ನನ್ನ ಸಿನಿಮಾ ತಿರಸ್ಕರಿಸಿದ್ದಕ್ಕೆ ಥ್ಯಾಂಕ್ಸ್: ಸಾಯಿ ಪಲ್ಲವಿ ಬಗ್ಗೆ ಮೆಗಾಸ್ಟಾರ್ ಹೀಗೆ ಹೇಳಿದ್ದೇಕೆ?

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ಬಹುನಿರೀಕ್ಷೆಯ 'ಲವ್ ಸ್ಟೋರಿ' ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ತೆಲುಗು ಸ್ಟಾರ್ ನಾಗ ಚೈತನ್ಯಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಟೀಸರ್, ಸಾಂಗ್ ಮತ್ತು ಟ್ರೈಲರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಅಭಿಮಾನಿಗಳನಿರೀಕ್ಷೆ ಹೆಚ್ಚಿಸಿದೆ. ಈ ನಡುವ ಸಿನಿಮಾತಂಡ ಅದ್ದೂರಿ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಹೈದರಾಬಾದ್ ನಲ್ಲಿ ನಡೆದ ಅದ್ದೂರಿ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತು ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಾಯಿ ಪಲ್ಲವಿ ಮತ್ತು ಚಿರಂಜೀವಿ ಇಬ್ಬರ ಭಾಷಣ ಎಲ್ಲರ ಗಮನ ಸೆಳೆಯುತ್ತಿದೆ. ನಟ ಚಿರಂಜೀವಿ ಸಾಯಿ ಪಲ್ಲವಿ ಅವರ ಡಾನ್ಸ್ ಮತ್ತು ನಟನೆಯನ್ನು ಹಾಡಿ ಹೊಗಳಿದರು.

ಸಾಯಿ ಪಲ್ಲವಿ ನಟನೆಯ ಸೂಪರ್ ಹಿಟ್ ಫಿದಾ ಸಿನಿಮಾದ ಒಂದು ಘಟನೆಯನ್ನು ಚಿರಂಜೀವಿ ವೇದಿಕೆ ಮೇಲೆ ಶೇರ್ ಮಾಡಿದರು. ಆ ಸಿನಿಮಾದಲ್ಲಿ ಸಾಯಿ ಪಲ್ಲವಿ ಡಾನ್ಸ್ ತುಂಬಾ ಇಂಪ್ರೆಸ್ ಮಾಡಿತ್ತು ಎಂದು ಚಿರಂಜೀವಿ ಹೇಳಿದರು. "ವರುಣ್ ತೇಜ್ ನನಗೆ ಒಂದು ವಿಡಿಯೋ ತೋರಿಸಿದರು. ಹೇಗೆ ಮಾಡಿದೆ ಎಂದು ಕೇಳಿದೆ ಮತ್ತು ಸಾಯಿ ಪಲ್ಲವಿ ನನ್ನ ಗಮನ ಸೆಳೆದರು. ಅವರು ಅದ್ಭುತವಾದ ನಟಿ" ಎಂದು ಹೇಳಿದರು.

Chiranjeevi thanks to Sai Pallavi for rejecting Bhola Shankar

ಇದೇ ವೇಳೆ ಚಿರಂಜೀವಿ ಸಿನಿಮಾವನ್ನು ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಬಗ್ಗೆಯೂ ಉಲ್ಲೇಖಿಸಿದರು. ತನ್ನ ಸಿನಿಮಾ ತಿರಸ್ಕರಿಸಿದ್ದಕ್ಕೆ ಧನ್ಯವಾದ ಎಂದು ಸಾಯಿ ಪಲ್ಲವಿಗೆ ಹೇಳಿದರು. ಅಂದಹಾಗೆ ಚಿರಂಜೀವಿ ನಟನೆಯ ಭೋಲಾ ಶಂಕರ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಚಿರಂಜೀವಿ ತಂಗಿಯಾಗಿ ನಟಿಸಬೇಕಿತ್ತು. ಆದರೆ ಆ ಪಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ತಿರಸ್ಕರಿಸಿದರು. ಅಂದಹಾಗೆ ಭೋಲಾ ಶಂಕರ್ ತಮಿಳಿನ ವೇದಲಾಂ ಸಿನಿಮಾದ ರಿಮೇಕ್ ಆಗಿದೆ. ಬಳಿಕ ಸಾಯಿ ಪಲ್ಲವಿ ರಿಜೆಕ್ಟ್ ಮಾಡಿದ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿರಂಜೀವಿ, "ನನ್ನ ತಂಡವು ಸಾಯಿ ಪಲ್ಲವಿ ಅವರನ್ನು ಸಂಪರ್ಕ ಮಾಡುತ್ತಿದ್ದಾರೆ ಎಂದು ಹೇಳಿದಾಗ ಆಕೆ ಈ ಸಿನಿಮಾವನ್ನು ಒಪ್ಪಿಕೊಳ್ಳಬಾರದು ಎಂದು ಪ್ರಾರ್ಥಿಸಿದೆ. ಅದೃಷ್ಟವಶಾತ್ ಅವಲು ಈ ಆಫರ್ ರಿಜೆಕ್ಟ್ ಮಾಡಿದರು. ಬಳಿಕ ನನಗೆ ತುಂಬಾ ಸಂತೋಷವಾಯಿತು" ಎಂದು ಚಿರಂಜೀವಿ ಹೇಳಿದರು.

ತಕ್ಷಣ ಸಾಯಿ ಪಲ್ಲವಿ, ಚಿರು ಮಾತಿಗೆ ಪ್ರತಿಕ್ರಿಯೆ ನೀಡಿ, "ಸರ್ ನಾನು ರಿಮೇಕ್ ಮಾಡುವ ಬಗ್ಗೆ ಯಾವಾಗಲು ಭಯಪಡುತ್ತೇನೆ. ಈ ಆಫರ್ ರಿಜೆಕ್ಟ್ ಮಾಡಲು ಇದೊಂದೆ ಕಾರಣ" ಎಂದು ಸ್ಪಷ್ಟಪಡಿಸಿದರು.

ನಂತರ ಚಿರಂಜೀವಿ, "ನಾನು ನಿಮ್ಮೊಂದಿಗೆ ನಟಿಸುವ ಮೂಲಕ ನಾನೊಬ್ಬ ಡಾನ್ಸರ್ ಎಂದು ಸಾಬೀತುಪಡಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ರೊಮ್ಯಾಂಟಿಕ್ ಪಾತ್ರದಲ್ಲಿ ನಟಿಸಲು ಬಯಸುತ್ತೇನೆ. ಸಹೋದರನಾಗಿ ಅಲ್ಲ" ಎಂದು ಚಿರಂಜೀವಿ ಹೇಳಿದರು. ಬಳಿಕ ಸಾಯಿ ಪಲ್ಲವಿ ಚಿರಂಜೀವಿ ಮುಂದಿನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವಂತೆ ಎಲ್ಲರ ಮುಂದೆಯೇ ಕೇಳಿಕೊಂಡಿರು. ಸಾಯಿ ಪಲ್ಲವಿ ಆಸೆಯನ್ನು ಚಿರು ಮುಂದಿನ ಸಿನಿಮಾದಲ್ಲಿ ಈಡೇರಿಸುತ್ತಾರಾ ಎಂದು ಕಾದು ನೋಡಬೇಕು.

More from Filmibeat

English summary
Actor Chiranjeevi thanks to Sai Pallavi for rejecting Bhola Shankar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X