ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲಾ ರಿ ರಿಲೀಸ್ ಮಾಡಿದ್ರೆ ಜನ ಥಿಯೇಟರ್‌ಗೆ ಬರುತ್ತಾರಾ?

ರಿ ರಿಲೀಸ್.. ತೆಲುಗು ಚಿತ್ರರಂಗದಲ್ಲಿ ಹೆಚ್ಚು ಕೇಳಿಬರುವ ಈ ಪದ ತೆಲುಗಿನವರಿಗಿಂತ ಕನ್ನಡ ಸಿನಿ ರಸಿಕರಿಗೆ ಹೆಚ್ಚು ಪರಿಚಿತ. ಏಕೆಂದರೆ ಕನ್ನಡದ ಓಂ ರಿ ರಿಲೀಸ್ ಆಗ್ತಿದೆ ಎಂಬುದನ್ನು ಹಲವಾರು ಬಾರಿ ಕೇಳಿ ಅಭ್ಯಾಸವಾಗಿಬಿಟ್ಟಿದೆ. ಇನ್ನು ಕನ್ನಡದ ಓಂ ಚಿತ್ರವೇನೋ ಹಲವಾರು ವರ್ಷಗಳ ಕಾಲ ಟಿವಿಯಲ್ಲಿ ಪ್ರಸಾರವಾಗಲಿಲ್ಲ ಹಾಗೂ ಸಿನಿಮಾ ಸೂಪರ್‌ಹಿಟ್ ಎಂಬ ಕಾರಣದಿಂದಾಗಿ ಪದೇ ಪದೇ ಮರು ಬಿಡುಗಡೆಯಾಗುತ್ತಿತ್ತು.

ಇನ್ನು ತೆಲುಗು ರಾಜ್ಯಗಳಲ್ಲಿ ಅಲ್ಲಿನ ಸೂಪರ್ ಸ್ಟಾರ್‌ಗಳ ಚಿತ್ರಗಳನ್ನು ಅವರ ಹುಟ್ಟುಹಬ್ಬದ ದಿನದಂದು ರಿ ರಿಲೀಸ್ ಮಾಡಲಾಗುತ್ತಿತ್ತು. ಬಳಿಕ ಅಲ್ಲಿ ಈ ರಿ ರಿಲೀಸ್ ಟ್ರೆಂಡ್ ದೊಡ್ಡ ಮಟ್ಟಕ್ಕೆ ತಿರುಗಿ ಸಾಮಾನ್ಯ ದಿನಗಳಲ್ಲೂ ಸಹ ಸ್ಟಾರ್‌ಗಳ ವಿಂಟೇಜ್ ಚಿತ್ರಗಳನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಶುರು ಮಾಡಲಾಯಿತು.

Cinema lovers are not showing interest towards Ala modalaindi and Mirapakay re release

ಮಹೇಶ್ ಬಾಬು ನಟನೆಯ ಪೊಕಿರಿ ಹಾಗೂ ಪವನ್ ಕಲ್ಯಾಣ್ ನಟನೆಯ ಜಲ್ಸಾ ಚಿತ್ರಗಳು ಮರು ಬಿಡುಗಡೆಯಾಗಿ ಕೋಟಿ ಕೋಟಿ ಗಳಿಸಿದ ಬೆನ್ನಲ್ಲೇ ರಿ ರಿಲೀಸ್ ಹುಚ್ಚು ಅಭಿಮಾನಿಗಳಲ್ಲಿ ಮಾತ್ರವಲ್ಲದೇ ಚಿತ್ರಗಳ ನಿರ್ಮಾಪಕರು ಹಾಗೂ ವಿತರಕರಲ್ಲೂ ಸಹ ಹೆಚ್ಚಾಯಿತು. ಹೀಗೆ ದೊಡ್ಡ ಮಟ್ಟದ ಬೇಡಿಕೆ ಪಡೆದಯಕೊಂಡ ರಿ ರಿಲೀಸ್ ಟ್ರೆಂಡ್ ಈಗ ಅತಿರೇಖಕ್ಕೆ ತಲುಪಿರುವುದು ಸುಳ್ಳಲ್ಲ.

ಇತ್ತೀಚೆಗೆ ಮರು ಬಿಡುಗಡೆ ಕಂಡ ತೆಲುಗಿನ ಕೆಲ ಚಿತ್ರಗಳು ನಿರೀಕ್ಷಿಸಿದ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ವಿಫಲವಾದವು. ಇನ್ನು ಈ ಶುಕ್ರವಾರ ( ಫೆಬ್ರವರಿ 24 ) ಸಹ ತೆಲುಗಿನ ಎರಡು ವಿಂಟೇಜ್ ಸಿನಿಮಾಗಳನ್ನು ರಿ ರಿಲೀಸ್ ಮಾಡಲಾಗುತ್ತಿದ್ದು, ಈ ಕುರಿತು ಯಾವುದೇ ಹೈಪ್ ಕಂಡುಬರುತ್ತಿಲ್ಲ. ನಾನಿ ಹಾಗೂ ನಿತ್ಯ ಮೆನನ್ ನಟನೆಯ ಅಲಾ ಮೊದಲಾಯಿಂದಿ ಹಾಗೂ ರವಿ ತೇಜಾ ನಟನೆಯ ಮಿರಪಕಾಯ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗ್ತಿದೆ. ಇನ್ನು ಬಿಡುಗಡೆಗೆ ಕೇವಲ ಎರಡು ದಿನಗಳು ಬಾಕಿ ಇದ್ದರೂ ಈ ಚಿತ್ರಗಳ ಮರು ಬಿಡುಗಡೆಯ ಬಗ್ಗೆ ಅಭಿಮಾನಿ ವಲಯಗಳಲ್ಲೇ ಕ್ರೇಜ್ ಹುಟ್ಟಿಲ್ಲ. ಹೀಗಾಗಿ ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲಾ ರಿ ರಿಲೀಸ್ ಮಾಡಿದ್ರೆ ಜನರು ಥಿಯೇಟರ್‌ಗೆ ತಾನೇ ಹೇಗೆ ಬರುತ್ತಾರೆ ಎಂಬ ಅಭಿಪ್ರಾಯಗಳನ್ನು ಸಿನಿ ರಸಿಕರು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Cinema lovers are not showing interest towards Ala modalaindi and Mirapakay re release. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X