twitter
    For Quick Alerts
    ALLOW NOTIFICATIONS  
    For Daily Alerts

    ಕರ್ನೂಲು ವಿಮಾನ ನಿಲ್ದಾಣಕ್ಕೆ ಹೆಸರಿಟ್ಟ ಜಗನ್: ಫುಲ್ ಖುಷ್ ಆದ ಚಿರಂಜೀವಿ

    |

    ಆಂಧ್ರಪ್ರದೇಶದ ಕರ್ನೂಲಿನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಇಂದಷ್ಟೆ ಸಿಎಂ ಜಗನ್ ಮೋಹನ್ ರೆಡ್ಡಿ ಉದ್ಘಾಟನೆ ಮಾಡಿದ್ದಾರೆ. ಹೊಸ ವಿಮಾನ ನಿಲ್ದಾಣದ ಹೆಸರನ್ನು ಸಹ ಇಂದೇ ಘೋಷಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಇಟ್ಟಿರುವ ಹೆಸರು ನಟ ಚಿರಂಜೀವಿ ಅವರಿಗೆ ಬಹಳ ಸಂತಸ ತಂದಿದೆ.

    ಇಂದಷ್ಟೆ ಉದ್ಘಾಟನೆಯಾದ ಕರ್ನೂಲು ವಿಮಾನ ನಿಲ್ದಾಣಕ್ಕೆ 'ಉಯ್ಯಾಲವಾಡ ನರಸಿಂಹರೆಡ್ಡಿ' ವಿಮಾನ ನಿಲ್ದಾಣ ಎಂದು ಹೆಸರಿಡಲಾಗಿದೆ. ಉಯ್ಯಾಲವಾಡ ನರಸಿಂಹ ರೆಡ್ಡಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುಂಚೆಯೇ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ ವೀರ ಉಯ್ಯಾಲವಾಡ ನರಸಿಂಹ ರೆಡ್ಡಿ.

    ಈ ಸ್ವಾತಂತ್ರ್ಯ ಹೋರಾಟಗಾರನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟಿದ್ದಕ್ಕೆ ನಟ ಚಿರಂಜೀವಿ ಸಂತಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ನಟ ಚಿರಂಜೀವಿ ಅವರು ಉಯ್ಯಾಲವಾಡ ನರಸಿಂಹ ರೆಡ್ಡಿ ಕುರಿತು ಸಿನಿಮಾ ಮಾಡಿದ್ದರು.

     Chiranjeevi Thanked CM Jagan For Naming Kurnool Airport As Uyyalawada Narasimha Reddy Airport

    'ಸೈ ರಾ ನರಸಿಂಹರೆಡ್ಡಿ' ಸಿನಿಮಾದಲ್ಲಿ ಚಿರಂಜೀವಿ, ಉಯ್ಯಾಲವಾಡ ನರಸಿಂಹ ರೆಡ್ಡಿ ಪಾತ್ರ ನಿರ್ವಹಿಸಿದ್ದರು. ನರಸಿಂಹ ರೆಡ್ಡಿ ಹೇಗೆ ಸಾಮಂತರನ್ನು ಒಂದು ಮಾಡಿಕೊಂಡು ಬ್ರಿಟೀಷರ ವಿರುದ್ಧ ಹೋರಾಡಿದ, ಹೇಗೆ ಮಡಿದ ಎಂಬುದನ್ನು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿತ್ತು.

    ಆ ಸಿನಿಮಾದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ ಕುರಿತು ನಮ್ಮ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ ಅವರಿಗೆ ಸಿಗಬೇಕಾದ ಗೌರವವನ್ನು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಜಗನ್ ಅವರು ನರಸಿಂಹ ರೆಡ್ಡಿ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟಿರುವುದು ಸಹಜವಾಗಿಯೇ ಚಿರಂಜೀವಿ ಅವರಿಗೆ ಖುಷಿ ತಂದಿದೆ.

    Recommended Video

    Yuvarathna film team lands in trouble!

    ಇದೇ ಸಿನಿಮಾದಲ್ಲಿ ನಟ ಸುದೀಪ್, ವಿಜಯ್ ಸೇತುಪತಿ, ಅಮಿತಾಬ್ ಬಚ್ಚನ್, ನಯನತಾರಾ, ತಮನ್ನಾ, ಜಗಪತಿ ಬಾಬು, ರವಿ ಕಿಶನ್ ಇನ್ನೂ ಹಲವು ತಾರಾ ನಟರು ನಟಿಸಿದ್ದರು.

    English summary
    Megastar Chiranjeevi thanked Andhra CM Jagan for naming Kurnool airport as Uyyalawada Narasimha Reddy airport.
    Thursday, March 25, 2021, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X