ಕುಟುಂಬದ ಜೊತೆ ಪವನ್ ಕಲ್ಯಾಣ್ ಸಿನಿಮಾ ವೀಕ್ಷಿಸಿದ ಚಿರಂಜೀವಿ; ಚಿಕ್ಕಪ್ಪನ ಬಗ್ಗೆ ರಾಮ್ ಚರಣ್ ಹೇಳಿದ್ದೇನು?

ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ವಕೀಲ್ ಸಾಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಮೂರು ವರ್ಷಗಳ ಬಳಿಕ ತೆರೆಮೇಲೆ ಬಂದ ಪವನ್ ಕಲ್ಯಾಣ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದ ಗಣ್ಯರು ಸಹ ವಕೀಲ್ ಸಾಬ್ ನನ್ನು ಹಾಡಿ ಹೊಗಳುತ್ತಿದ್ದಾರೆ.

ವಿಶೇಷ ಎಂದರೆ ಪವನ್ ಕಲ್ಯಾಣ್ ಸಿನಿಮಾವನ್ನು ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಜೊತೆ ವೀಕ್ಷಿಸಿದ್ದಾರೆ. ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಇಬ್ಬರ ನಡುವೆ ಉತ್ತಮ ಬಾಂಡಿಂಗ್ ಇದೆ. ಸಹೋದರನ ಸಿನಿಮಾ ನೋಡಿ ಚಿರಂಜೀವಿ ಸಂತಸ ಪಟ್ಟಿದ್ದಾರೆ. ವರ್ಷಗಳ ಬಳಿಕ ತೆರೆಮೇಲೆ ಬಂದಿರುವ ತಮ್ಮನ್ನು ನೋಡಿ ಕಣ್ತುಂಬಿಕೊಳ್ಳಲು ಚಿರಂಜೀವಿ ಕುಟುಂಬದ ಜೊತೆ ಚಿತ್ರಮಂದಿರಕ್ಕೆ ಹೋಗಿದ್ದರು.

ಹೈದರಾಬಾದ್ ನ ಚಿತ್ರಮಂದಿರದಲ್ಲಿ ವಕೀಲ್ ಸಾಬ್ ನೋಡಿದ ಫೋಟೋಗಳನ್ನು ಮೆಗಾಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತ್ನಿ ಮತ್ತು ತಾಯಿ ಸೇರಿದಂತೆ ಕುಟುಂಬದ ಅನೇಕರನ್ನು ಚಿತ್ರಮಂದಿರಕ್ಕೆ ಕರೆದುಕೊಂಡಿದ್ದರು.

Chiranjeevi watches Pawan Kalyan starrer Vakeel Saab movie with family

ಇನ್ನು ವಕೀಲ್ ಸಾಬ್ ಸಿನಿಮಾ ಬಗ್ಗೆ ನಟ ರಾಮ್ ಚರಣ್ ಕೂಡ ಹಾಡಿಹೊಗಳಿದ್ದಾರೆ. ಚಿಕ್ಕಪ್ಪ ಪವನ್ ಕಲ್ಯಾಣ್ ಬಗ್ಗೆ ಟ್ವೀಟ್ ಮಾಡಿರುವ ರಾಮ್ ಚರಣ್, ನಾನೀಗ ಎಲ್ಲಾ ಕಡೆ ಕೇಳುತ್ತಿರುವುದು ಒಂದು ಪದ ಪವರ್ ಪ್ಯಾಕ್ಡ್ ಬ್ಲಾಕ್ ಬಸ್ಟರ್. ಪವನ್ ಕಲ್ಯಾಣ್ ಅವರ ಮತ್ತೊಂದು ಲ್ಯಾಂಡ್ ಮಾರ್ಕ್ ಸಿನಿಮಾ. ನಿರ್ದೇಶಕ ಶ್ರೀರಾಮ್ ವೇಣು ಅವರಿಗೆ ಅಭಿನಂದನೆಗಳು. ಮತ್ತು ಇಡೀ ತಂಡಕ್ಕೆ' ಎಂದು ಹೇಳಿದ್ದಾರೆ.

Chiranjeevi watches Pawan Kalyan starrer Vakeel Saab movie with family

ಅಂದಹಾಗೆ ವೇಣು ಶ್ರೀರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆೆ. ಚಿತ್ರದಲ್ಲಿ ನಾಲ್ಕು ನಟಿಯರು ಮಿಂಚಿದ್ದಾರೆ. ನಿವೇತಾ ಥಾಮಸ್, ಶ್ರುತಿ ಹಾಸನ್, ಅನನ್ಯಾ ಮತ್ತು ಅಂಜಲಿ ನಟಿಸಿದ್ದಾರೆ. ಅಂದಹಾಗೆ ವಕೀಲ್ ಸಾಬ್ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರಿಮೇಕ್. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ ಪಾತ್ರದಲ್ಲಿ ಅಮಿತಾಬ್ ಮಿಂಚಿದ್ದಾರೆ.

Recommended Video

Rishab Shetty ಕಿರಿಕ್ ಪಾರ್ಟಿ ಟೀಂ ವಿರುದ್ಧ ಜಾಮೀನು ರಹಿತ ವಾರೆಂಟ್ | Filmibeat Kannada

More from Filmibeat

English summary
Actor Chiranjeevi watches Pawan Kalyan starrer Vakeel Saab movie with family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X