For Quick Alerts
  ALLOW NOTIFICATIONS  
  For Daily Alerts

  'ಪುಷ್ಪ'ದಲ್ಲಿ ಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಹಾಸ್ಯ ನಟ ಸುನಿಲ್

  |

  ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತಿದೆ. 'ಪುಷ್ಪ' ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಒಂದು ಗೂಡಿದೆ.

  ಅಲ್ಲು ಅರ್ಜುನ್ ಜೊತೆಗೆ ಕನ್ನಡತಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಮಲಯಾಳಂನ ಫಹಾದ್ ಫಾಸಿಲ್, ತಮಿಳಿನ ಚಿಯಾನ್ ವಿಕ್ರಂ ಅವರಂಥಹಾ ಘಟಾನುಘಟಿಗಳು ಸಿನಿಮಾದಲ್ಲಿದ್ದಾರೆ. ಈ ನಡುವೆ ಮತ್ತೊಬ್ಬ ಪ್ರತಿಭಾವಂತ ನಟ 'ಪುಷ್ಪ' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದಾಗಿ ಸುದ್ದಿ ಹೊರಬಿದ್ದಿದೆ.

  2000 ನೇ ಇಸವಿಯಲ್ಲಿ ಬಿಡಗುಡೆ ಆದ 'ನುವ್ವು ನೇನು' ಸಿನಿಮಾದ ಮೂಲಕ ನಟನೆ ಆರಂಭಿಸಿದ ಸುನಿಲ್ ಹಲವು ವರ್ಷಗಳ ಕಾಲ ಹಾಸ್ಯನಟರಾಗಿ ನಟಿಸಿ ನಂತರ ನಾಯಕ ನಟರಾಗಿ ಬಡ್ತಿ ಪಡೆದು ಈಗ ಮತ್ತೆ ಹಾಸ್ಯ ನಟನೆಯತ್ತ ವಾಲಿದ್ದಾರೆ. ಆದರೆ ಈಗ ಮತ್ತೊಂದು ಬಡ್ತಿಯನ್ನು ಅವರು 'ಪುಷ್ಪ' ಸಿನಿಮಾದ ಮೂಲಕ ಪಡೆಯುತ್ತಿದ್ದಾರೆ.

  ಭಿನ್ನ ಪಾತ್ರದಲ್ಲಿ ಹಾಸ್ಯನಟ ಸುನಿಲ್‌

  ಭಿನ್ನ ಪಾತ್ರದಲ್ಲಿ ಹಾಸ್ಯನಟ ಸುನಿಲ್‌

  ಹಾಸ್ಯನಟರಾಗಿದ್ದ ಸುನಿಲ್ 'ಪುಷ್ಪ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಸಿನಿಮಾದಲ್ಲಿ ಖಳನಟರ ದಂಡೇ ಇದ್ದು ಅವರಲ್ಲಿ ಒಬ್ಬರು ನಟ ಸುನಿಲ್. ಈ ಹಾಸ್ಯನಟನಿಗೆ ಖಳನಟನ ಪಾತ್ರ ಹೊಸದೇನೂ ಅಲ್ಲ ಈಗಾಗಲೇ 'ಕಲರ್‌ ಫೋಟೊ' ಸಿನಿಮಾದಲ್ಲಿ ಖಳನಟನ ಪಾತ್ರ ಮಾಡಿದ್ದಾರೆ ಸುನಿಲ್.

  ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿರುವ ಸುನಿಲ್

  ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿರುವ ಸುನಿಲ್

  'ಪುಷ್ಪ' ಸಿನಿಮಾವು ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗದಲ್ಲಿ ಸುನಿಲ್‌ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಮುಖ್ಯ ವಿಲನ್ ಆಗಿರುವ ಫಹಾದ್ ಫಾಸಿಲ್‌ ಮೊದಲ ಭಾಗದಲ್ಲಿ ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿದೆ.

  'ರಂಗಸ್ಥಳಂ'ನಲ್ಲಿ ನಟಿಸಿದ್ದ ಅನುಸೂಯ

  'ರಂಗಸ್ಥಳಂ'ನಲ್ಲಿ ನಟಿಸಿದ್ದ ಅನುಸೂಯ

  ನಟಿ ಅನುಸೂಯ ಸಹ 'ಪುಷ್ಪ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಸುಕುಮಾರ್ ನಿರ್ದೇಶನದ 'ರಂಗಸ್ಥಳಂ' ಸಿನಿಮಾದಲ್ಲಿ 'ರಂಗಂಮತ್ತೆ' ಪಾತ್ರದಲ್ಲಿ ನಟಿಸಿದ್ದ ಅನುಸೂಯ 'ಪುಷ್ಪ' ಸಿನಿಮಾ ಇನ್ನೂ ಪವರ್‌ಫುಲ್ ಪಾತ್ರದಲ್ಲಿ ನಟಿಸಲಿದ್ದಾರೆ. 'ಪುಷ್ಪ' ಸಿನಿಮಾದ ಎರಡೂ ಭಾಗಗಳಲ್ಲಿ ಅನುಸೂಯ ಇರಲಿದ್ದಾರಂತೆ.

  ಘಟನೆ ಬಗ್ಗೆ ಸ್ಪಷ್ಟ ಪಡಿಸಿದ ಚಿಕ್ಕಬಳ್ಳಾಪುರ ಎಸ್ ಪಿ ಮಿಥುನ್ | Jaggesh | Yathiraj | Filmibeat Kannada
  ಡಾಲಿ ಧನಂಜಯ್‌ದು ಯಾವ ಪಾತ್ರ?

  ಡಾಲಿ ಧನಂಜಯ್‌ದು ಯಾವ ಪಾತ್ರ?

  ಕನ್ನಡತಿ ರಶ್ಮಿಕಾ ಮಂದಣ್ಣ ಸಿನಿಮಾದ ನಾಯಕಿಯಾಗಿದ್ದು, ಕನ್ನಡಿಗ ನಟ ಡಾಲಿ ಧನಂಜಯ್ ಸಹ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಧನಂಜಯ್ ಅವರದ್ದು ಯಾವ ರೀತಿಯ ಪಾತ್ರ ಎಂಬುದು ಖಾತ್ರಿಯಾಗಿಲ್ಲ. ಆದರೆ ಸಿನಿಮಾದ ಮುಖ್ಯ ವಿಲನ್ ಪಾತ್ರ ಫಹಾದ್ ಫಾಸಿಲ್ ಆಗಿದ್ದು ಅವರ ಪಾತ್ರ ಸಿನಿಮಾದ ಎರಡನೇ ಭಾಗದಲ್ಲಿ ಹೆಚ್ಚು ಹೈಲೈಟ್ ಆಗಲಿದೆ.

  English summary
  Comedy actor Sunil playing villain character in 'Pushpa' movie. Fahad Fazil is the main villain of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X