ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರದಲ್ಲಿ ಆ ಸ್ಟಾರ್ ನಟ ಇರಲ್ಲ
ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪುಷ್ಪ ಸಿನಿಮಾದಲ್ಲಿ ತಮಿಳು ನಟ ಚಿಯಾನ್ ವಿಕ್ರಮ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೀಗ, ಈ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ.
ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಪುಷ್ಪ ಚಿತ್ರದಲ್ಲಿ ವಿಕ್ರಮ್ ನಟಿಸುತ್ತಿಲ್ಲ ಎಂದು ಅವರ ವ್ಯವಹಾರಿಕ ತಂಡ ಖಚಿತಪಡಿಸಿದೆ.
ಈ ಹಿಂದೆ ಪುಷ್ಪ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಯ್ತು. ಬಳಿಕ ಡೇಟ್ ಸಮಸ್ಯೆಯಿಂದ ಸೇತುಪತಿ ಹೊರಗುಳಿದರು. 'ಮಾಸ್ಟರ್' ನಟನ ಬದಲಿಗೆ ವಿಕ್ರಮ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಯಿತು.

ಪುಷ್ಪ ಚಿತ್ರದಲ್ಲಿ ವಿಜಯ್ ಸೇತುಪತಿ ಪ್ರಮುಖ ವಿಲನ್ ಪಾತ್ರದಲ್ಲಿ ನಟಿಸಲು ಅಪ್ರೋಚ್ ಮಾಡಲಾಗಿತ್ತು. ಸೇತುಪತಿ ಬದಲಿಗೆ ವಿಕ್ರಮ್ ಅವರು ವಿಲನ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಒಂದು ವೇಳೆ ಈ ಚಿತ್ರದಲ್ಲಿ ವಿಕ್ರಮ್ ನಟಿಸಿದ್ದರೇ 20 ವರ್ಷದ ಬಳಿಕ ತೆಲುಗು ಸಿನಿಮಾ ಮಾಡಿದಂತೆ ಆಗ್ತಿತ್ತು. ಆದ್ರೆ, ಸದ್ಯಕ್ಕೆ ಇದು ವದಂತಿ ಅಷ್ಟೇ.
ವಿಕ್ರಮ್ ಅವರಿಗೂ ಮೊದಲು ಆರ್ ಮಾಧವನ್ ಈ ಪಾತ್ರ ಮಾಡಬಹುದು ಎಂಬ ಸುದ್ದಿಯೂ ಸದ್ದು ಮಾಡಿತ್ತು. ಸದ್ಯಕ್ಕೆ ವಿಜಯ್ ಸೇತುಪತಿ ಬದಲು ಯಾರು ಈ ಪಾತ್ರ ಮಾಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಗಮನಿಸಬೇಕಾದ ವಿಚಾರ ಅಂದ್ರೆ ಉಪೇಂದ್ರ ಅವರಿಗೂ ಈ ಚಿತ್ರದಲ್ಲಿ ವಿಲನ್ ಆಗಿ ಅಭಿನಯಿಸಲು ಆಫರ್ ಬಂದಿತ್ತು. ಉಪೇಂದ್ರ ನಿರಾಕರಿಸಿದ್ದರು.
ಕನ್ನಡದ ಮತ್ತೊಬ್ಬ ನಟ ಧನಂಜಯ್ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಜೊತೆಗೆ ಆರ್ಯ, ಸುನೀಲ್ ವರ್ಮಾ, ಹರೀಶ್ ಉತ್ತಮನ್ ಹಾಗೂ ಜಗಪತಿ ಬಾಬು ಸಹ ಇರಲಿದ್ದಾರೆ.


Click it and Unblock the Notifications











