'ಆಚಾರ್ಯ' ನಿರ್ದೇಶಕ-ನಿರ್ಮಾಪಕರ ಮುಂದೆ ಕಠಿಣ ಬೇಡಿಕೆಯಿಟ್ಟ ಚಿರಂಜೀವಿ

ಕೊರೊನಾ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಚಿತ್ರಗಳಿಗೆ ಮರು ಚಾಲನೆ ಸಿಕ್ಕಿದೆ. ತೆಲುಗು ಇಂಡಸ್ಟ್ರಿಯ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಚಿತ್ರೀಕರಣ ಪುನಾರರಂಭಿಸಿದೆ. ರಾಜಮೌಳಿಯ 'ಆರ್ ಆರ್ ಆರ್', ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್' ಹಾಗೂ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾ ಶೂಟಿಂಗ್‌ಗೆ ತಯಾರಾಗಿದೆ.

ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರೀಕರಣ ಅಕ್ಟೋಬರ್‌ನಿಂದ ಆರಂಭವಾಗಲಿದೆ. ಆದ್ರೆ, ಪವನ್ ಕಲ್ಯಾಣ್ ನವೆಂಬರ್‌ನಲ್ಲಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಚಿರಂಜೀವಿ ಸಹ 'ಆಚಾರ್ಯ' ಶೂಟಿಂಗ್ ನವೆಂಬರ್‌ನಲ್ಲಿ ಆರಂಭಿಸಲು ತೀರ್ಮಾನಿಸಿದ್ದಾರೆ.

ಆದರೆ, ಮೆಗಾಸ್ಟಾರ್ ಚಿರಂಜೀವಿ 'ಆಚಾರ್ಯ' ನಿರ್ದೇಶಕ-ನಿರ್ಮಾಪಕರ ಮುಂದೆ ಕಠಿಣವಾದ ಬೇಡಿಕೆಯಿಟ್ಟಿದ್ದಾರೆ. 'ಅಚಾರ್ಯ' ಚಿತ್ರೀಕರಣವನ್ನು ಒಂದೇ ಹಂತದಲ್ಲಿ ಮುಗಿಸುವಂತೆ ಕೇಳುತ್ತಿದ್ದಾರಂತೆ.

Chiranjeevi wants to complete Acharya shooting in single schedule

'ಆಚಾರ್ಯ' ಸಿನಿಮಾ ಕೆಲಸ ಬಹಳ ಇದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮಾಡಿದ್ರೆ ಮಾತ್ರ ನವೆಂಬರ್‌ನಲ್ಲಿ ಆರಂಭಿಸಿ ಮಾರ್ಚ್‌ವೊತ್ತಿಗೆ ಕೆಲಸ ಮುಗಿಸಿ ಬೇಸಿಗೆ ರಜೆಗೆ ತೆರೆಮೇಲೆ ಬರಬಹುದು ಎಂದು ಚಿರಂಜೀವಿ ಹೇಳುತ್ತಿದ್ದಾರಂತೆ. ಇದು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಸವಾಲಾಗಿದೆ.

ಈ ಬಗ್ಗೆ ಇನ್ನು ಅಂತಿಮ ನಿರ್ಧಾರಕ್ಕೆ ನಿರ್ದೇಶಕ ಕೊರಟಲಾ ಶಿವ ಬಂದಿಲ್ಲ. ಇನ್ನುಳಿದಂತೆ ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ಜೊತೆ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮ್ ಚರಣ್ ತೇಜ ಸಹ ಅತಿಥಿ ಪಾತ್ರ ಮಾಡಲಿದ್ದಾರೆ.

Recommended Video

ಮಗನ ಸಿನಿಮಾ ನೋಡಲು ಥಿಯೇಟರ್ ಗೆ ಬಂದ ಚಿರು ತಾಯಿ | Chiranjeevi Sarja Mother | Filmibeat Kannada

More from Filmibeat

English summary
Megastar Chiranjeevi wants to complete Acharya movie shooting in single schedule.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X