For Quick Alerts
  ALLOW NOTIFICATIONS  
  For Daily Alerts

  ಯುವತಿಯ ಅಸಭ್ಯ ವಿಡಿಯೋ ಪೋಸ್ಟ್: ಕೋರಿಯೋಗ್ರಾಫರ್ ಬಂಧನ

  |

  ಯುವತಿಯ ಒಪ್ಪಿಗೆಯಿಲ್ಲದೆ ಆಕೆಯ ಅಸಭ್ಯ ವಿಡಿಯೋಗಳನ್ನು, ಚಿತ್ರಗಳನ್ನು ತೆಗೆದು ಅವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಕೋರಿಯಾಗ್ರಾಫರ್ ಒಬ್ಬನನ್ನು ಬಂಧಿಸಲಾಗಿದೆ.

  ತಾನೊಬ್ಬ ಕೊರಿಯೋಗ್ರಾಫರ್ ಎಂದು ಹೇಳಿಕೊಂಡಿರುವ ಮಣಿ ಪ್ರಕಾಶ್ ಎಂಬ ವ್ಯಕ್ತಿಯನ್ನು ಹೈದರಾಬಾದ್ ಸೈಬರ್ ಪೊಲೀಸರು ಬಂಧಿಸಿದ್ದಾರೆ.

  ಈ ಮಣಿ ಪ್ರಕಾಶ್ ಕಳೆದ ವರ್ಷ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದ. ಆ ಸಿನಿಮಾದಲ್ಲಿ ನಟಿಸಲು ಯುವತಿಯೊಬ್ಬರನ್ನು ಕೇಳಿಕೊಂಡಿದ್ದ ಆ ಯುವತಿಯೂ ಸಹ ಕಿರು ಚಿತ್ರದಲ್ಲಿ ನಟಿಸಿದ್ದರು.

  ಆದರೆ ಕಿರುಚಿತ್ರದ ಚಿತ್ರೀಕರಣ ಮಾಡುವಾಗಲೇ ಆ ಯುವತಿಯ ಅಸಭ್ಯ ವಿಡಿಯೋಗಳನ್ನು ಕೆಲವು ಚಿತ್ರಗಳನ್ನು ತೆಗೆದಿದ್ದ. ಆ ದೃಶ್ಯಗಳು ಚಿತ್ರಗಳನ್ನೆಲ್ಲ ತನ್ನ ಬಳಿಯೇ ಇಟ್ಟುಕೊಂಡಿದ್ದ.

  ಕಿರುಚಿತ್ರದ ನಂತರ ಆ ನಟಿ ಹಾಗೂ ಮಣಿ ಪ್ರಕಾಶ್ ಆಪ್ತವಾಗಿದ್ದರು. ಆದರೆ ಇತ್ತೀಚೆಗೆ ಇಬ್ಬರ ನಡುವೆ ಬಿರುಕು ಬಂದಿದ್ದು ನಟಿಯು ಮಣಿ ಪ್ರಕಾಶ್ ಜೊತೆ ಜಗಳವಾಡಿ ದೂರವಾಗಿದ್ದಾರೆ. ಇದನ್ನು ಸಹಿಸದ ಮಣಿ ಪ್ರಕಾಶ್ ಆ ವಿಡಿಯೋಗಳನ್ನು ಫೇಸ್‌ಬುಕ್‌ ಮೂಲಕ ಪೋಸ್ಟ್‌ ಮಾಡಿದ್ದಾರೆ.

  ವಿಷಯ ತಿಳಿದ ನಟಿಯ ಪೋಷಕರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಣಿ ಪ್ರಕಾಶ್ ಅನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

  ನೋರಾ ಫತೇಹಿ ಹಾಡಿಗೆ ಪ್ರವಾಹದಲ್ಲೂ ಡ್ಯಾನ್ಸ್ ಮಾಡಿದ ಯುವಕ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ತೆಲುಗಿನ ಖ್ಯಾತ ಯೂಟ್ಯೂಬರ್ ಫನ್ ಬಕೆಟ್ ಭಾರ್ಗವ್ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದರು. ಮುಂಬೈನಲ್ಲಿ ಸಹ ನಟಿಯರಿಗೆ ಅವಕಾಶ ಕೊಡಿಸುವ ಆಸೆ ತೋರಿಸಿ ನೀಲಿ ಚಿತ್ರಗಳನ್ನು ನಿರ್ಮಿಸುತ್ತಿದ್ದ ಗ್ಯಾಂಗ್ ಒಂದರ ಬಂಧನವಾಗಿತ್ತು.

  English summary
  Choreographer named Mani Praksh arrested in Hyderabad by cyber police for posting bad videos of an actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X