For Quick Alerts
  ALLOW NOTIFICATIONS  
  For Daily Alerts

  ಸಂಜಯ್ ದತ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ಚಿರಂಜೀವಿ

  |

  ಬಾಲಿವುಡ್ ನಟ ಸಂಜಯ್ ದತ್‌ಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ಈ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದು, ಅಗತ್ಯ ಚಿಕಿತ್ಸೆಗಾಗಿ ದತ್ ವಿದೇಶಕ್ಕೆ ತೆರಳಲಿದ್ದಾರೆ. ಸಂಜು ಬಾಬುಗೆ ಕ್ಯಾನ್ಸರ್ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ ಕುಟುಂಬ ಹಾಗೂ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

  Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

  ಸಂಜಯ್ ದತ್ ಅವರಿಗೆ ಕ್ಯಾನ್ಸರ್ ಪತ್ತೆಯಾದ ಬಳಿಕ ಕೇವಲ ಹಿಂದಿ ಚಿತ್ರರಂಗ ಮಾತ್ರವಲ್ಲ, ದಕ್ಷಿಣ ಭಾರತದ ಇಂಡಸ್ಟ್ರಿ ಸಹ ಬೇಸರ ವ್ಯಕ್ತಪಡಿಸಿದೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಈ ವಿಷಯದಿಂದ ಭಾವುಕರಾಗಿದ್ದಾರೆ. ಸ್ನೇಹಿತನಿಗಾಗಿ ಸ್ಫೂರ್ತಿದಾಯಕ ಮಾತುಗಳನ್ನು ಹೇಳುವ ಮೂಲಕ ಧೈರ್ಯ ತುಂಬಿದ್ದಾರೆ. ಮುಂದೆ ಓದಿ...

  'ನೀವೊಬ್ಬ ಹೋರಾಟಗಾರ'

  'ನೀವೊಬ್ಬ ಹೋರಾಟಗಾರ'

  ಈ ಹಿಂದೆ ರಾಮ್ ಚರಣ್ ತೇಜ ಜೊತೆ ಸಂಜಯ್ ದತ್ ಅವರನ್ನು ಭೇಟಿ ಮಾಡಿದ ವೇಳೆ ಕ್ಲಿಕ್ಕಿಸಲಾಗಿದ್ದ ಫೋಟೋ ಶೇರ್ ಮಾಡಿರುವ ಮೆಗಾಸ್ಟಾರ್ ಚಿರಂಜೀವಿ ''ಸಂಜಯ್ ದತ್ ಭಾಯ್, ನೀವೊಬ್ಬ ಹೋರಾಟಗಾರ, ಈ ಸಂಕಷ್ಟ ಪರಿಸ್ಥಿತಿಯಿಂದ ಹೊರಬರುತ್ತೀರಾ ಎನ್ನುವುದರಲ್ಲಿ ಸಂದೇಹವಿಲ್ಲ'' ಎಂದು ಧೈರ್ಯದ ಮಾತುಗಳನ್ನಾಡಿದ್ದಾರೆ. ಚಿರಂಜೀವಿ ಅವರ ಟ್ವೀಟ್ ಈಗ ವೈರಲ್ ಆಗಿದೆ.

  ನಟ ಸಂಜಯ್ ದತ್ ಗೆ ಕ್ಯಾನ್ಸರ್: ಧೈರ್ಯ ತುಂಬಿದ ಕ್ರಿಕೆಟಿಗ ಯುವರಾಜ್ ಸಿಂಗ್ನಟ ಸಂಜಯ್ ದತ್ ಗೆ ಕ್ಯಾನ್ಸರ್: ಧೈರ್ಯ ತುಂಬಿದ ಕ್ರಿಕೆಟಿಗ ಯುವರಾಜ್ ಸಿಂಗ್

  ಈ ಸುದ್ದಿಯಿಂದ ಬಹಳ ನೋವಾಗಿದೆ

  ಈ ಸುದ್ದಿಯಿಂದ ಬಹಳ ನೋವಾಗಿದೆ

  ''ಸಂಜಯ್ ದತ್ ಭಾಯ್, ನೀವು ಅನಾರೋಗ್ಯ ಪರಿಸ್ಥಿತಿಯಲ್ಲಿದ್ದೀರಿ ಎಂದು ತಿಳಿದು ಬಹಳ ನೋವಾಗಿದೆ. ಆದರೆ, ನೀವೊಬ್ಬ ಹೋರಾಟಗಾರರಾಗಿದ್ದೀರಾ. ವರ್ಷಗಳ ಕಾಲದಿಂದಲೂ ನೀವು ಅನೇಕ ಸಂಕಷ್ಟಗಳನ್ನು ಎದುರಿಸಿದ್ದೀರಿ. ನೀವು ಇದರಿಂದ ಹೊರಬರುವಿರಿ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದಷ್ಟೂ ಬೇಗ ಗುಣಮುಖರಾಗಿಲಿ ಎಂದು ನಾವು ಪ್ರೀತಿಯಿಂದ ಪ್ರಾರ್ಥಿಸುತ್ತೇವೆ'' ಎಂದು ಚಿರು ಟ್ವೀಟ್ ಮಾಡಿದ್ದಾರೆ.

  ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದ್ದರು

  ಉಸಿರಾಟದ ತೊಂದರೆಯಿಂದ ಆಸ್ಪತ್ರೆ ಸೇರಿದ್ದರು

  ಕಳೆದ ಶನಿವಾರ (ಆಗಸ್ಟ್ 8) ಉಸಿರಾಟ ತೊಂದರೆಯಿಂದ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ವೈರಸ್ ಸೋಂಕು ಅನುಮಾನದ ಹಿನ್ನೆಲೆ ಕೊವಿಡ್ ಪರೀಕ್ಷೆ ಸಹ ಮಾಡಲಾಯಿತು. ಫಲಿತಾಂಶ ನೆಗಿಟಿವ್ ಬಂದಿದೆ. ಬಳಿಕ, ಎರಡು ದಿನದ ಚಿಕಿತ್ಸೆ ಬಳಿಕ ಸೋಮವಾರ ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು. ಆದರೆ, ಸೋಮವಾರ ರಾತ್ರಿ ವೇಳೆ ಸಂಜಯ್ ದತ್‌ಗೆ ಶ್ವಾಸಕೋಶದ ಕ್ಯಾನ್ಸರ್ ಇದೆ ಎಂಬ ವಿಚಾರ ಬಹಿರಂಗವಾಗಿದೆ.

  ನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸ

  ಕೆಜಿಎಫ್ ಚಿತ್ರ ವಿಳಂಬ!

  ಕೆಜಿಎಫ್ ಚಿತ್ರ ವಿಳಂಬ!

  ಸಂಜಯ್ ದತ್ ಇದೇ ಮೊದಲ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ನಟಿಸುತ್ತಿರುವ ಕೆಜಿಎಫ್ 2 ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಅನಾರೋಗ್ಯಕ್ಕೆ ತುತ್ತಾಗಿರುವುದು ಸಹಜವಾಗಿ ಕೆಜಿಎಫ್ ಚಿತ್ರೀಕರಣ ಪೆಟ್ಟು ನೀಡಬಹುದು ಎಂದು ಹೇಳಲಾಗ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಡಿಸೆಂಬರ್ ಗೆ ಸಿನಿಮಾ ತೆರೆಕಾಣಬೇಕಿತ್ತು. ಕೊರೊನಾ ಲಾಕ್‌ಡೌನ್‌ನಿಂದ ದಿನಾಂಕ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಹೆಚ್ಚಿದೆ.

  English summary
  Sanjay Dutt being diagnosed with Stage 3 Lung Cancer went viral. Megastar Chiranjeevi took to Twitter and tweeted inspiring words for Sanjay dutt.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X