ಡಿವೋರ್ಸ್ ಬಳಿಕ ಸದ್ದಿಲ್ಲದೇ 2ನೇ ಮದುವೆಯಾದ ನಟಿ ಸ್ವಾತಿ; ಫೋಟೊಗಳು ವೈರಲ್

ಲವ್, ಮದುವೆ, ಡಿವೋರ್ಸ್ ಬಳಿಕ ಮತ್ತೆ ಲವ್, ಮತ್ತೆ ಮದುವೆ ಎನ್ನುವುದು ಈಗ ಕಾಮನ್ ಎನ್ನುವಂತಾಗಿಬಿಟ್ಟಿದೆ. ಸಿನಿಮಾ ತಾರೆಯರ ಮ್ಯಾರೇಜ್, ಡಿವೋರ್ಸ್ ಹಾಗೂ 2ನೇ ಮದುವೆ ವಿಚಾರಗಳು ಭಾರೀ ಸುದ್ದಿ ಆಗುತ್ತಿದೆ. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ 2ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ನಾಗೋತಿ ಜೊತೆ ಸರಳವಾಗಿ ಮದುವೆ ನಡೆದಿದೆ.

ವಿಶಾಖಪಟ್ಟಣಂ ಮೂಲದ ಸ್ವಾತಿ ರೆಡ್ಡಿ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ನಿರೂಪಕಿಯಾಗಿ ಕೂಡ ಮಿಂಚಿದವರು. 'ಕಲರ್ಸ್' ಎನ್ನುವ ಕಾರ್ಯಕ್ರಮ ನಿರೂಪಣೆ ಮಾಡಿ ಗಮನ ಸೆಳೆದಿದ್ದರು. ಮುಂದೆ ಕಲರ್ಸ್ ಸ್ವಾತಿ ಎಂದೇ ಜನಪ್ರಿಯರಾಗಿಬಿಟ್ಟರು. ವೃತ್ತಿಯಲ್ಲಿ ಪೈಲೆಟ್ ಆಗಿದ್ದ ವಿಕಾಸ್ ವಾಸು ಎಂಬುವವರನ್ನು ಸ್ವಾತಿ ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಜೋಡಿ 2022ರಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು.

Colours Swathi shares first pics from her wedding with Srikanth Nagothi

3 ವರ್ಷಗಳ ಹಿಂದೆ 'ಮಂಥ್ ಆಫ್ ಮಧು' ಎಂಬ ಚಿತ್ರದಲ್ಲಿ ಸ್ವಾತಿ ನಟಿಸಿದ್ದರು. ಶ್ರೀಕಾಂತ್ ನಾಗೋತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೇ ಸಮಯದಲ್ಲಿ ಸ್ವಾತಿ ಹಾಗೂ ಶ್ರೀಕಾಂತ್ ನಡುವೆ ಶುರುವಾಗಿದ್ದ ಪರಿಚಯ ಸ್ನೇಹವಾಗಿ ಬಳಿಕ ಇಬ್ಬರೂ ಪ್ರೀತಿಲಿ ಬಿದ್ದಿದ್ದರು. ಇದೀಗ ಸರಳವಾಗಿ ಇಬ್ಬರು ಮದುವೆಯಾಗಿದ್ದಾರೆ. ಸ್ವಾತಿ ತಮ್ಮ ಮದುವೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ(ಜುಲೈ 8) ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿದೆ. ಕೆಲವೇ ಆಪ್ತರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು ಎಂದು ವರದಿಯಾಗಿದೆ.

ಸೋವಿಯತ್ ಒಕ್ಕೂಟದ ರಷ್ಯಾದ ವ್ಲಾಡಿವೋಸ್ಟಾಕ್‌ದಲ್ಲಿ ಸ್ವಾತಿ ಹುಟ್ಟಿದ್ದರು. ತಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೋವಿಯತ್ ಒಕ್ಕೂಟದಲ್ಲಿ ಜಲಾಂತರ್ಗಾಮಿ ನೌಕೆಯ ತರಬೇತಿ ಪಡೆಯುವ ವೇಳೆ ಅಲ್ಲೇ ನೆಲೆಸಿದ್ದರು. ಅದೇ ಸಮಯದಲ್ಲಿ ಸ್ವಾತಿ ಹುಟ್ಟಿದ್ದರು. ಬಳಿಕ ಮುಂಬೈಗೆ ಬಂದ ಕುಟುಂಬ ಅಂತಿಮವಾಗಿ ವಿಶಾಖಪಟ್ಟಣದಲ್ಲಿ ನೆಲೆಸುವಂತಾಯಿತು. ಅಲ್ಲೇ ಸ್ವಾತಿ ಓದಿ ಬೆಳೆದರು. ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಕಿರುತೆರೆ ನಿರೂಪಕಿಯಾಗಿ ಗುರ್ತಿಸಿಕೊಂಡಿದ್ದರು.

2005ರಲ್ಲಿ ಬಂದಿದ್ದ 'ಡೇಂಜರ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 'ಸುಬ್ರಮಣ್ಯಂಪುರಂ', 'ಅಷ್ಟ ಚಮ್ಮಾ', 'ಕಲವರಮಾಯೆಮದಿಲೊ', 'ಗೋಲ್ಕೊಂಡ ಹೈಸ್ಕೂಲ್', 'ಮಿರಪಕಾಯ್', ಕಂದಿರಿಗ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು. ಕೆಲ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.

ಮೊದಲ ಪತಿ ವಿಕಾಸ್ ವಾಸು ಅವರಿಂದ ದೂರಾದ ಬಳಿಕ 'ಮಂಥ್ ಆಫ್ ಮಧು' ಎಂಬ ಏಕೈಕ ಸಿನಿಮಾದಲ್ಲಿ ಸ್ವಾತಿ ನಟಿಸಿದ್ದರು. ಈ ಚಿತ್ರದಲ್ಲಿ ನವೀನ್ ಚಂದ್ರ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಸ್ವಾತಿ ಹಾಗೂ ಶ್ರೀಕಾಂತ್ ನಾಗೋತಿ ಲವ್ ಗುಟ್ಟಾಗಿಯೇ ಇತ್ತು. ಇದೀಗ ಮದುವೆ ಮಾಡಿಕೊಂಡು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಶ್ರೀಕಾಂತ್ ಇನ್‌ಸ್ಟಾ ಅಕೌಂಟ್‌ ಜೊತೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳು ಜೋಡಿಗೆ ಶುಭ ಕೋರುತ್ತಿದ್ದಾರೆ.

2018ರಲ್ಲಿ ವಿಕಾಸ್ ವಾಸು ಕೈಹಿಡಿದಿದ್ದ ಸ್ವಾತಿ 2020ರಲ್ಲಿ ತಮ್ಮ ಮದುವೆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಮಾಡಿದ್ದರು. ಅದನ್ನು ನೋಡಿ ಇಬ್ಬರೂ ದೂರಾಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಈ ಬಗ್ಗೆ ಸ್ವಾತಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಇಬ್ಬರೂ ದೂರಾಗಿದ್ದು ಗೊತ್ತಾಗಿತ್ತು. ಇದೀಗ ನಿರ್ದೇಶಕ ಶ್ರೀಕಾಂತ್ ಜೊತೆ ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ. ಅಭಿಮಾನಿಗಳು, ಆಪ್ತರು ಜೋಡಿಗೆ ಶುಭ ಹಾರೈಸುತ್ತಿದ್ದಾರೆ. ಮದುವೆ ಬಳಿಕ ಕೂಡ ಸ್ವಾತಿ ಸಿನಿಮಾಗಳಲ್ಲಿ ಮುಂದುವರೆಯಲಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಅಪ್‌ಡೇಟ್ ಸಿಗಲಿದೆ.

Read more about: actress tollywood director
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X