"ಈಗ ಕೂಡ ತಾಯಿ ಆಗುವ ಆಸೆಯಿದೆ, ಏನ್ ಮಹಾ ವಯಸ್ಸಾಗಿದೆ ನಂಗೆ"; ನಟಿ ಸಮಂತಾ

ತೆಲುಗು ನಟಿ ಸಮಂತಾ ಇತ್ತೀಚೆಗೆ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಚಿತ್ರದಲ್ಲಿ ಆಕೆ ನಟಿಸುತ್ತಿಲ್ಲ. ಇತ್ತೀಚೆಗೆ ಸ್ಯಾಮ್ ನಟಿಸಿದ್ದ 'ಸಿಟಾಡೆಲ್' ವೆಬ್ ಸೀರಿಸ್ ಬಿಡುಗಡೆ ಆಗಿದೆ. ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ರಾಜ್‌ & ಡಿಕೆ ನಿರ್ದೇಶನದ 'ಸಿಟಾಡೆಲ್: ಹನಿ ಬನಿ' ವೆಬ್ ಸೀರಿಸ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸ್ಪೈ ಥ್ರಿಲ್ಲರ್ ಸೀರಿಸ್‌ನಲ್ಲಿ ಸಮಂತಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಆಕೆಯ ಬೋಲ್ಡ್ ದೃಶ್ಯಗಳು ವೈರಲ್ ಆಗಿ ಸದ್ದು ಮಾಡ್ತಿದೆ. ಡಿವೋರ್ಸ್ ಬಳಿಕ ಸ್ಯಾಮ್ ಮತ್ತಷ್ಟು ಹಾಟ್ ಹಾಟ್ ಆಗಿ ನಟಿಸ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Citadel actress Samantha once again says She wanted to be a mother

ತೆಲುಗು ನಟ ನಾಗಚೈತನ್ಯ ಅವರನ್ನು ಸಮಂತಾ ಪ್ರೀತಿಸಿ ಮದುವೆ ಆಗಿದ್ದರು. ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ದೂರಾಗಿದ್ದಾರೆ. ಡಿವೋರ್ಸ್ ಪಡೆದಿದ್ದಾರೆ. ನಟಿ ಶೋಭಿತಾ ಧುಲಿಪಾಲ ಜೊತೆ ಚೈತು ಮದುವೆಗೆ ಸಿದ್ಧರಾಗಿದ್ದಾರೆ. ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಮದುವೆಗೆ ಸಿದ್ಧತೆ ನಡೀತಿದೆ. ಇದೆಲ್ಲದರ ನಡುವೆ ಸಮಂತಾ ತಾಯಿ ಆಗುವ ಬಯಕೆಯನ್ನು ಮತ್ತೊಮ್ಮೆ ಹೇಳಿಕೊಂಡಿದ್ದಾರೆ.

'ಸಿಟಾಡೆಲ್' ವೆಬ್‌ ಸೀರಿಸ್ ಪ್ರಚಾರದ ಭಾಗವಾಗಿ ಸಮಂತಾ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಸಹ ಇದೆ. 'ಸಿಟಾಡೆಲ್' ಸೀರಿಸ್‌ನಲ್ಲಿ ಒಂದು ಮಗುವಿನ ತಾಯಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಜೊತೆ ಸ್ಪೈ ಏಜೆಂಟ್ ಆಗಿ ಕೂಡ ನಟಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ತಯಾರಿ ನಡೆಸಿ ಆಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ.

Citadel actress Samantha once again says She wanted to be a mother

ಸಮಂತಾ ಮಾತನಾಡಿ "ಸಿಟಾಡೆಲ್ ಸೀರಿಸ್‌ನಲ್ಲಿ ತಾಯಿ ಪಾತ್ರ ನಿಭಾಯಿಸಿದ್ದೇನೆ. ಚೈಲ್ಡ್ ಆರ್ಟಿಸ್ಟ್ ಜೊತೆ ನಟಿಸಿದ್ದು ಬಹಳ ವಿಭಿನ್ನ ಅನುಭವ. ಆ ಹುಡುಗಿ ಜೊತೆ ಸೆಟ್‌ನಲ್ಲಿ ಇದ್ದಷ್ಟು ದಿನ ನನ್ನ ಸ್ವಂತ ಮಗಳ ರೀತಿ ಇದ್ದಂತೆ ಅನ್ನಿಸುತ್ತಿತ್ತು" ಎಂದು ಸಮಂತಾ ಹೇಳಿಕೊಂಡಿದ್ದಾರೆ.

ಈಗ ತಾಯಿ ಆಗಬೇಕು ಎಂದುಕೊಳ್ಳುವುದು ಬಹಳ ತಡವಾಯಿತು ಎಂದು ನನಗೆ ಅನ್ನಿಸುತ್ತಿಲ್ಲ. ತಾಯಿಯಾಗಿರಲು ನಾನು ಇಷ್ಟಪಡುತ್ತೀನಿ. ಆ ಅನುಭೂತಿ ಬೇಕು ಎಂದು ಸದಾ ಅಂದುಕೊಳ್ಳುತ್ತೇನೆ. ಅದೊಂದು ಸುಂದರ ಅನುಭೂತಿ. ಅದಕ್ಕಾಗಿ ನಾನು ಕಾಯುತ್ತಿದ್ದೇನೆ. ಎಲ್ಲರೂ ನನ್ನ ವಯಸ್ಸಿನ ಬಗ್ಗೆ ಮಾತನಾಡುತ್ತಾರೆ. ಆದರೆ ಅದೇನು ಭಾರೀ ಅಡ್ಡಿ ಆಗಲ್ಲ ಎಂದು ನನಗೆ ಅನ್ನಿಸುತ್ತಿದೆ" ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಸಮಂತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿತ್ತು. ಕೂಡಲೇ ಆಕೆ ಅದಕ್ಕೆ ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ವೈದ್ಯಕೀಯ ಚಿಕಿತ್ಸೆ ಜೊತೆಗೆ ವರ್ಕ್‌ಔಟ್ ಮಾಡಿ ದೇಹ ದಂಡಿಸ ಅದರ ವಿರುದ್ಧ ಹೋರಾಡಲು ಆರಂಭಿಸಿದ್ದರು. ಸದ್ಯ ತಮ್ಮ ಆರೋಗ್ಯದ ಬಗ್ಗೆ ಎದುರಾದ ಪ್ರಶ್ನೆಗೂ ಸ್ಯಾಮ್ ಉತ್ತರಿಸಿದ್ದಾರೆ.

ಸದ್ಯ ಪರವಾಗಿಲ್ಲ, ನಾನು ನನ್ನ ಜೀವನದ ಒಳ್ಳೆ ಪೇಸ್‌ನಲ್ಲಿ ಇದ್ದೀನಿ ಎನ್ನಿಸುತ್ತಿದೆ. ಪ್ರತಿ ದಿನವನ್ನು ಆಸ್ವಾದಿಸುತ್ತಿದ್ದೇನೆ ಎಂದು ಸಮಂತಾ ವಿವರಿಸಿದ್ದಾರೆ. ಸಮಂತಾ ಕೊನೆಯದಾಗಿ 'ಖುಷಿ' ಚಿತ್ರದಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡ ಜೋಡಿಯಾಗಿ ತೆರೆಮೇಲೆ ಬಂದಿದ್ದರು. ಆರೋಗ್ಯ ಸಮಸ್ಯೆ ಕಾರಣಕ್ಕೆ ಇತ್ತೀಚೆಗೆ ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿಲ್ಲ.

ಇತ್ತೀಚೆಗೆ ರಿಲೇಷನ್‌ಶಿಪ್‌ ಬಗ್ಗೆ ಕೂಡ ಸಮಂತಾ ಮಾತನಾಡಿದ್ದರು. ಸಂದರ್ಶನವೊಂದರಲ್ಲಿ ಸಮಂತಾ ಸಿಂಗಲ್ ಆಗಿಯೇ ಇರಲು ಇಡುಪಡುತ್ತಾರಾ? ಎಂದು ಕೇಳಲಾಗಿತ್ತು. ಕೂಡಲೇ ಉತ್ತರಿಸಿದ್ದ ಸ್ಯಾಮ್ 'ಇಲ್ಲ' ಎಂದು ಹೇಳಿದ್ದರು. ಆ ವೀಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ತಾಯಿ ಆಗುವ ಬಗ್ಗೆಯೂ ಮಾತನಾಡಿರುವುದು ನೋಡಿದರೆ ಸಮಂತಾ ಮತ್ತೊಂದು ಮದುವೆ ಆಗ್ತಾರಾ? ಎನ್ನುವ ಊಹಾಪೋಹ ಶುರುವಾಗಿದೆ.

More from Filmibeat

English summary
Samantha ruth prabhu opens up on her desire for motherhood;
Read more about: samantha tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X