ಯುವತಿಯಿಂದ ಲೈಂಗಿಕ ಕಿರುಕುಳ ಆರೋಪ; ಜಾನಿ ಮಾಸ್ಟರ್ ಪ್ರತಿಕ್ರಿಯೆ

ಚಿತ್ರರಂಗದಲ್ಲಿ ಕಿರುಕುಳ ಆರೋಪ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಮಲಯಾಳಂ ನಟ ನಿವಿಲ್ ಪೌಲಿ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರು. ಈಗಾಗಲೇ ಕೇಸ್ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಇದೀಗ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ವಿರುದ್ಧವೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.

ತೆಲುಗಿನ ಜಾನಿ ಮಾಸ್ಟರ್ ವಿರುದ್ಧ ಯುವತಿಯೊಬ್ಬಳು ದೂರು ನೀಡಿದ್ದು ಈಗಾಗಲೇ ಎಫ್‌ಐಆರ್ ಸಹ ದಾಖಲಾಗಿದೆ. ಜಾನಿ ಮಾಸ್ಟರ್ ತಂಡದಲ್ಲೇ ಗುರ್ತಿಸಿಕೊಂಡಿದ್ದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಭಾರೀ ಸುದ್ದಿ ಆಗುತ್ತಿದೆ. ಇದೀಗ ಈ ಬಗ್ಗೆ ಸ್ವತಃ ಜಾನಿ ಮಾಸ್ಟರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲಿನ ಆರೋಪಗಳೆಲ್ಲಾ ಸುಳ್ಳು, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ತಿರುಗೇಟು ನೀಡಿದ್ದಾರೆ.

choreographer Jani Master responds to sexual assault allegations

ಜಾನಿ ಮಾಸ್ಟರ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದು ಈಗಾಗಲೇ ಹೈದರಾಬಾದ್ ರಾಯದುರ್ಗ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಔಟ್‌ಡೋರ್ ಚಿತ್ರೀಕರಣಕ್ಕೆ ಹೋದಾಗ ತನಗೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಕ್ರಿಮಿನಲ್ ಬೆದರಿಕೆ (506), ನೋವುಂಟು ಮಾಡುವುದು (323) ಕಲಂ (2) ಜೊತೆಗೆ ಸೆಕ್ಷನ್ 376 ಅತ್ಯಾಚಾರದ ಅಡಿಯಲ್ಲಿ ದೂರು ದಾಖಲಾಗಿದೆ.

ಡ್ಯಾನ್ಸ್ ಯೂನಿಯನ್ ಕಿರಿಕ್ ಕಾರಣಕ್ಕೆ ಕೆಲವರು ಆ ಮಹಿಳೆ ಮೂಲಕ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಜಾನಿ ಮಾಸ್ಟರ್ ಹೇಳಿದ್ದಾರೆ. ನನ್ನ ಮೇಲಿನ ಆರೋಪಗಳಿಗೆ ಸಾಕ್ಷಿ ಇದ್ದರೆ ಶಿಕ್ಷೆ ಕೊಡಿ. ಅದಕ್ಕೆ ನಾನು ಸಿದ್ಧ. ಆಕೆಗೆ ಹಣ ನೀಡಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿಂದೆ ಆಕೆ ನನ್ನ ಬಳಿ ಕೆಲಸ ಮಾಡುತ್ತಿದ್ದಳು. ಬಳಿಕ ಮದುವೆಯಾಗಿ ಹೋದಳು."

choreographer Jani Master responds to sexual assault allegations

"ಇಂಡಸ್ಟ್ರಿಯಲ್ಲಿ ಸಂಘದ ಸದಸ್ಯರಲ್ಲದವರು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಪ್ರಶ್ನಿಸಿದ್ದರಿಂದ ಈ ರೀತಿ ಷಡ್ಯಂತ್ರ ಮಾಡಲಾಗಿದೆ" ಎಂದು ಜಾನಿ ಮಾಸ್ಟರ್ ಹೇಳಿದ್ದಾರೆ. ಇನ್ನು ಪ್ರಕರಣದಲ್ಲಿ ಜಾನಿ ಮಾಸ್ಟರ್ ಪತ್ನಿ ಆಯೇಷಾ ಬಗ್ಗೆ ಗಂಭೀರ ಕೇಳಿಬಂದಿತ್ತು. ಆಕೆ ಕೂಡ ಪತಿಯ ಜೊತೆ ಸೇರಿ ಕಿರುಕುಳ ನೀಡಿದ್ದರು ಎಂದು ಯುವತಿ ಆರೋಪಿಸಿದ್ದಾರೆ. ಇದೀಗ ಆರೋಪಗಳ ಬಗ್ಗೆ ಆಯೇಷಾ ಮಾತನಾಡಿದ್ದಾರೆ.

"ಯೂನಿಯನ್ ಸದಸ್ಯರಲ್ಲದವರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಸೆಟ್‌ಗೆ ಹೋದ ಜಾನಿ ಮಾಸ್ಟರ್, ಕ್ಯಾಮೆರಾಮನ್‌ ಬಳಿ ಮಾತನಾಡಿದ್ದರು. ಈ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದರು. ಯೂನಿಯನ್ ಸದಸ್ಯರಲ್ಲದವರೊಂದಿಗೆ ಕೆಲಸ ಮಾಡಿದರೆ ಕಾರ್ಡ್ ಹೊಂದಿರುವ ಸದಸ್ಯರು ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಿ ಬಂದಿದ್ದರು. ಹೀಗೆ ಯಾರು ಯಾರೋ ಬಂದು ಕೆಲಸ ಮಾಡುವುದರ ಬಗ್ಗೆ ಬೇರೆ ಡ್ಯಾನ್ಸ್ ಮಾಸ್ಟರ್ಸ್ ತಲೆ ಕೆಡಿಸಿಕೊಳ್ಳುತ್ತಿಲ್ಲ" ಎಂದಿದ್ದಾರೆ.

ಜಾನಿ ಮಾಸ್ಟರ್ ಕೂಡ ಬ್ಯುಸಿ ಆಗಿದ್ದಾರೆ. ಆದರೆ ಯೂನಿಯನ್ ಸದಸ್ಯರಿಗೆ ಅನ್ಯಾಯ ಮಾಡಬಾರದು ಎಂದು ಆಗ್ರಹಿಸಿದ್ದರು. ಅಂದು ಸಂಜೆ ಮೆಡಿಕಲ್ ಸಿಐನಿಂದ ಕರೆ ಬಂತು. ಆತನೊಂದಿಗೆ ಐವರು ತೆರಳಿ ಸಿಐ ಅವರನ್ನು ಭೇಟಿ ಮಾಡಿದರು. ನಂತರ, ಜಾನಿ ಮಾಸ್ಟರ್ ನನ್ನನ್ನು ಬಂಧಿಸಲಾಗಿದೆ ಎಂದು ಫೋನ್ ಮಾಡಿದ್ದರು. ಮಾಡದ ಅಪರಾಧಕ್ಕೆ 14 ದಿನಗಳ ಕಾಲ ರಿಮಾಂಡ್‌ನಲ್ಲಿ ಇರುವಂತಾಯಿತು. ಇದರ ಹಿಂದೆ ಯಾರೋ ಒಬ್ಬರು ಇದ್ದಾರೆ ಎಂದು ಆಯೇಷಾ ಹೇಳಿದ್ದಾರೆ.

ಜಾನಿ ಮಾಸ್ಟರ್ ಕನ್ನಡ ಸಿನಿಮಾಗಳಿಗೂ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಹಾಗೂ 'ವಿಕ್ರಾಂತ್ ರೋಣ' ಚಿತ್ರದ 'ರಾ ರಾ ರಕ್ಕಮ್ಮ' ಸಾಂಗ್ಸ್ ಸೂಪರ್ ಹಿಟ್ ಆಗಿತ್ತು.

More from Filmibeat

English summary
Jani Master and his wife reacts on allegations;
Read more about: dance tollywood choreographer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X