For Quick Alerts
  ALLOW NOTIFICATIONS  
  For Daily Alerts

  'ಯಥಾ ರಾಜ ತಥಾ ಪ್ರಜಾ': 'ರಾ ರಾ ರಕ್ಕಮ್ಮ' ಎಂದು ಕುಣಿಸಿದ ಜಾನಿ ಮಾಸ್ಟರ್ ಈಗ ಹೀರೊ!

  |

  ಭಾರತೀಯ ಚಿತ್ರರಂಗದ ಜನಪ್ರಿಯ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ತಮ್ಮ ನೆಚ್ಚಿನ ನಟ ಮೆಗಾಸ್ಟಾರ್ ಚಿರಂಜೀವಿ ಹುಟ್ಟುಹಬ್ಬದ ಸಂಭ್ರಮದಲ್ಲೇ ದೇವರಿಗೆ ಕೈ ಮುಗಿದು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ನಿನ್ನೆ (ಆಗಸ್ಟ್ 23) ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ 'ಯಥಾ ರಾಜ ತಥಾ ಪ್ರಜಾ' ಮುಹೂರ್ತ ನೆರವೇರಿದೆ. 'ರಾಜಕುಮಾರ', 'ವಿಕ್ರಾಂತ್ ರೋಣ' ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಿಗೂ ಜಾನಿ ಮಾಸ್ಟರ್ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್‌ನ 'ಅಪ್ಪು ಡ್ಯಾನ್ಸ್ ಡ್ಯಾನ್ಸ್' ಎಂದು ಕುಣಿಸಿದ್ದು ಇದೇ ಜಾನಿ ಮಾಸ್ಟರ್.

  ಕಿಚ್ಚ ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ಚಿತ್ರದ 'ಯಕ್ಕಾ ಸಕ್ಕಾ' ಹಾಡಿನ ಹುಕ್‌ ಸ್ಟೆಪ್‌ ಮೂಲಕವೇ ಎಲ್ಲರನ್ನು ಕುಣಿಸಿದ್ದ ಜಾನಿ ಮಾಸ್ಟರ್‌ ಇದೀಗ ನಾಯಕನಾಗಿ ಅದೃಷ್ಟ ಪರೀಕ್ಷೆಗಳಿದಿದ್ದಾರೆ. ಶ್ರೀನಿವಾಸ್ ವಿಟ್ಟಲ ನಿರ್ದೇಶನದ 'ಯಥಾ ರಾಜ ತಥಾ ಪ್ರಜಾ' ಸಿನಿಮಾ ಏಕಕಾಲಕ್ಕೆ ತೆಲುಗು, ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಸಲ್ಮಾನ್ ಖಾನ್, ಮೆಗಾಸ್ಟಾರ್ ಚಿರಂಜೀವಿ, ಪುನೀತ್ ರಾಜ್‌ಕುಮಾರ್, ಸುದೀಪ್, ಇಳಯ ದಳಪತಿ ವಿಜಯ್ ಸೇರಿದಂತೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳನ್ನು ಕುಣಿಸಿದ ಮೋಸ್ಟ್ ಟ್ಯಾಲೆಂಟೆಂಡ್ ಡ್ಯಾನ್ಸ್ ಮಾಸ್ಟರ್ ಇವರು. ತಾವು ಕಂಪೋಸ್‌ ಮಾಡುತ್ತಿದ್ದ ಸಾಂಗ್‌ಗಳ ಸಣ್ಣ ಸಣ್ಣ ಝಲಕ್‌ನಲ್ಲಿ ಡ್ಯಾನ್ಸ್ ಮಾಡಿ ಕಾಣಿಸಿಕೊಳ್ಳುತ್ತಿದ್ದ ಜಾನಿ ಮಾಸ್ಟರ್ ಈಗ ಹೀರೊ ಆಗಿ ಇಡೀ ಸಿನಿಮಾ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿದ್ದಾರೆ.

  Chiranjeevi Birthday: ಮೆಗಾಸ್ಟಾರ್ ಬಿರುದು ಕೊಟ್ಟಿದ್ಯಾರು? ಚಿರು ಒಟ್ಟು ಆಸ್ತಿ ಮೌಲ್ಯ ಎಷ್ಟು?Chiranjeevi Birthday: ಮೆಗಾಸ್ಟಾರ್ ಬಿರುದು ಕೊಟ್ಟಿದ್ಯಾರು? ಚಿರು ಒಟ್ಟು ಆಸ್ತಿ ಮೌಲ್ಯ ಎಷ್ಟು?

  'ಯಥಾ ರಾಜ ತಥಾ ಪ್ರಜಾ' ಚಿತ್ರದ ಮೊದಲ ದೃಶ್ಯಕ್ಕೆ ನಟ ಶರ್ವಾನಂದ್ ಕ್ಲಾಪ್ ಮಾಡಿದ್ರೆ, ಸಲ್ಮಾನ್ ಖಾನ್ ಬಾಮೈದ ಆಯುಷ್ ಶರ್ಮಾ ಕ್ಯಾಮರಾಗೆ ಚಾಲನೆ ಕೊಟ್ಟರು. ನಿರ್ದೇಶಕ ಕರುಣಾ ಕುಮಾರ್‌ ಮೊದಲ ದೃಶ್ಯವನ್ನು ನಿರ್ದೇಶನ ಮಾಡಿದ್ದು ವಿಶೇಷ. ಹರೇಶ್‌ ಪಟೇಲ್‌ ಜೊತೆ ಸೇರಿ ನಿರ್ದೇಶಕ ಶ್ರೀನಿವಾಸ್ ವಿಟ್ಟಲ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. 'ಸಿನಿಮಾ ಬಂಡಿ' ಚಿತ್ರದಲ್ಲಿ ನಟಿಸಿದ್ದ ವಿಕಾಸ್ ಮತ್ತೊಬ್ಬ ಹೀರೊ ಆಗಿ ನಟಿಸ್ತಿದ್ದು, ಶ್ರಷ್ಟಿ ವರ್ಮಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಓಂ ಮೂವಿ ಕ್ರಿಯೇಶನ್ಸ್‌ ಮತ್ತು ಶ್ರೀ ಕೃಷ್ಣ ಮೂವಿ ಕ್ರಿಯೇಶನ್ಸ್‌ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ರಾಜಕೀಯ ಹಿನ್ನೆಲೆಯಲ್ಲಿ ಮೂಡಿಬರಲಿರುವ 'ಯಥಾ ರಾಜ ತಥಾ ಪ್ರಜಾ' ಕಮರ್ಷಿಯಲ್‌ ಚಿತ್ರದಲ್ಲಿ ಸಮಾಜಕ್ಕೆ ಮಹತ್ವದ ಸಂದೇಶವೂ ಇದೆಯಂತೆ. ಸೆಪ್ಟೆಂಬರ್‌ 15ರಿಂದ ಚಿತ್ರದ ಶೂಟಿಂಗ್‌ ಶುರುವಾಗಲಿದ್ದು, ಮೂರು ಶೆಡ್ಯೂಲ್‌ನಲ್ಲಿ ಶೂಟಿಂಗ್ ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ. ರಾಧನ ಸಂಗೀತ ಚಿತ್ರಕ್ಕೆ ಇರಲಿದ್ದು, ಸುನೋಜ್‌ ವೆಲಯುಧನ್‌ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

   ಹೀರೊ ಆಗುವುದು ಕನಸು, ನಿರ್ದೇಶನ ಪ್ಯಾಷನ್

  ಹೀರೊ ಆಗುವುದು ಕನಸು, ನಿರ್ದೇಶನ ಪ್ಯಾಷನ್

  ಮೊದಲ ಬಾರಿಗೆ ಹೀರೋ ನಟಿಸುತ್ತಿರುವ ಬಗ್ಗೆ ಜಾನಿ ಮಾಸ್ಟರ್ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ. "ಹೀರೊ ಆಗಬೇಕು ಅನ್ನುವುದು ಚಿಕ್ಕಂದಿನಿಂದಲೂ ಕನಸಾಗಿತ್ತು. ನಾನು ಊರಿನಲ್ಲಿ ಇದ್ದಾಗ ತೇಜಾ ಅವರ ನಿರ್ದೇಶನದಲ್ಲಿ ಉದಯ್ ಕಿರಣ್ ಅವರು ನಟಿಸಿದ 'ಚಿತ್ರಂ', 'ನುವ್ವು ನೇನು' ಹಾಗೂ ತರುಣ್‌ ಅವರು ನಟಿಸಿದ 'ನುವ್ವೆಕಾವಾಲಿ' ರೀತಿಯ ಲವ್‌ ಸ್ಟೋರಿ ಸಿನಿಮಾಗಳು ನನಗೆ ಬಹಳ ಇಷ್ಟವಾಗಿತ್ತು. ಆಗ ನಾನು ಅಂದುಕೊಂಡಿದ್ದೆ. ನಾನು ಯಾಕೆ ಆಗಬಾರದು. ಆದರೆ ಚೆನ್ನಾಗಿರುತ್ತದೆ ಅಂತ. ತೇಜಾ ಅವರನ್ನು ಭೇಟಿ ಮಾಡಿದರೆ ನನ್ನನ್ನು ನೋಡಿ ಹೀರೊ ಮಾಡಿಬಿಡುತ್ತಾರೆ ಎನ್ನುವ ನಂಬಿಕೆಯಿಂದ ಇಲ್ಲಿಗೆ ಬಂದೆ. ನಾನು ಇಲ್ಲಿ ಬಂದ ಮೇಲೆ ಯಾರು ನನ್ನ ಕಡೆ ತಿರುಗಿ ನೋಡಲಿಲ್ಲ. ನಂತರ ನಾನೇ ನಿರ್ದೇಶಕ ಆಗಿ ಬೇರೆಯವರಿಗೆ ಅವಕಾಶ ಕೊಡಬೇಕು ಅಂದುಕೊಂಡೆ. ಹೀರೊ ಆಗಬೇಕು ಅನ್ನುವುದು ಕನಸಾದರೆ, ನಿರ್ದೇಶನ ಪ್ಯಾಷನ್ ಆಗಿತ್ತು".

  ಬೆಂಗಳೂರಿನಲ್ಲಿ 'ಲೈಗರ್' ತಂಡ: ಅಪ್ಪು ಆಶೀರ್ವಾದ ಪಡೆದ ವಿಜಯ್ ದೇವರಕೊಂಡ!ಬೆಂಗಳೂರಿನಲ್ಲಿ 'ಲೈಗರ್' ತಂಡ: ಅಪ್ಪು ಆಶೀರ್ವಾದ ಪಡೆದ ವಿಜಯ್ ದೇವರಕೊಂಡ!

   ಕ್ಯಾಮರಾ ಹಿಂದೆ ನಿಂತು ಹೇಳುವುದು ಸುಲಭ

  ಕ್ಯಾಮರಾ ಹಿಂದೆ ನಿಂತು ಹೇಳುವುದು ಸುಲಭ

  "ಕೊರಿಯೋಗ್ರಫಿ ನನಗೆ ಬಹಳ ಇಷ್ಟ. ಅದನ್ನು ಬಿಡುವ ಮಾತೇಯಿಲ್ಲ. ಯಾರೇ ಕರೆ ಮಾಡಿ ಸಾಂಗ್ ಕೊರಿಯೋಗ್ರಫಿ ಮಾಡಬೇಕು ಎಂದರೆ ಹೋಗಿ ಮಾಡುತ್ತೇನೆ. ದೊಡ್ಡ ಸಿನಿಮಾ ಆದರೂ ಸಣ್ಣ ಸಿನಿಮಾ ಆದರೂ ಮಾಡುತ್ತೇನೆ. ಹೀರೊ ಆಗುವುದಕ್ಕೆ ಭಯ ಆಗುತ್ತಿದೆ. ಕ್ಯಾಮೆರಾ ಹಿಂದೆ ನಿಂತು ಹೀಗೆ ಮಾಡಿ ಹಾಗೆ ಮಾಡಿ ಎನ್ನುವುದು ಬೇರೆ. ಈಗ ಕ್ಯಾಮೆರಾ ಮುಂದೆ ಹೋಗುತ್ತಿದ್ದೇನೆ. ಸಾಕಷ್ಟು ನಟ, ನಟಿಯರಿಂದ ಸಾಕಷ್ಟು ಕಲಿತಿದ್ದೇನೆ. ಅದೆಲ್ಲಾ ಸಹಾವಾಗಬಹುದು. ನಟನೆ ಗೊತ್ತಿಲ್ಲ. ಸಹಜವಾಗಿಯೇ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತೇನೆ" ಎಂದಿದ್ದಾರೆ.

   ನನ್ನ ಚಿತ್ರಕ್ಕೆ ನಾನೇ ಕೊರಿಯೋಗ್ರಫಿ ಮಾಡ್ತೀನಿ

  ನನ್ನ ಚಿತ್ರಕ್ಕೆ ನಾನೇ ಕೊರಿಯೋಗ್ರಫಿ ಮಾಡ್ತೀನಿ

  "ನಾನು ಸಾಕಷ್ಟು ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿದ್ದೇನೆ. ನನ್ನ ಚಿತ್ರಕ್ಕೆ ಯಾರು ಮಾಡುತ್ತಾರೆ ಎನ್ನುವುದನ್ನು ನೋಡೋಣ. ಸಿನಿಮಾ ಹಾಡುಗಳು ಸಿದ್ಧವಾದ ಮೇಲೆ ನಾನೇ ಮಾಡಬೇಕಾ ? ಬೇರೆಯವರು ಬೇಕಾ ಎನ್ನುವುದನ್ನು ನಿರ್ದೇಶಕರು ನಿರ್ಧರಿಸುತ್ತಾರೆ. ಅವರು ಕೇಳಿದರೆ ಖಂಡಿತ ನಾನು ಮಾಡುತ್ತೇನೆ. ನಾನು ಡ್ಯಾನ್ಸ್ ಮಾಸ್ಟರ್ ಆಗಿರುವುದರಿಂದ ಸಿನಿಮಾದಲ್ಲಿ ಡ್ಯಾನ್ಸಿಂಗ್ ನಂಬರ್‌ಗಳು ಇರುತ್ತಾ ಅನ್ನುವ ಕುತೂಹಲ ಇದ್ದೇ ಇರುತ್ತದೆ. ಖಂಡಿತ ನೋಡೋಣ. ಅಂತಹ ಸಾಂಗ್ಸ್ ಸಿದ್ಧವಾಗುತ್ತಿದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ನಾವು ಮಾಡುತ್ತೇನೆ ಎಂದುಕೊಂಡಿದ್ದೇನೆ. ನನಗೆ ಕೊರಿಯೋಗ್ರಫಿ ಅಂದರೆ ಪ್ಯಾಷನ್, ಇಷ್ಟ ಆಗಿರುವುದರಿಂದ ಖಂಡಿತ ಒಳ್ಳೆ ಡ್ಯಾನ್ಸ್ ಇರುತ್ತದೆ".

   ಇದು ಒಬ್ಬ ಕಾಮನ್‌ಮ್ಯಾನ್ ಕಥೆ

  ಇದು ಒಬ್ಬ ಕಾಮನ್‌ಮ್ಯಾನ್ ಕಥೆ

  ಸ್ಟಾರ್‌ಗಳು ಯಾವ ತರ ಡ್ಯಾನ್ಸ್ ಮಾಡಿದರೆ ಅಭಿಮಾನಿಗಳು ಶಿಳ್ಳೆ ಹೊಡಿತ್ತಾರೆ ಅನ್ನುವುದು ಗೊತ್ತು. ಆದರೆ ನಾನು ಏನು ಮಾಡಿದರೆ ಜನ ಇಷ್ಟಪಡುತ್ತಾರೆ ಎನ್ನುವುದು ಗೊತ್ತಿಲ್ಲ. ಪಾತ್ರಕ್ಕೆ ತಕ್ಕಂತೆ ನಾನು ಡ್ಯಾನ್ಸ್ ಮಾಡಿ ಎಲ್ಲರನ್ನು ರಂಜಿಸ್ತೀನಿ ಎಂದುಕೊಂಡಿದ್ದೇನೆ. ಕಥೆ ಕೇಳಿದಾಕ್ಷಣ ಚೆನ್ನಾಗಿದೆ ಎಂದು ಎಲ್ಲರಿಗೂ ಅನ್ನಿಸುತ್ತದೆ. ಕಥೆಯಲ್ಲಿರುವ ಪಾತ್ರ ಪೋಷಣೆ ಚೆನ್ನಾಗಿದೆ. ನಾನು ಕಾಮನ್‌ಮ್ಯಾನ್ ಆಗಿ ಕಾಣಿಸಿಕೊಳ್ತಿದ್ದು, ಚಿತ್ರದಲ್ಲಿ ಕಾಮನ್‌ಮ್ಯಾನ್‌ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ. ಇದೇ ಕಾರಣಕ್ಕೆ ನನನಗೆ ಸಿನಿಮಾ ಕಥೆ ಬಹಳ ಇಷ್ಟ ಆಗಿ ನಟಿಸುತ್ತಿದ್ದೇನೆ".

  Recommended Video

  Raghavendra Rajkumar | ರಾಘವೇಂದ್ರ ರಾಜ್‌ಕುಮಾರ್ ಮನೆಯಲ್ಲಿದೆ ಆ ವಿಶೇಷ ವಸ್ತು *Sandalwood
  English summary
  Choreographer Jani Master Turns Hero Yatha Raja Tatha Praja Movie Launched. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X