ರಾಜಮೌಳಿ ವಿರುದ್ಧ ಜೂ.ಎನ್‌ಟಿಆರ್, ರಾಮ್‌ ಚರಣ್, ಕೀರವಾಣಿ ದೂರು

ನಿರ್ದೇಶಕ ರಾಜಮೌಳಿ ದೇಶದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಅವರ ಸಿನಿಮಾಗಳು ಪಕ್ಕಾ ಸೂಪರ್ ಹಿಟ್. ಜೊತೆಗೆ ಪ್ರೇಕ್ಷಕರ ಮನಸ್ಸಿನಲ್ಲಿ ಬಹುಕಾಲ ನಿಲ್ಲುವಂತಹಾ ಸಿನಿಮಾಗಳನ್ನು ನೀಡುತ್ತಾರೆ ರಾಜಮೌಳಿ.

ರಾಜಮೌಳಿ ಸಿನಿಮಾಗಳ ದೃಶ್ಯ ಸಂಯೋಜನೆ, ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೇ ಕರೆದುಕೊಂಡು ಹೋಗುತ್ತದೆ. ಬಾಹುಬಲಿ ಅಂಥಹಾ ಸಿನಿಮಾ ಮೂಲಕ ದಕ್ಷಿಣ ಭಾರತ ಸಿನಿಮಾದ ಸ್ಥಾಯಿಯನ್ನು ವಿದೇಶಗಳಿಗೂ ವಿಸ್ತರಿಸಿದ ಶ್ರೇಯ ರಾಜಮೌಳಿಗೆ ಸಲ್ಲಬೇಕು.

ವರ್ಷಾನುಗಟ್ಟಲೆ ಒಂದೇ ಸಿನಿಮಾ ತೆಗೆಯುವ ನಿರ್ದೇಶಕ ರಾಜಮೌಳಿ ಸಿನಿಮಾದಲ್ಲಿ ಕೆಲಸ ಮಾಡುವ ಕಲಾವಿದರಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಆ ಬಗ್ಗೆ ಜೂ ಎನ್‌ಟಿಆರ್, ರಾಮ್‌ಚರಣ್ ಸೇರಿದಂತೆ ಹಲವು ನಟರು ಹೇಳಿದ್ದಾರೆ. ಆ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

12:45 ಕ್ಕೆ ದೃಶ್ಯ ಸ್ಟಾರ್ಟ್‌ ಮಾಡ್ತಾನೆ: ಜೂ ಎನ್‌ಟಿಆರ್‌

12:45 ಕ್ಕೆ ದೃಶ್ಯ ಸ್ಟಾರ್ಟ್‌ ಮಾಡ್ತಾನೆ: ಜೂ ಎನ್‌ಟಿಆರ್‌

ಮೊದಲಿಗೆ ಮಾತನಾಡುವ ಜೂ.ಎನ್‌ಟಿಆರ್, 12:45 ರ ವೇಳೆಗೆ ಒಂದು ಸೀನ್‌ ತೆಗೆಯಲು ಪ್ರಾರಂಭ ಮಾಡುತ್ತಾನೆ (ರಾಜಮೌಳಿ), ಅಲ್ಲಿಂದ ನಮಗೆ ಹಿಂಸೆ ಪ್ರಾರಂಭವಾಗುತ್ತದೆ. ಆ ದೃಶ್ಯ ಮತ್ತೆ ಯಾವಾಗ ಮುಗಿಯುತ್ತದೆಯೋ ನಮಗೇ ಗೊತ್ತಿಲ್ಲ ಎನ್ನುತ್ತಾರೆ ರಾಜಮೌಳಿ.

'ಒಂದು ಹಾಡು ಮಾಡಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ'

'ಒಂದು ಹಾಡು ಮಾಡಲು ಒಂದೂವರೆ ವರ್ಷ ತೆಗೆದುಕೊಳ್ಳುತ್ತಾನೆ'

ರಾಜಮೌಳಿ ಸಿನಿಮಾಗಳ ಖಾಯಂ ಸಂಗೀತ ನಿರ್ದೇಶಕ ಕೀರವಾಣಿ ಮಾತನಾಡಿ, ಜನವರಿಯಲ್ಲಿ ಹಾಡಿನ ಪಲ್ಲವಿ ಮಾಡುತ್ತೇವೆ, ಆರು ತಿಂಗಳ ನಂತರ ಜೂನ್ ಅಥವಾ ಜುಲೈನಲ್ಲಿ ಚರಣ ಮಾಡುತ್ತೇವೆ, ಡಿಸೆಂಬರ್‌ನಲ್ಲಿ ಹಾಡಿಗೆ ಲಿರಿಕ್ಸ್ ಬರೆಸುತ್ತಾನೆ, ಮುಂದಿನ ವರ್ಷ ಮಾರ್ಚ್‌ನಲ್ಲಿ ಹಾಡು ರೆಕಾರ್ಡ್‌ ಮಾಡುತ್ತಾನೆ, ನಂತರ ನವೆಂಬರ್‌ನಲ್ಲಿ ವಾಯ್ಸ್‌ ಮಿಕ್ಸ್‌ ಮಾಡಿಸುತ್ತಾನೆ, ಈ ನಡುವೆ ಯಾವ ಸಿನಿಮಾಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನೇ ಮರೆತುಬಿಟ್ಟಿರುತ್ತೇವೆ, ವಿಚಿತ್ರ ಮನುಷ್ಯ ಆತ' ಎಂದು ರಾಜಮೌಳಿ ಬಗ್ಗೆ ಹೇಳಿದ್ದಾರೆ ಕೀರವಾಣಿ.

ನಮ್ಮನ್ನೇ ರಿಸ್ಕ್‌ಗೆ ತಳ್ಳಿಬಿಡುತ್ತಾರೆ: ರಾಮ್‌ ಚರಣ್

ನಮ್ಮನ್ನೇ ರಿಸ್ಕ್‌ಗೆ ತಳ್ಳಿಬಿಡುತ್ತಾರೆ: ರಾಮ್‌ ಚರಣ್

ನಟ ರಾಮ್ ಚರಣ್ ಮಾತನಾಡಿ, 'ರಾಜಮೌಳಿ ಒಂದು ದೃಶ್ಯ ವಿವರಿಸುತ್ತಾರೆ, 40 ಮೀಟರ್ ಮೇಲಿನಿಂದ ಬೀಳಬೇಕಿರುತ್ತದೆ. ಆಗ ನಾನು ಕೇಳ್ತೀನಿ, ದೃಶ್ಯ ಸೂಪರ್ ಆಗಿದೆ, ಸ್ವಲ್ಪ ರಿಸ್ಕ್‌ ಸಹ ಇದನ್ನು ಯಾರು ಮಾಡ್ತಾರೆ? ಎಂದರೆ, ನೀನೇ ಕಣೋ ಮಾಡೋದು ಎಂದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ರಾಜಮೌಳಿ ಎಂದಿದ್ದಾರೆ ರಾಮ್ ಚರಣ್.

Recommended Video

ಜಗಮೆಚ್ಚಿದ ನಿರ್ದೇಶಕ Rajamouli ಮೇಲೆ ಕಂಪ್ಲೇಂಟ್ | Filmibeat Kannada
ರಾಜಮೌಳಿಯ ಸಹಾಯಕ ನಿರ್ದೇಶಕ ಹೇಳುವುದೇನು?

ರಾಜಮೌಳಿಯ ಸಹಾಯಕ ನಿರ್ದೇಶಕ ಹೇಳುವುದೇನು?

ರಾಜಮೌಳಿಯ ಸಹಾಯಕ ನಿರ್ದೇಶಕ ಕಿರಣ್ ಮಾತನಾಡಿ, ಲೊಕೇಶನ್‌ನ ವಿಡಿಯೋವನ್ನು ಮಾಡಿ ನಾವು ಅವರಿಗೆ ಕಳಿಸುತ್ತೇವೆ, 'ನೀವು ಶೇಕಿಂಗ್ ಇಲ್ಲದೆ ಒಂದು ವಿಡಿಯೋ ಸಹ ತೆಗೆಯುವುದಿಲ್ಲ ಅಲ್ಲವೆ' ಎಂದು ಬೈಯುತ್ತಾರೆ. ಲೋಕೇಶನ್ ಎಲ್ಲಾ ನೋಡಿದ ನಂತರ, ಇದ್ಯಾಕೋ ಸರಿಯಿಲ್ಲ, ಸೆಟ್‌ನಲ್ಲಿ ಗ್ರೀನ್ ಮ್ಯಾಟ್‌ನಲ್ಲಿ ಚಿತ್ರೀಕರಣ ಮಾಡಿಬಿಡೋಣ ಎನ್ನುತ್ತಾರೆ, ಅವರಿಗೆ ಯಾವಾಗ ಏನು ಹೊಳೆಯುತ್ತದೆಯೋ ಗೊತ್ತಾಗುವುದಿಲ್ಲ ಎಂದಿದ್ದಾರೆ ಕಿರಣ್.

More from Filmibeat

English summary
Jr NTR, Ram Charan, Keeravani many others complaining about director Rajamouli's working style
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X