ಎರಡು ತಮಿಳು ಸಿನಿಮಾ ರೀಮೇಕ್ ಗೆ ಸಜ್ಜಾದ ಚಿರಂಜೀವಿ

ನಟ ಚಿರಂಜೀವಿ ಇತ್ತೀಚೆಗೆ ರೀಮೇಕ್‌ಗಳ ಮೇಲೆಯೇ ಹೆಚ್ಚು ಗಮನ ಹರಿಸಿದ್ದಾರೆ. ಚಿರಂಜೀವಿ ಕಮ್‌ಬ್ಯಾಕ್ ಸಿನಿಮಾ ಎನಿಸಿಕೊಂಡ 150 ನೇ ಸಿನಿಮಾ ರೀಮೇಕ್ ಆಗಿತ್ತು, ಇದು ಕೆಲವರ ಅಸಮಾಧಾನಕ್ಕೂ ಕಾರಣವಾಯ್ತು, ಈಗ ಮತ್ತೆ ರೀಮೇಕ್‌ನತ್ತ ಮುಖ ಮಾಡಿದ್ದಾರೆ ನಟ ಚಿರಂಜೀವಿ.

ಈಗಾಗಲೇ ಮಲಯಾಳಂ ನ ಹಿಟ್ ಸಿನಿಮಾ ಲುಸೀಫರ್‌ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿರುವ ನಟ ಚಿರಂಜೀವಿ ಮತ್ತೆರಡು ರೀಮೇಕ್ ಸಿನಿಮಾ ಗೆ ಸಜ್ಜಾಗುತ್ತಿದ್ದಾರೆ.

ಬಹು ಸಮಯದಿಂದ ಸಿನಿಮಾದಿಂದ ದೂರ ಉಳಿದು 150 ನೇ ಸಿನಿಮಾಕ್ಕಾಗಿ ಮರಳಿದ್ದ ಚಿರಂಜೀವಿ ಆಗಲೂ ಸಹ ರಿಮೇಕ್ ಸಿನಿಮಾ ಆಯ್ದುಕೊಂಡಿದ್ದರು. ಇದು ಕೆಲವು ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಸೈರಾ ನರಸಿಂಹ ರೆಡ್ಡಿ ಎಂಬ ಅಪ್ಪಟ ತೆಲುಗು ಕತೆ

ಸೈರಾ ನರಸಿಂಹ ರೆಡ್ಡಿ ಎಂಬ ಅಪ್ಪಟ ತೆಲುಗು ಕತೆ

ಆ ನಂತರ ಸೈರಾ ನರಸಿಂಹ ರೆಡ್ಡಿ ಎಂಬ ಅಪ್ಪಟ ತೆಲುಗು ನೆಲದ ಐತಿಹಾಸಿಕ ಸಿನಿಮಾದಲ್ಲಿ ನಟಿಸಿದ ಚಿರಂಜೀವಿ ನಂತರ ಮತ್ತೆ ಲುಸೀಫರ್ ಎಂಬ ಮಲಾಯಳಂ ಸಿನಿಮಾದಲ್ಲಿ ನಟಿಸಲು ಮುಂದಾದರು.

ವೇದಾಲಂ ಹಾಗೂ ಎನ್ನೈ ಅರಿಂದಾಳ್ ಸಿನಿಮಾ ರೀಮೇಕ್

ವೇದಾಲಂ ಹಾಗೂ ಎನ್ನೈ ಅರಿಂದಾಳ್ ಸಿನಿಮಾ ರೀಮೇಕ್

ಈಗ ತಮಿಳಿನ 'ವೇದಾಲಂ' ಸಿನಿಮಾದ ರೀಮೇಕ್‌ನಲ್ಲಿ ಚಿರಂಜೀವಿ ನಟಿಸುತ್ತಾರೆ ಎಂಬುದು ಬಹುತೇಕ ಖಾತ್ರಿಯಾಗಿದೆ. ಆದರೆ ಇದರ ಜೊತೆಗೆ ವೇದಾಲಂ ನಲ್ಲಿ ನಟಿಸಿದ್ದ ಅಜಿತ್ ನಟನೆಯ ಮತ್ತೊಂದು ಸಿನಿಮಾ ಎನ್ನೈ ಅರಿಂದಾಳ್ ಸಿನಿಮಾದ ರೀಮೇಕ್‌ನಲ್ಲೂ ಚಿರಂಜೀವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಹಲವು ರೀಮೇಕ್‌ನಲ್ಲಿ ನಟಿಸಿದ್ದಾರೆ ಚಿರಂಜೀವಿ

ಹಲವು ರೀಮೇಕ್‌ನಲ್ಲಿ ನಟಿಸಿದ್ದಾರೆ ಚಿರಂಜೀವಿ

ಚಿರಂಜೀವಿ, ಈ ಹಿಂದೆಯೂ ಹಲವು ರೀಮೇಕ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ರೀಮೇಕ್ ಸಿನಿಮಾಕ್ಕೆ ತಮ್ಮದೇ ಆದ ಭಿನ್ನವಾದ ಟಚ್ ನೀಡಿ ಅಭಿಮಾನಿಗಳಿಗೆ ಮುದ ನೀಡುವುದು ಚಿರಂಜೀವಿ ಗೆ ಕರಗತವಾಗಿದೆ.

Recommended Video

ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja
ಚಿರಂಜೀವಿ ಜೊತೆಗೆ ವಿಜಯ್ ದೇವರಕೊಂಡ

ಚಿರಂಜೀವಿ ಜೊತೆಗೆ ವಿಜಯ್ ದೇವರಕೊಂಡ

ಚಿರಂಜೀವಿ ನಟಿಸುತ್ತಿರುವ ಲುಸೀಫರ್ ಸಿನಿಮಾದ ರೀಮೇಕ್‌ನಲ್ಲಿ ವಿಜಯ್ ದೇವರಕೊಂಡ ಸಹ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ನಟಿ ಮಂಜು ವಾರಿಯರ್ ಚಿರಂಜೀವಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
Chiranjeevi to act in two Tamil movie remakes. Both are Ajit's Vedalam and Ennai Arindal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X