಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾರು ಎಂದು ರಿವೀಲ್ ಆಗಿಲ್ಲ.

ಈ ಸಿನಿಮಾ ಜೊತೆಗೆ ಚಿರಂಜೀವಿ ತಮಿಳು ಮತ್ತು ಮಲಯಾಳಂ ಸಿನಿಮಾಗಳ ರಿಮೇಕ್ ನಲ್ಲೂ ನಟಿಸಲಿದ್ದಾರೆ. ಸದ್ಯ ಎಲ್ಲಾ ಸಿನಿಮಾಗಳ ಚಿತ್ರೀಕರಣ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಆಚಾರ್ಯ ಸಿನಿಮಾದಲ್ಲಿ ನಟ ರಾಮ್ ಚರಣ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಸದ್ಯ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಸದ್ಯ ಹೋಮ್ ಕ್ವಾರಂಟೈನ್ ನಲ್ಲಿರುವ ಚಿರಂಜೀವಿ ಶೀಘ್ರ ಗಣಮುಖರಾಗಲಿ ಎಂದು ಅಭಿಮಾನಿಗಳ ಜೊತೆಗೆ ಸಿನಿಮಾರಂಗದ ಗಣ್ಯರು ಹಾರೈಸುತ್ತಿದ್ದಾರೆ. ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಟ್ವೀಟ್ ಮಾಡಿ, 'ಕೊರೊನಾ ವೈರಸ್ ವಿರುದ್ಧ ಎಚ್ಚರಿಕೆ ವಹಿಸಲು ಅವರು ಜಾಗೃತಿ ವಿಡಿಯೋಗಳನ್ನು ಸಹ ಮಾಡಿದ್ದಾರೆ. ಅಣ್ಣನಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಬೇಸರ ತಂದಿದೆ. ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೆ ಪರೀಕ್ಷೆ ಬಳಿಕ ಪಾಸಿಟಿವ್ ಇರುವುದು ಗೊತ್ತಾಗಿದೆ.' ಎಂದು ಹೇಳಿದ್ದಾರೆ.

More from Filmibeat

English summary
Chiranjeevi starrer Acharya shoot got postponed by two months after chiranjeevi tests positive for corona.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X