For Quick Alerts
  ALLOW NOTIFICATIONS  
  For Daily Alerts

  ದ್ವೇಷ ಮರೆತು ಬಾಲಕೃಷ್ಣಗೆ ಜನ್ಮದಿನದ ಶುಭ ಹಾರೈಸಿದ ಚಿರಂಜೀವಿ

  |

  ಚಿತ್ರರಂಗದಲ್ಲಿ ಪೈಪೋಟಿ, ಜಗಳ, ದ್ವೇಷ ಸಹಜ. ಕೆಲವರು ಅದನ್ನು ಕೊನೆಯವರೆಗೂ ಉಳಿಸಿಕೊಂಡರೆ, ಅನೇಕರು ಅದನ್ನು ಮರೆತು ಒಂದಾಗುತ್ತಾರೆ. ಇತ್ತೀಚೆಗಷ್ಟೇ ಬಾಲಕೃಷ್ಣ ಮತ್ತು ಚಿರಂಜೀವಿ ಬಳಗದ ನಡುವಿನ ಅಸಮಾಧಾನ ಸ್ಫೋಟಗೊಂಡಿತ್ತು. ಚಿರಂಜೀವಿ ಮತ್ತು ಇತರರ ವಿರುದ್ಧ ಬಾಲಕೃಷ್ಣ ನೇರ ವಾಗ್ದಾಳಿ ನಡೆಸಿದ್ದರು. ಆದರೆ ಬಾಲಯ್ಯ ಜನ್ಮದಿನದಂದು ಶುಭಾಶಯ ಕೋರುವ ಮೂಲಕ ನಟ ಚಿರಂಜೀವಿ ಮಾದರಿಯಾಗಿದ್ದಾರೆ.

  ನಂದಮೂರಿ ಬಾಲಕೃಷ್ಣ ಬುಧವಾರ 60ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತೆಲುಗು ಚಿತ್ರರಂಗದ ಅನೇಕ ಗಣ್ಯರು ಹಿರಿಯ ನಟನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಅವರಲ್ಲಿ ನಟ ಚಿರಂಜೀವಿ ಕೂಡ ಸೇರಿದ್ದಾರೆ. ಇತ್ತೀಚೆಗೆ ಚಿರಂಜೀವಿ ನೇತೃತ್ವದಲ್ಲಿ ತೆಲಂಗಾಣ ಸರ್ಕಾರ ಸಿನಿಮಾ ರಂಗದ ಕುರಿತು ಸಭೆ ನಡೆಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಾಲಕೃಷ್ಣ, ಅದು ಭೂಮಿ ಹಂಚಿಕೆಯ ಸಲುವಾಗಿ ನಡೆದಿದ್ದ ಮಾತುಕತೆ ಎಂದು ಆರೋಪಿಸಿದ್ದರು. ಇದು ಎರಡೂ ಬಣಗಳ ನಡುವಿನ ಕಿತ್ತಾಟಕ್ಕೆ ಕಾರಣವಾಗಿತ್ತು. ಮುಂದೆ ಓದಿ...

  ಎನ್‌ಟಿಆರ್‌ ಹಿಂದೆ ಹಲವರು ಪಿತೂರಿ ಮಾಡಿದರು: ಬಾಲಕೃಷ್ಣ ಶಾಕಿಂಗ್ ಹೇಳಿಕೆಎನ್‌ಟಿಆರ್‌ ಹಿಂದೆ ಹಲವರು ಪಿತೂರಿ ಮಾಡಿದರು: ಬಾಲಕೃಷ್ಣ ಶಾಕಿಂಗ್ ಹೇಳಿಕೆ

  ಜೂ ಎನ್‌ಟಿಆರ್ ಶುಭ ಹಾರೈಕೆ

  ಜೂ ಎನ್‌ಟಿಆರ್ ಶುಭ ಹಾರೈಕೆ

  ಬಾಲಕೃಷ್ಣ ಅವರಿಗೆ ಶುಭಾಶಯ ಕೋರಿರುವ ಜೂ. ಎನ್‌ಟಿಆರ್, 'ನೀವು ನನ್ನ ಮೊದಲ ಹೀರೋ. ಈ 60ನೇ ಜನ್ಮದಿನ ನಿಮ್ಮ ಜೀವನದಲ್ಲಿ ಸ್ಮರಣೀಯ ಸಂಗತಿಯಾಗಲಿ ಎಂದು ಹಾರೈಸುತ್ತೇನೆ. ಜೀವನಪರ್ಯಂತ ಆರೋಗ್ಯ ಮತ್ತು ಸಂತೋಷ ಇರಲಿ ಎಂದು ಆಶಿಸುತ್ತೇನೆ ಬಾಬೈ' ಎಂದು ಹೇಳಿದ್ದಾರೆ.

  ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ನಟ ನಂದಮುರಿ ಬಾಲಕೃಷ್ಣ ಪುತ್ರ

  ಎನ್‌ಬಿಕೆ 106 ಟೀಸರ್

  ಎನ್‌ಬಿಕೆ 106 ಟೀಸರ್

  ಬಾಲಕೃಷ್ಣ ಜನ್ಮದಿನದ ಮುನ್ನಾದಿನವಾದ ಮಂಗಳವಾರ ಅವರ ಮುಂದಿನ ಚಿತ್ರ 'ಎನ್‌ಬಿಕೆ 106'ಯ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. 'ಮೊದಲ ಘರ್ಜನೆ' ಎಂದು ಕರೆಯಲಾಗಿರುವ ಒಂದು ನಿಮಿಷದ ಟೀಸರ್‌ನಲ್ಲಿ ಬಿಳಿ ಅಂಗಿ ಹಾಗೂ ಕಪ್ಪು ಲುಂಗಿಯಲ್ಲಿ ಬಾಲಕೃಷ್ಣ ಎಂಟ್ರಿ ವಿಭಿನ್ನವಾಗಿದೆ.

  ಶೀಘ್ರದಲ್ಲಿಯೇ ಮಗನ ಸಿನಿಮಾ

  ಶೀಘ್ರದಲ್ಲಿಯೇ ಮಗನ ಸಿನಿಮಾ

  ಬಾಲಕೃಷ್ಣ ಅವರ ಮಗ ಮೋಕ್ಷಗ್ನ ಕೂಡ ಚಿತ್ರರಂಗಕ್ಕೆ ಪ್ರವೇಶಿಸಲು ವೇದಿಕೆ ಸಿದ್ಧವಾಗುತ್ತಿದೆ. ಈ ವರ್ಷವೇ ಅದರ ಘೋಷಣೆ ಮಾಡುವ ಸಾಧ್ಯತೆ ಇದೆ. ಕಳೆದ ಒಂದು ತಿಂಗಳಿಂದ ಬಾಲಕೃಷ್ಣ ನಿರಂತರವಾಗಿ ಸುದ್ದಿಯಲ್ಲಿದ್ದು, ಒಂದಿಲ್ಲೊಂದು ಆರೋಪಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ. ಚಿರಂಜೀವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅವರು, ತಂದೆ ಎನ್‌ಟಿಆರ್ ಅವರ ರಾಜಕೀಯ ಬೆಳವಣಿಗೆಗೆ ಅನೇಕರು ಪಿತೂರಿ ನಡೆಸಿ ಅಡ್ಡಿಯಾಗಿದ್ದರು ಎಂದು ಆರೋಪಿಸಿದ್ದರು.

  ಚಿರಂಜೀವಿಗೆ ತಿರುಗೇಟು: ಬಹುತೇಕ ಚಿತ್ರರಂಗವೇ ನನ್ನ ಬೆಂಬಲಕ್ಕೆ ಇದೆ ಎಂದ ಬಾಲಕೃಷ್ಣಚಿರಂಜೀವಿಗೆ ತಿರುಗೇಟು: ಬಹುತೇಕ ಚಿತ್ರರಂಗವೇ ನನ್ನ ಬೆಂಬಲಕ್ಕೆ ಇದೆ ಎಂದ ಬಾಲಕೃಷ್ಣ

  English summary
  Tollywood actor Chiranjeevi and many others wishes Nandamuri Balakrishna on his 60th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X