ಬಾಲಯ್ಯ- ರವಿತೇಜ ನಡುವೆ ಬಿಗ್‌ ಫೈಟ್?: ಸದ್ಯದಲ್ಲೇ ಸಿಗಲಿದೆ ಉತ್ತರ!

ತೆಲುಗು ಚಿತ್ರ ರಂಗದಲ್ಲಿ ಸಾಕಷ್ಟು ಸ್ಟಾರ್‌ ನಟರಿದ್ದಾರೆ. ಪ್ರತಿ ವಾರ ಒಬ್ಬ ಸ್ಟಾರ್‌ ಸಿನಿಮಾ ರಿಲೀಸ್ ಆಗುತ್ತೆ. ಹಾಗೇನಾದರು ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದು ಬಿಟ್ಟರೆ ಅದು ಅವರ ನಡುವೆ ಇರುವ ಸ್ಟಾರ್‌ ವಾರ್‌ ಪ್ರತಿಬಿಂಬಿಸುತ್ತದೆ. ಹಾಗೆ ಹಲವು ಬಾರಿ ಒಟ್ಟೊಟ್ಟಿಗೆ ರಿಲೀಸ್ ಆದ ಸ್ಟಾರ್‌ ಸಿನಿಮಾಗಳು ಅಂದರೆ ಅದು ನಟ ನಂದಮೂರಿ ಬಾಲ ಕೃಷ್ಣ ಮತ್ತು ಮಾಸ್ ಮಹಾರಾಜ ರವಿತೇಜ ಅವರ ಸಿನಿಮಾಗಳು.

ಬಾಲಯ್ಯು ಮತ್ತು ರವಿತೇಜ ಅವರಿಗೆ ತಮ್ಮದೇ ಆದ ಪ್ರತ್ಯೇಕ ಸ್ಟಾರ್‌ ಗಿರಿ ಇದೆ. ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಇವರಿಬ್ಬರ ನಡುವಿನ ಸ್ಟಾರ್‌ ವಾರ್‌ ಮತ್ತು ಕೋಲ್ಡ್‌ ವಾರ್‌ ಸಾದಾ ಸದ್ದು ಮಾಡುತ್ತಿತ್ತು. ಒಂದಲ್ಲಾ ಒಂದು ವಿಚಾರಕ್ಕೆ ಇವರಿಬ್ಬರ ನಡುವಿನ ಫೈಟ್‌ ಸಮಾಚಾರ ಹರಿದಾಡುತ್ತಿತ್ತು.

ಇವರ ನಡುವೆ ಮುನಿಸು ಇತ್ತು. ಇವರ ನಡುವೆ ಸ್ಟಾರ್‌ ವಾರ್‌ ಇತ್ತು. ಒಬ್ಬರ ಮೇಲೆ ಒಬ್ಬರು ಜಿದ್ದು ಸಾಧಿಸುತ್ತಲಿದ್ದರು. ಎನ್ನುವ ಸುದ್ದಿಗಳ ರೆಕ್ಕೆ ಪುಕ್ಕಗಳನ್ನು ಸ್ವತಃ ತಾವೇ ಕತ್ತರಿಸಿದ್ದಾರೆ. ಏನಿದು ಸಮಾಚಾರ ಅವರ ನಡುವೆ ಜಿದ್ದಾ ಜಿದ್ದಿ ಇರಲೇ ಇಲ್ಲವಾ ಎಂದು ಅಚ್ಚರಿ ಆಗಬಹುದು. ಅದನ್ನು ಅವರೇ ಹೇಳಿದ್ದಾರೆ ಮುಂದೆ ಓದಿ..

ಒಟಿಟಿ ವೇದಿಕೆಯಲ್ಲಿ ಒಂದಾದ ಬಾಲಯ್ಯ ಮತ್ತು ರವಿತೇಜ!

ಒಟಿಟಿ ವೇದಿಕೆಯಲ್ಲಿ ಒಂದಾದ ಬಾಲಯ್ಯ ಮತ್ತು ರವಿತೇಜ!

ನಟ ಬಾಲಯ್ಯ ಅಖಂಡ ಚಿತ್ರದ ಯಶಸ್ಸಿನ ನಂತರ ಕಾರ್ಯಕ್ರಮದಲ್ಲಿ ಒಂದರಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಒಟಿಟಿಯಲ್ಲಿ ಮೂಡಿ ಬರುತ್ತಿರುವ ಕಾರ್ಯಕ್ರಮವನ್ನು ನಟ ನಂದಮೂರಿ ಬಾಲಕೃಷ್ಣ ನಡೆಸಿ ಕೊಡುತ್ತಿದ್ದಾರೆ. 'ಅನ್ ಸ್ಟಾಪಬಲ್' ಹೆಸರಿನಲ್ಲಿ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಇದೇ ಕಾರ್ಯಕ್ರಮಕ್ಕೆ ರವಿತೇಜ ಅತಿಥಿಯಾಗಿ ಬಂದಿದ್ದರು. ಈ ಜೋಡಿಯನ್ನು ಒಂದೇ ವೇದಿಕೆಯಲ್ಲಿ ನೋಡಿದವರಿಗೆ ಅಚ್ಚರಿ ಆಗಿದಂತೂ ಸತ್ಯ. ಆದರೆ ಇದು ಒಂದು ಒಳ್ಳೆಯ ಉದ್ದೇಶಕ್ಕೆ ಆಗಿತ್ತು. ಕಾರ್ಯಕ್ರಮದಲ್ಲಿ ಇಬ್ಬರು ಕೆಲ ಸಮಯ ಪರಸ್ಪರ ಮಾತನಾಡಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಇದ್ದ ಗಾಸಿಪ್‌ಗಳಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

ರವಿತೇಜಗೆ ನೇರ ಪ್ರಶ್ನೆ ಮಾಡಿದ ಬಾಲಯ್ಯ!

ರವಿತೇಜಗೆ ನೇರ ಪ್ರಶ್ನೆ ಮಾಡಿದ ಬಾಲಯ್ಯ!

ಸದ್ಯ ಈ ಕಾರ್ಯಕ್ರಮದ ಪ್ರೋಮೊ ರಿಲೀಸ್‌ ಆಗಿದೆ. ಪ್ರೋಮೊದಲ್ಲಿ ಬಾಲಯ್ಯ ರವಿತೇಜ ಅವರನ್ನು ನೇರವಾಗಿ ಗಾಸಿಪ್‌ ಬಗ್ಗೆ ಪ್ರಶ್ನೆ ಮಾಡುತ್ತಾರೆ. ರವಿತೇಜ ಕೂಡ ಈ ಗಾಸಿಪ್‌ಗಳೆಲ್ಲ ಆಧಾರವಿಲ್ಲದ ಸುಳ್ಳು ಎಂದು ಹೇಳುವ ಮೂಲಕ ಸಣ್ಣ ಸುಳಿವು ಕೊಟ್ಟಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ವಿಚಾರ ತಿಳಿಯ ಬೇಕು ಅಂದರೆ ಪೂರ್ತಿ ಕಾರ್ಯಕ್ರಮ ಪ್ರಸಾರ ಆಗಬೇಕು. ಇವರಿಬ್ಬರು ಒಟ್ಟಿಗೆ ಸೇರುತ್ತಾರೆ ಎನ್ನುವ ವಿಚಾರವೆ ಇವರ ನಡುವೆ ಯಾವ ರೀತಿಯಾ ವೈಮನಸ್ಸು ಇಲ್ಲ ಎನ್ನುವುದನ್ನು ಹೇಳುತ್ತಿದೆ. ಹೀಗಿರುವಾಗ ಕಾರ್ಯಕ್ರಮದಲ್ಲಿ ಹಲವು ಗೊಂದಲಗಳಿಗೆ ಉತ್ತರ ಸಿಗಲಿದೆ. ಈ ಕಾರ್ಯಕ್ರಮ ಡಿಸೆಂಬರ್ 31ರಂದು ಪ್ರಸಾರಗೊಳ್ಳಲಿದೆ.

ಬಾಲಯ್ಯನ ನಾಯಕಿ ಬಗ್ಗೆ ಬ್ಯಾಡ್ ಕಮೆಂಟ್‌ ಮಾಡಿದ್ದರ ರವಿತೇಜ?

ಬಾಲಯ್ಯನ ನಾಯಕಿ ಬಗ್ಗೆ ಬ್ಯಾಡ್ ಕಮೆಂಟ್‌ ಮಾಡಿದ್ದರ ರವಿತೇಜ?

ಇನ್ನು ಇವರ ನಡುವೆ ವೈಮನಸ್ಸು ಇದೆ ಎನ್ನುವ ವಿಚಾರಕ್ಕೆ ಮತ್ತಷ್ಟು ಬಲ ಕೊಟ್ಟಿದ್ದು ರವಿತೇಜ. ರವಿತೇಜ ಬಾಲಯ್ಯ ಅಭಿನಯದ ಚಿತ್ರವೊಂದರ ನಾಯಕಿ ಬಗ್ಗೆ ವ್ಯಂಗ್ಯ ಆಡಿದ್ದರಂತೆ. ಈ ಸುದ್ದಿ ತಿಳಿದು ಬಾಲಯ್ಯ ಕೂಡ ರವಿತೇಜ ಬಗ್ಗೆ ಕೆಟ್ಟಾಗಿ ಮಾತನಾಡಿದ್ದರಂತೆ. ಆದರೆ ಈ ಬಗ್ಗೆ ಇಬ್ಬರೂ ನಟರು ಎಲ್ಲೂ ಬಹಿರಂಗ ಹೇಳಿಕೆ ನೀಡಿಲ್ಲ. ಜೊತೆಗೆ ಅವರು ಹೊರಗೆ ಎಲ್ಲೂ ಕೂಡ ಜೊತೆಯಾಗಿ ಹೆಚ್ಚು ಆಪ್ತವಾಗಿಯೂ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಇನ್ನು ಒಮ್ಮೆ ಚಿರಂಜೀವಿ ಮನೆಯ ಪಾರ್ಟಿಯಲ್ಲೂ ಕೂಡ ಒಟ್ಟಿಗೆ ಡ್ಯಾನ್ಸ್‌ ಮಾಡಲು ನಿರಾಕರಿಸಿದ್ದರಂತೆ.

ಪೈಪೋಟಿಯಲ್ಲಿ ತೆರೆ ಕಾಣುತ್ತಿದ್ದ ಬಾಲಯ್ಯ-ರವಿತೇಜ ಚಿತ್ರಗಳು!

ಪೈಪೋಟಿಯಲ್ಲಿ ತೆರೆ ಕಾಣುತ್ತಿದ್ದ ಬಾಲಯ್ಯ-ರವಿತೇಜ ಚಿತ್ರಗಳು!

2008ರಲ್ಲಿ ಬಾಲಯ್ಯ ಅಭಿನಯದ 'ಒಕ್ಕ ಮೊಗಡು', ರವಿತೇಜ ಅಭಿನಯದ 'ಕೃಷ್ಣ' ಚಿತ್ರಗಳು ರಿಲೀಸ್‌ ಆಗಿ ಬಾಕ್ಸಾಫೀಸ್‌ನಲ್ಲಿ ಹಣಾಹಣಿ ನಡೆಸಿದ್ದವು. ಅಂತೆಯೇ 2009ರ ಮೇ 1ರಂದು ಬಾಲಯ್ಯ ಅವರ 'ಮಿತ್ರುಡು' ಚಿತ್ರ ರಿಲೀಸ್‌ ಆಯ್ತು, ಒಂದೇ ವಾರದಲ್ಲಿ ರವಿತೇಜ ಅವರ 'ಕಿಕ್‌' ಚಿತ್ರ ತೆರೆಗೆ ಬಂದು. ಹೀಗೆ 2011 ರಲ್ಲಿ ಕೂಡ ಬಾಲಯ್ಯ ಅವರ 'ಪರಮ ವೀರ ಚಕ್ರ' ಚಿತ್ರದ ಜೊತೆಗೆ ರವಿತೇಜ ಅವರ 'ಮಿರಪಾಕಯ್' ಚಿತ್ರ ಕ್ಲ್ಯಾಶ್ ಆಯ್ತು. ಹೀಗೆ ಹಲವು ಬಾರಿ ಇಬ್ಬರ ಸಿನಿಮಾಗಳು ಒಟ್ಟಿಗೆ ರಿಲೀಸ್‌ ಆಗಿ ಬಾಕ್ಸಾಫಿಸ್‌ ವಾರ್‌ಗೆ ಸಾಕ್ಷಿ ಆಗಿವೆ. ಆದರೆ ಈ ಚಿತ್ರಗಳಲ್ಲಿ ಹೆಚ್ಚಿನ ಗೆಲುವು ಸಾಧಿಸಿದ್ದು ಮಾತ್ರ ರವಿತೇಜ ಸಿನಿಮಾಗಳು. ಸದ್ಯ ಇವರ ನಡುವೆ ಬಿಗ್‌ ಫೈಟ್‌ ಇದೆ ಎನ್ನುವ ವಿಚಾರಕ್ಕೆ ಉತ್ತರ ಸಿಗುವ ದಿನಗಳೂ ಹತ್ತಿರ ಬರುತ್ತಿವೆ. ಇದು ನಿಜವೋ ಸುಳ್ಳೋ ಎನ್ನುವುದು ಕಾರ್ಯಕ್ರಮ ಪ್ರಸಾರದ ಬಳಿಕ ತಿಳಿಯಲಿದೆ.

More from Filmibeat

English summary
Clarification On Big Fight Between Actor Nandamuri Balakrishna And Ravi Teja
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X