ಚಿರಂಜೀವಿಗೆ ಬಾಲಿವುಡ್‌ನಿಂದ ಅವಮಾನ: ಹಳೆ ಕಥೆ ಹೇಳಿದ ಮೆಗಾಸ್ಟಾರ್

ವಿಶ್ವದಾದ್ಯಂತ ಆಯಾ ಪ್ರಾಂತ್ಯಗಳಿಗೆ ತಕ್ಕ ಹಾಗೆ, ಸಂಸ್ಕೃತಿ, ಕಲೆ, ನಾಟಕ, ಸಿನಿಮಾರಂಗ ಬೆಳೆದು ಬಂದಿದೆ. ಈಗ ಹೆಚ್ಚಾಗಿ ಮುನ್ನಲೆಯಲ್ಲಿ ಇರುವುದು ಚಿತ್ರರಂಗ ಮಾತ್ರ. ಅದರಲ್ಲೂ ಹೆಚ್ಚಾಗಿ ಸದ್ದು ಮಾಡೋದು ಹಾಲಿವುಡ್ ಬಿಟ್ಟರೆ ಭಾರತೀಯ ಚಿತ್ರರಂಗವೇ. ಭಾರತೀಯ ಚಿತ್ರರಂಗದಲ್ಲಿ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಎನ್ನುವ ವಿಂಗಡಣೆ ಹಲವು ದಶಕಗಳಿಂದ ಇದೆ.

ಇಷ್ಟು ದಿನ ಭಾರತೀಯ ಚಿತ್ರರಂಗ ಅಂದರೆ ಅದು ಕೇವಲ ಬಾಲಿವುಡ್ ಮಾತ್ರ ಎನ್ನಲಾಗುತ್ತಿತ್ತು. ಮಿಕ್ಕ ಭಾಷೆಯ ಚಿತ್ರಗಳನ್ನು ಪ್ರಾದೇಶಿಕ ಚಿತ್ರಗಳ ಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇದನ್ನು ಮುರಿದು ಹಾಕಿದೆ.

ಇದೇ ನೆಪದಲ್ಲಿ ಬಾಲಿವುಡ್ ಸೌತ್ ಚಿತ್ರರಂಗವನ್ನು ಕೀಳಾಗಿ ಕಾಣುತ್ತಿತ್ತು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಇಲ್ಲಿವೆ. ಇದೇ ವಿಚಾರಕ್ಕೆ ತೆಲುಗು ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಹಿಂದೊಮ್ಮೆ ಅವಮಾನ ಅನುಭವಿಸಿದ್ದಾರೆ. ಆ ವಿಚಾರವನ್ನು ಅವರೀಗ ಬಿಚ್ಚಿಟ್ಟಿದ್ದಾರೆ.

Recommended Video

'KGF 2' 14th Day Collection | ಭಾರತದ ಹೆಚ್ಚು ಗಳಿಕೆಯ ಸಿನಿಮಾ ಆಗತ್ತಾ KGF 2 ? | Yash | Prashanth Neel

1989ರಲ್ಲಿ ಚಿರಂಜೀವಿಗೆ ಅವಮಾನ!

1989ರಲ್ಲಿ ಚಿರಂಜೀವಿಗೆ ಅವಮಾನ!

ಇತ್ತೀಚೆಗೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಅಭಿನಯದ 'ಆಚಾರ್ಯ' ಚಿತ್ರದ ಪ್ರಿ- ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ತಮ್ಮ ಚಿತ್ರ ಭಾರತೀಯ ಚಿತ್ರ ಎಂದು ಕರೆಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ಬಾಲಿವುಡ್ ದಬ್ಬಾಳಿಕೆಯ ಬಗ್ಗೆ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ.

1989ರಲ್ಲಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಲು ಮೆಗಾಸ್ಟಾರ್ ಚಿರಂಜೀವಿ ದೆಹಲಿಗೆ ತೆರಳಿದ್ದರು. ಆ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ವೈಭವವನ್ನು ಸಾರುವ ಪೋಸ್ಟರ್, ಬ್ಯಾನರ್‌ಗಳನ್ನು ಹಾಕಲಾಗಿತ್ತಂತೆ. ಅಲ್ಲಿ ಭಾರತೀಯ ಚಿತ್ರರಂಗ ಎಂದು ಬಿಂಬಿತವಾಗಿದ್ದು ಮಾತ್ರ ಬಾಲಿವುಡ್. ಈ ಬಗ್ಗೆ ಚಿರಂಜೀವೀ ಹೇಳಿದ್ದಿಷ್ಟು. ಮುಂದೆ ಓದಿ...

ಡಾ.ರಾಜ್‌, ವಿಷ್ಣುದಾದಾರನ್ನು ಕಡೆಗಣಿಸಿದ್ದ ಬಾಲಿವುಡ್!

ಡಾ.ರಾಜ್‌, ವಿಷ್ಣುದಾದಾರನ್ನು ಕಡೆಗಣಿಸಿದ್ದ ಬಾಲಿವುಡ್!

"ಆ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ಹಿಂದಿಯ ನಟರಾದ ಧರ್ಮೇಂದ್ರ, ರಾಜ್ ಕಪೂರ್, ದಿಲೀಪ್ ಕುಮಾರ್, ದೇವಾನಂದ್, ಅಮಿತಾ ಬಚ್ಚನ್, ರಾಜೇಶ್ ಖನ್ನಾ ಸೇರಿದಂತೆ ಹಲವು ಹಿಂದಿಯ ಕಲಾವಿದರ ಫೋಟೊ ಮಾತ್ರ ಹಾಕಿದ್ದರು. ಸೌತ್ ಸಿನಿಮಾ ಅಂತ ಬಂದಾಗ ಎನ್‌ಟಿಆರ್ ಹಾಗೂ ಜಯಲಲಿತಾರ ಚಿಕ್ಕ ಫೋಟೊ ಹಾಕಿದ್ದರು. ಆದರೆ ಕನ್ನಡದ ಕಂಠೀರವ ರಾಜ್‌ಕುಮಾರ್, ವಿಷ್ಣುವರ್ಧನ್, ಎನ್‌ಟಿ ರಾಮ ರಾವ್, ನಾಗೇಶ್ವರ್ ರಾವ್, ಶಿವಾಜಿ ಗಣೇಶನ್ ಅಂತಹ ಮಹಾನ್ ಸಾಧಕರ ಫೋಟೊಗಳು ಇರಲಿಲ್ಲ. ಭಾರತೀಯ ಸಿನಿಮಾ ಅಂದ್ರೆ ಬರೀ ಹಿಂದಿ ಚಿತ್ರರಂಗ ಅಂತ ಬಿಂಬಿಸಲಾಗಿತ್ತು. ಇದನ್ನು ನೋಡಿ ಅಂದು ನನಗೆ ತುಂಬಾ ನೋವಾಗಿತ್ತು, ನನಗೆ ಅವಮಾನ ಆಗಿತ್ತು". ಎಂದಿದ್ದಾರೆ ಚಿರಂಜೀವಿ

ಬಾಲಿವುಡ್‌ಗೆ ತಕ್ಕ ಉತ್ತರ ಕೊಟ್ಟ ಸೌತ್!

ಬಾಲಿವುಡ್‌ಗೆ ತಕ್ಕ ಉತ್ತರ ಕೊಟ್ಟ ಸೌತ್!

"ಸೌತ್ ಸಿನಿಮಾರಂಗವನ್ನು ಅವಮಾನಿಸುತ್ತಿದ್ದ ಬಾಲಿವುಡ್ ಮಂದಿ ಇಂದು ನಮ್ಮ ದಕ್ಷಿಣ ಸಿನಿಮಾಗಳಲ್ಲಿ ನಟಿಸೋದಕ್ಕೆ ಕಾಯುತ್ತಿದ್ದಾರೆ. ಅಂದು ಬೇರೆ ಭಾಷೆ ಸಿನಿಮಾಗಳು ಅಂದ್ರೆ ಲೆಕ್ಕಕ್ಕೇ ಇರಲಿಲ್ಲ. ಆದರೆ ಇಂದು ನಮ್ಮ ಸಿನಿಮಾಗಳ ಗೆಲುವು ನೋಡಿ ನಾವು ಗರ್ವ ಪಡುತ್ತಿದ್ದೇವೆ. ತಾರತಮ್ಯ ಮಾಡುತ್ತಿದ್ದವರಿಗೆ ಸೌತ್ ಚಿತ್ರರಂಗ ಸರಿಯಾದ ಉತ್ತರ ಕೊಡುತ್ತಿದೆ. ಇದಕ್ಕೆ ಕಾರಣ ನಮ್ಮ ತಂತ್ರಜ್ಞರು, ನಮ್ಮ ನಿರ್ದೇಶಕ ರಾಜಮೌಳಿ. ಇಂದು ಭಾರತೀಯ ಚಿತ್ರರಂಗದ ಪೀಠಾಧಿಪತಿಯಾಗಿದ್ದಾರೆ ರಾಜಮೌಳಿ.

ಸೌತ್ ಚಿತ್ರಗಳ ಬಗ್ಗೆ ಗರ್ವ ಪಡಬೇಕು

ಸೌತ್ ಚಿತ್ರಗಳ ಬಗ್ಗೆ ಗರ್ವ ಪಡಬೇಕು

"ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಅಂತ ತಾರತಮ್ಯ ಮಾಡುತ್ತಿದ್ದವರಿಗೆ ನಮ್ಮ ಸೌತ್ ಸಿನಿರಂಗ ಗರ್ವ ಪಡೋ ಹಾಗೆ ಉತ್ತರ ಕೊಟ್ಟಿದೆ. ಇದಕ್ಕೆ ಕಾರಣ ಸೌತ್ ಚಿತ್ರರಂಗದಿಂದ ಬರುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾಗಳು. ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಸಿನಿಮಾ ಇಂದು ನ್ಯಾಷನಲ್ ಸಿನಿಮಾ ಆಗಿದೆ. ಅದೇ ರೀತಿ ಅಲ್ಲು ಅರ್ಜುನ್ ಪ್ರಭಾಸ್, ರಾಮ್ ಚರಣ್, ಜ್ಯೂ.ಎನ್ ಟಿಆರ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಇದನ್ನೆಲ್ಲಾ ನೋಡಿ ನಾವೆಲ್ಲಾ ಹೆಮ್ಮೆ ಪಡಬೇಕು". ಎಂದ ಚಿರಂಜೀವಿ ಸೌತ್ ಚಿತ್ರರಂಗದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

More from Filmibeat

English summary
Chiranjeevi Was Insulted By Bollywood Because Only Hindi Cinema Portrayes As Indian Cinema, know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X