ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್' ಮೆಗಾ ಟ್ರೀಟ್!
'ಆಚಾರ್ಯ' ಆಗಿ ಸೋಲುಂಡ ಮೆಗಾಸ್ಟಾರ್ ಚಿರಂಜೀವಿ 'ಗಾಡ್ ಫಾದರ್' ಆಗಿ ಗೆಲ್ಲುವ ಹಠಕ್ಕೆ ಬಿದ್ದಿದ್ದಾರೆ. ಮಲಯಾಳಂನ ಸೂಪರ್ ಹಿಟ್ 'ಲೂಸಿಫರ್' ರಿಮೇಕ್ ಇದಾಗಿದ್ದು, ಮೋಹನ್ ಲಾಲ್ ಮಾಡಿದ್ದ ಪಾತ್ರದಲ್ಲಿ ಚಿರು ಮಿಂಚಿದ್ದಾರೆ. ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲೇ ಟೀಸರ್ ರಿಲೀಸ್ ಆಗಲಿದೆ.
ತಮಿಳು ನಿರ್ದೇಶಕ ಮೋಹನ್ ಕೆ. ರಾಜ ತೆಲುಗಿಗೆ ತಕ್ಕಂತೆ ಕಥೆಯನ್ನು ಕೊಂಚ ಬದಲಿಸಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 3 ವರ್ಷಗಳ ಹಿಂದೆ 'ಲೂಸಿಫರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪೃಥ್ವಿರಾಜ್ ನಿರ್ದೇಶನದ ಜೊತೆಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ತೆಲುಗಿನಲ್ಲಿ ಈ ಪಾತ್ರವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಮಾಡ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಚಿರು ಖೈದಿಯಾಗಿಯೂ ಕಾಣಿಸಿಕೊಳ್ಳಿದ್ದಾರೆ. ಚಿರು 'ಖೈದಿ'ಯಾಗಿ ನಟಿಸಿದ ಸಿನಿಮಾಗಳ ಹಿಟ್ ಆಗಿದೆ. ಹಾಗಾಗಿ ಈ ಸಿನಿಮಾ ಕೂಡ ಹಿಟ್ ಆಗುತ್ತೆ ಅನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಈಗಾಗಲೇ 'ಗಾಡ್ ಫಾದರ್' ಪೋಸ್ಟರ್‌ಗಳು, ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಎನ್. ವಿ ಪ್ರಸಾದ್ ಹಾಗೂ ಆರ್.ಬಿ ಚೌಧರಿ ಜೊತೆ ಸೇರಿ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಆಚಾರ್ಯ' ಸಿನಿಮಾದಲ್ಲಿ ನಿರ್ಮಾಪಕರಾಗಿಯೂ ಸೋತ ರಾಮ್ ಚರಣ್ ಈ ಸಿನಿಮಾ ಮೂಲಕ ನಷ್ಟವನ್ನು ಸರಿದೂಗಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಆಗಸ್ಟ್ 21ಕ್ಕೆ 'ಗಾಡ್ ಫಾದರ್' ಟೀಸರ್
ಆಗಸ್ಟ್ 22ಕ್ಕೆ ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬ. ಆದರೆ ಅದಕ್ಕಿಂತ ಒಂದು ದಿನ ಮೊದಲೇ 'ಗಾಡ್ ಫಾದರ್' ಟೀಂ ಅಭಿಮಾನಿಗಳಿಗೆ ಸ್ಪೆಷಲ್ ಟ್ರೀಟ್ ಕೊಡ್ತಿದೆ. ಚಿತ್ರದ ಹೈವೋಲ್ಟೇಜ್ ಟೀಸರ್ ಕಟ್ ಮಾಡ್ತಿದ್ದು, ಚಿರು ಬರ್ತ್‌ಡೇ ಸಂಭ್ರಮವನ್ನು ಡಬ್ ಮಾಡುವಂತಹ ಗಿಫ್ಟ್ ಕೊಡುವುದಕ್ಕೆ ಪ್ಲಾನ್ ನಡೀತಿದೆ. ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ರಕ್ತದಾನ, ನೇತ್ರದಾನ ನೋಂದಣಿ ಶಿಬಿರಗಳನ್ನು ಏರ್ಪಡಿಸುತ್ತಿದ್ದು, 'ಗಾಡ್ ಫಾದರ್' ಟೀಸರ್ ಸಂಭ್ರಮವನ್ನು ಡಬಲ್ ಮಾಡಲಿದೆ.

'ಗಾಡ್ ಫಾದರ್' ಚಿತ್ರದಲ್ಲಿ ಸಲ್ಲು
ಸಲ್ಮಾನ್ ಖಾನ್ ದಕ್ಷಿಣಭಾರತದ ಸಿನಿಮಾಗಳಲ್ಲಿ ಈವರೆಗೆ ನಟಿಸಿಲ್ಲ. ಆದರೆ ಚಿರಂಜೀವಿ ಜೊತೆಗಿನ ಸ್ನೇಹಕ್ಕೆ ಕಟ್ಟುಬಿಟ್ಟು 'ಗಾಡ್ ಫಾದರ್' ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಇಬ್ಬರು ಹೆಜ್ಜೆ ಹಾಕಿರುವ ಹಾಡನ್ನು ಸೆರೆಹಿಡಿಯಲಾಯಿತು. ಚಿತ್ರದಲ್ಲಿ ಸಲ್ಲು ಪಾತ್ರಕ್ಕೂ ಸಿಕ್ಕಾಪಟ್ಟೆ ಪ್ರಾಮುಖ್ಯತೆ ಇದ್ದು, ಇಬ್ಬರು ಮೆಗಾಸ್ಟಾರ್‌ಗಳನ್ನು ಒಂದೇ ಸಿನಿಮಾದಲ್ಲಿ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ.

ತಡವಾಗುತ್ತಿದೆ 'ಗಾಡ್ ಫಾದರ್' ಎಂಟ್ರಿ
ಕಳೆದ ವರ್ಷ ಆಗಸ್ಟ್‌ನಲ್ಲಿ 'ಗಾಡ್ ಫಾದರ್' ಸಿನಿಮಾ ಚಿತ್ರೀಕರಣ ಶುರುವಾಯಿತು. ಆಸರೆ ಕಾರಣಾಂತರಗಳಿಂದ ಶೂಟಿಂಗ್ ತಡವಾಗುತ್ತಿದೆ. ಕಳೆದ ವರ್ಷ ಚಿರು ಕೈಗೆ ಶಸ್ತ್ರ ಚಿಕಿತ್ಸೆಯಾದ ಬೆನ್ನಲ್ಲೇ ಚಿತ್ರೀಕರಣ ನಿಲ್ಲಿಸಲಾಗಿತ್ತು. ಇನ್ನು ಕೊರೊನಾ ಹಾವಳಿಯಿಂದಲೂ ಶೂಟಿಂಗ್‌ಗೆ ಹಿನ್ನಡೆ ಉಂಟಾಗಿತ್ತು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸ್ತಿದ್ದಾರೆ. ಸತ್ಯದೇವ್, ಸುನಿಲ್, ನಿರ್ದೇಶಕ ಪೂರಿ ಜಗನ್ನಾಥ್ ಕೂಡ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಕನ್ನಡದಲ್ಲೂ 'ಗಾಡ್ ಫಾದರ್' ಹವಾ
'ಲೂಸಿಫರ್' ಸಿನಿಮಾ ರಿಮೇಕ್ ಆಗಿರುವುದರಿಂದ ಮಲಯಾಳಂ ಬಿಟ್ಟು ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಈ ವರ್ಷ್ಯಾಂತ್ಯಕ್ಕೆ ತೆರೆಮೇಲೆ 'ಗಾಡ್ ಫಾದರ್' ಚಿರಂಜೀವಿ ಆರ್ಭಟ ಶುರುವಾಗಲಿದೆ. ತಮ್ಮ ವಯಸ್ಸಿಗೆ ತಕ್ಕ ಪಾತ್ರದಲ್ಲಿ ಚಿರು ಈ ಬಾರಿ ನಟಿಸ್ತಿದ್ದು, ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ನಿರೀಕ್ಷೆ ಮೂಡಿಸಿದೆ.


Click it and Unblock the Notifications











