'ಪುಷ್ಪಾ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ತಮಿಳಿನ ಸ್ಟಾರ್ ನಟ?
ಅಲ್ಲು ಅರ್ಜುನ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಪುಷ್ಪಾ'ದಲ್ಲಿ ತಮಿಳಿನ ಸ್ಟಾರ್ ನಟರೊಬ್ಬರು ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಹೌದು, ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ಚಿಯಾನ್ ವಿಕ್ರಂ ನಟಿಸುತ್ತಿದ್ದಾರೆ ಎಂಬ ಸುದ್ದಿಗಳು ತುಸು ಜೋರಾಗಿಯೇ ಹರಿದಾಡುತ್ತಿವೆ.
ರಕ್ತ ಚಂದನ ಕಳ್ಳಸಾಗಣೆ ಕುರಿತು ನಿರ್ಮಿಸಲಾಗುತ್ತಿರುವ ಪುಷ್ಪಾ ಸಿನಿಮಾದಲ್ಲಿ ಚಿಯಾನ್ ವಿಕ್ರಂ ಯಾವ ಪಾತ್ರ ಮಾಡಲಿದ್ದಾರೆ ಎಂಬ ಕುತೂಹಲ ಎದ್ದಿದೆ. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿಕ್ರಂ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದು ಇನ್ನು ಸ್ಪಷ್ಟವಾಗಿಲ್ಲ.

ಪುಷ್ಪಾ, ಅಲ್ಲು ಅರ್ಜುನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ಕಾರಣ ಸಿನಿಮಾಕ್ಕೆ ಹೆಚ್ಚಿನ ರೀಚ್ ಒದಗಿಸುವ ಕಾರಣಕ್ಕೆ ದೊಡ್ಡ ಹೆಸರಿನ ನಟರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ವಿಕ್ರಂ ಅತ್ಯದ್ಭುತ ನಟ ಆಗಿರುವ ಜೊತೆಗೆ ದೊಡ್ಡ ಮಟ್ಟದ ಅಭಿಮಾನಿ ವರ್ಗವನ್ನೂ ಸಹ ಹೊಂದಿದ್ದಾರೆ.
ಈ ಹಿಂದೆ ತಮಿಳಿನ ವಿಜಯ್ ಸೇತುಪತಿ ಪುಷ್ಪಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ನಂತರ ವಿಜಯ್ ಸೇತುಪತಿ, ತಾವು ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದಿದ್ದರು. ನಂತರ ಆರ್.ಮಾಧವನ್ ಅವರು ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ಅದನ್ನು ಸ್ವತಃ ಮಾಧವನ್ ಇದನ್ನು ಅಲ್ಲಗಳೆದರು.
Recommended Video
ಪುಷ್ಪಾ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಭರದಿಂದ ಸಾಗಿದ್ದು, ಅಲ್ಲು ಅರ್ಜುನ್ ಅವರ ಕೆಲವು ಲುಕ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


Click it and Unblock the Notifications











