For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಕಲಾವಿದನ ಕೈ ಹಿಡಿದ ಚಿರಂಜೀವಿ: ಕಿಡ್ನಿ ಕಸಿಗೆ 2 ಲಕ್ಷ ನೆರವು

  |

  ದಕ್ಷಿಣ ಚಿತ್ರರಂಗದಲ್ಲಿ ತಮ್ಮ ವಿಶಿಷ್ಠ ಮತ್ತು ವಿಭಿನ್ನ ಅಭಿನಯದ ಮೂಲಕ ಖ್ಯಾತಿ ಗಳಿಸಿಕೊಂಡಿದ್ದ ಪೊನ್ನಂಬಲಂ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯವಾಗಿದ್ದು, ತೀವ್ರವಾಗಿ ನೊಂದಿದ್ದರು. ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಬೇಕಿದೆ ಎಂದು ಆಸ್ಪತ್ರೆಯ ಬೆಡ್‌ನಿಂದಲೇ ವಿಡಿಯೋ ಮಾಡಿ ವಿನಂತಿಸಿದ್ದರು.

  ಇದೀಗ, ಪೊನ್ನಂಬಲಂ ಕಿಡ್ನಿ ಆಪರೇಷನ್‌ಗೆ ಮೆಗಾಸ್ಟಾರ್ ಚಿರಂಜೀವಿ ನೆರವು ನೀಡಿರುವುದು ತಿಳಿದು ಬಂದಿದೆ. ಸ್ವತಃ ಪೊನ್ನಂಬಲಂ ಅವರೇ ಮೆಗಾಸ್ಟಾರ್ ಸಹಾಯವನ್ನು ನೆನೆದು ಧನ್ಯವಾದ ತಿಳಿಸಿದ್ದಾರೆ. ವಿಡಿಯೋ ಮಾಡುವ ಮೂಲಕ ಚಿರಂಜೀವಿ ಧನಸಹಾಯ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದೆ ಓದಿ...

  2 ಲಕ್ಷ ನೆರವು ನೀಡಿದ ಚಿರಂಜೀವಿ

  2 ಲಕ್ಷ ನೆರವು ನೀಡಿದ ಚಿರಂಜೀವಿ

  ನಟ ಪೊನ್ನಂಬಲಂ ಕಿಡ್ನಿ ಆಪರೇಷನ್‌ಗೆ ಮೆಗಾಸ್ಟಾರ್ ಚಿರಂಜೀವಿ ಎರಡು ಲಕ್ಷ ಧನ ಸಹಾಯ ಮಾಡಿದ್ದಾರೆ. ವಿಡಿಯೋ ಮೂಲಕ ಧನ್ಯವಾದ ತಿಳಿಸಿರುವ ಪೊನ್ನಂಬಲಂ ''ಚಿರಂಜೀವಿ ಅಣ್ಣನಿಗೆ ನಮಸ್ತೆ, ನನ್ನ ಕಿಡ್ನಿ ಆಪರೇಷನ್‌ಗಾಗಿ ನೀವು ಕೊಟ್ಟ 2 ಲಕ್ಷದಿಂದ ಬಹಳ ದೊಡ್ಡ ಸಹಾಯವಾಗಿದೆ. ಜೀವನಪೂರ್ತಿ ಈ ಸಹಾಯವನ್ನು ನಾನು ಮರೆಯಲ್ಲ. ಆ ದೇವರು ನಿಮಗೆ ಸದಾ ಒಳ್ಳೆಯದು ಮಾಡಲಿ'' ಎಂದು ವಿನಂತಿಸಿದ್ದಾರೆ.

  ರಜನಿಕಾಂತ್, ಕಮಲ್ ಹಾಸನ್ ನೆರವು

  ರಜನಿಕಾಂತ್, ಕಮಲ್ ಹಾಸನ್ ನೆರವು

  ಈ ಹಿಂದೆ ಪೊನ್ನಂಬಲಂ ಅನಾರೋಗ್ಯ ವಿಚಾರ ತಿಳಿದಾಗ ಸೂಪರ್ ಸ್ಟಾರ್ ರಜನಿಕಾಂತ್ ಅಭಯಹಸ್ತ ಚಾಚಿದ್ದರು. ಪೊನ್ನಂಬಲಂ ಆರೋಗ್ಯ ವಿಚಾರಿಸಿದ್ದ ತಲೈವಾ, ಆರ್ಥಿಕವಾಗಿ ಸಹಾಯ ಮಾಡಿದ್ದರು. ಕಮಲ್ ಹಾಸನ್ ಪೊನ್ನಂಬಲಂ ಮಕ್ಕಳಿಗೆ ಶಿಕ್ಷಣ ಕೊಡಿಸುವ ಭರವಸೆ ಕೊಟ್ಟಿದ್ದರು. ರಜನಿ-ಕಮಲ್ ಮಾತ್ರವಲ್ಲ ತಮಿಳು ಇಂಡಸ್ಟ್ರಿಯ ಅನೇಕರು ಪೊನ್ನಂಬಲಂಗೆ ನೆರವು ನೀಡಿದ್ದರು.

  ಮೆಗಾಸ್ಟಾರ್ ಜೊತೆ ಹೆಚ್ಚು ಸಿನಿಮಾ

  ಮೆಗಾಸ್ಟಾರ್ ಜೊತೆ ಹೆಚ್ಚು ಸಿನಿಮಾ

  ಸ್ಟಂಟ್ ಮ್ಯಾನ್ ಸಿನಿ ಜರ್ನಿ ಆರಂಭಿಸಿದ್ದ ಪೊನ್ನಂಬಲಂ ತಮಿಳಿನಲ್ಲಿ ಹೆಚ್ಚು ಸಿನಿಮಾ ಮಾಡಿದ್ದಾರೆ. 'ಘರಾನ ಮೊಗಡು' ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿ ಪ್ರವೇಶಿಸಿದ ಪೊನ್ನಂಬಲಂ, ಅಲ್ಲರಿ ಪ್ರಿಯಡು, ಮೆಕಾನಿಕ್ ಅಲ್ಲುಡು, ಮುಗ್ಗರು ಮೊನಗಾಳ್ಳು, ಹಿಟ್ಲರ್, ಪವಿತ್ರ ಪ್ರೇಮ, ನುವ್ವು ವಸ್ತಾವನಿ, ಎದುರುಲೇನಿ ಮುನುಷಿ, ಚೆನ್ನಕೇಶವ ರೆಡ್ಡಿ, ಗುಡುಂಬಾ ಶಂಕರ್, ಅನ್ನಾವರಂ ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

  ಚಿರು ನಂತರ ಮನೆಯಲ್ಲಿದ್ದ ಮತ್ತೊಬ್ಬ ಆಪ್ತನನ್ನು ಕಳೆದುಕೊಂಡ ಮೇಘನಾ ರಾಜ್ | Filmibeat Kannada
  ಕನ್ನಡದಲ್ಲೂ ನಟಿಸಿದ್ದಾರೆ ಪೊನ್ನಂಬಲಂ

  ಕನ್ನಡದಲ್ಲೂ ನಟಿಸಿದ್ದಾರೆ ಪೊನ್ನಂಬಲಂ

  ತಮಿಳು, ತೆಲುಗು ಜೊತೆ ಕನ್ನಡದಲ್ಲೂ ಪೊನ್ನಂಬಲಂ ನಟಿಸಿದ್ದಾರೆ. ರವಿಚಂದ್ರನ್ ಅಭಿನಯದ ಚಿನ್ನ, ಲೇಡಿ ಕಮಿಷನರ್, ಕಿಚ್ಚ, ಗುನ್ನಾ, ಮಸ್ತಿ, ಪೊಲೀಸ್ ಸ್ಟೋರಿ 2, ಚೆನ್ನ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Megastar Chiranjeevi transferred an amount of 2 Lakhs rupees to Artist Ponnambalam for his kidney transplant operation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X