ಕಿಟಕಿ ತೆಗೆದು ಏಸಿ ಹಾಕಿದ್ದಕ್ಕೆ ಜಗಳ.. ನನ್ನ ಮಾನ ಹೋಯ್ತು ಎಂದ ಹಾಸ್ಯ ನಟ

ತೆಲುಗು ಕಿರುತೆರೆಯ ಜನಪ್ರಿಯ ಕಾಮಿಡಿ ಶೋ 'ಜಬರ್‌ದಸ್ತ್' ಒಂದು ದಶಕಕ್ಕೂ ಹೆಚ್ಚು ಕಾಲ ವೀಕ್ಷಕರನ್ನು ರಂಜಿಸುತ್ತಾ ಬಂದಿದೆ. ಈ ಕಾರ್ಯಕ್ರಮವು ಅನೇಕ ಕಲಾವಿದರಿಗೆ ಉತ್ತಮ ಅವಕಾಶಗಳನ್ನು ಒದಗಿಸಿದ್ದು, ಕೆಲವರು ಈಗ ನಾಯಕರಾಗಿ, ನಿರ್ದೇಶಕರಾಗಿ ಹಾಗೂ ಜನಪ್ರಿಯ ಆ್ಯಂಕರ್‌ಗಳಾಗಿ ಗುರುತಿಸಿಕೊಂಡಿದ್ದಾರೆ.

ತೆಲುಗಿನಲ್ಲಿ 2013ರಲ್ಲಿ ಆರಂಭಗೊಂಡ ಈ ಕಾಮಿಡಿ ಶೋ ಈಗಲೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಕಾಮಿಡಿ ಶೋಗಳಲ್ಲಿ ಜಬರ್‌ದಸ್ತ್ ಕೂಡ ಒಂದು. ತಮ್ಮದೇ ಆದ ವಿಶಿಷ್ಟ ಹಾಸ್ಯ ಸ್ಕಿಟ್‌ಗಳ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆಯುತ್ತಲೇ ಇದ್ದಾರೆ. ಈಟಿವಿ ತೆಲುಗಿನಲ್ಲಿ ವೀಕೆಂಡ್‌ನಲ್ಲಿ ಪ್ರಸಾರ ಆಗುವ ಈ ಶೋಗೆ ಪ್ರತ್ಯೇಕ ಫ್ಯಾನ್ ಫಾಲೋವಿಂಗ್ ಇದೆ.

Comedian Naresh Fire On Jabardasth Varsha in Telugu Famous Comedy Show Jabardasth latest promo highlights

ಈ ಜನಪ್ರಿಯ ಹಾಸ್ಯ ಶೋ ಅನ್ನು ಜನಪ್ರಿಯ ಆ್ಯಂಕರ್‌ ವರ್ಷಾ ನಡೆಸಿಕೊಡುತ್ತಿದ್ದಾರೆ. ಈ ನಿರೂಪಕಿಯನ್ನು ಜಬರ್ದಸ್ತ್ ವರ್ಷಾ ಅಂತಲೇ ತೆಲುಗು ಮಂದಿ ಗುರುತಿಸುವುದಕ್ಕೆ ಶುರು ಮಾಡಿದ್ದಾರೆ. ಈ ವೀಕೆಂಡ್‌ನಲ್ಲಿ ಪ್ರಸಾರ ಆಗುವ ಈ ಶೋನಲ್ಲಿ ನಿರೂಪಕಿಯ ವಿರುದ್ಧ ಹಾಸ್ಯ ಕಲಾವಿದ ಕಾಮಿಡಿಯನ್ ನರೇಶ್ ಕಿಡಿಕಾರಿದ್ದಾರೆ. ಸದ್ಯ ಕಿರುತೆರೆ ವೀಕ್ಷಕರಲ್ಲಿ ಈ ಶೋ ಬಗ್ಗೆನೇ ಚರ್ಚೆ ಶುರುವಾಗಿದೆ.

ಸೆಪ್ಟೆಂಬರ್ 19 ಮತ್ತು 20ರ ಸಂಚಿಕೆಗಳ ಹೊಸ ಪ್ರೋಮೋವನ್ನು ಜಬರ್‌ದಸ್ತ್ ತಂಡ ಬಿಡುಗಡೆ ಮಾಡಿದೆ. ಇದು ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. ಈ ಶೋನಲ್ಲಿ ಬುಲೆಟ್ ಭಾಸ್ಕರ್, ಆಟೋ ರಾಮ್ ಪ್ರಸಾದ್, ವೆಂಕಿ, ಪ್ರವೀಣ್, ಚಲಾಕಿ ಚಂಟಿ, ಮತ್ತು ರಾಘವ ಅವರ ಹಾಸ್ಯ ಸ್ಕಿಟ್‌ಗಳು ಪ್ರೇಕ್ಷಕರ ಗಮನ ಸೆಳೆದಿವೆ. ಸದ್ಯಕ್ಕೆ ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಕಾಮಿಡಿಯನ್ ನರೇಶ್ ಅವರು ಜಬರ್‌ದಸ್ತ್ ವರ್ಷಾ ಅವರ ಬಗ್ಗೆ ಮಾಡಿದ ಕಾಮೆಂಟ್‌ಗಳು ವೀಕ್ಷಕರ ಗಮನ ಸೆಳೆದಿವೆ.

ಅಂದ್ಹಾಗೆ ಕಿಡಿಕಾರಿದ್ದಾರೆ ಅಂದರೆ ಇಬ್ಬರ ನಡುವೆ ಏನೋ ಗಲಾಟೆ ನಡೆದಿದೆ ಎಂದುಕೊಳ್ಳಬೇಡಿ. ಕಾಮಿಡಿ ಶೋನ ಸ್ಕಿಟ್‌ನಲ್ಲಿ, ವರ್ಷಾ ನರೇಶ್ ಅವರ ಕೆನ್ನೆಗೆ ಹೊಡೆದು "ಕಿಟಕಿ ತೆರೆದು ಎಸಿ ಆನ್ ಮಾಡಿದ್ದೀರಿ, ಎಸಿ ಹೊರಗೆ ಹೋಗುತ್ತಿದೆ. ನಿಮಗೆ ಗೊತ್ತಾಗುವುದಿಲ್ಲವೇ?" ಎಂದು ಪ್ರಶ್ನೆ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ನರೇಶ್ "ನೀವು ಕಿಟಕಿಯಂತಹ ಜಾಕೆಟ್ ಧರಿಸಿದರೆ, ನನ್ನ ಮಾನವೇ ಹೋಗುತ್ತದೆ" ಎಂದು ವರ್ಷಾ ಧರಿಸಿದ್ದ ಸೀರೆಯ ಬಗ್ಗೆ ಕಮೆಂಟ್ ಮಾಡುತ್ತಾರೆ. ಇವರಿಬ್ಬರ ನಡುವೆ ನಡುವೆ ಗಂಭೀರವಾಗಿ ನಡೆಯುವ ಈ ಸಂಭಾಷಣೆ ವೀಕ್ಷಕರಿಗೆ ನಗು ತರಿಸುತ್ತವೆ. ಈ ಮಧ್ಯೆ ಅಚ್ಚರಿ ಎಂಬಂತೆ ಬುಲೆಟ್ ಭಾಸ್ಕರ್ ಸ್ಕಿಟ್‌ಗೆ ಪ್ರವೇಶಿಸಿ ನರೇಶ್‌ಗೆ ಅಚ್ಚರಿ ನೀಡುತ್ತಾರೆ.

ಇವರೊಂದಿಗೆ ರಾಘವ ಶಾಲಾ ಶಿಕ್ಷಕರಾಗಿ, ಆಟೋ ರಾಮ್ ಪ್ರಸಾದ್ ನೆಟ್ ಕೆಫೆ ಮಾಲೀಕರಾಗಿ ಹಾಗೂ ಪ್ರವೀಣ್ ಹುಡುಗಿಯ ವೇಷದಲ್ಲಿ ಗಮನ ಸೆಳೆದಿದ್ದಾರೆ. ವೆಂಕಿ ಮತ್ತು ಸುಜಾತಾ ಎಂದಿನಂತೆ ಪತಿ-ಪತ್ನಿಯರ ಸ್ಕಿಟ್ ಮೂಲಕ ಮನರಂಜಿಸಿದ್ದಾರೆ. ಈ ವಾರದ ಸಂಪೂರ್ಣ ಸಂಚಿಕೆಯು ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ದಕ್ಷಿಣ ಭಾರತದ ಹಿರಿಯ ನಟಿ ಖುಷ್ಬೂ ಹಾಗೂ ಗಾಯಕ ಮನೋ ಈ ಕಾರ್ಯಕ್ರಮದ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಯುವ ಮತ್ತು ಪ್ರತಿಭಾವಂತ ರಶ್ಮಿ ಗೌತಮ್ ಹಾಗೂ ನಟ ಮಾನಸ್ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Comedian Naresh Fire On Jabardasth Varsha in Telugu Famous Comedy Show Jabardasth latest promo highlights.
Read more about: comedy show tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X