For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ನಿರ್ಮಾಪಕನಾದ ಹಾಸ್ಯನಟನಿಗೆ ಪ್ರಭಾಸ್ ಬೆಂಬಲ

  |

  ತೆಲುಗಿನಲ್ಲಿ ಹಾಸ್ಯನಟರಿಗಿರುವಷ್ಟು ಜನಪ್ರಿಯತೆ, ಗೌರವಾಧರ ಇತರೆ ಸಿನಿಮಾ ಉದ್ಯಮಗಳಲ್ಲಿ ಕಾಣುವುದು ತುಸು ಕಡಿಮೆ. ''ತೆಲುಗಿನ ಹಾಸ್ಯನಟ'' ಎಂದರೆ ಥಟ್ಟನೆ ನೆನಪಾಗುವುದು ಬ್ರಹ್ಮಾನಂದಂ ಅವರ ನಂತರದ ಸ್ಥಾನ ಆಲಿಗೆ.

  ಹೌದು, ಬ್ರಹ್ಮಾನಂದಂ ಅಂಥಹಾ ದೈತ್ಯ ಪ್ರತಿಭೆ ಪಕ್ಕದಲ್ಲೇ ಇದ್ದರೂ ತಮ್ಮದೇ ಆದ ಸ್ಟೈಲ್, ಹಾವ-ಭಾವಗಳನ್ನು ರೂಪಿಸಿಕೊಂಡು ಜನರನ್ನು ರಂಜಿಸಿ ಹಿರಿಯ ಹಾಗೂ ಜನಪ್ರಿಯ ಹಾಸ್ಯ ನಟ ಎನಿಸಿಕೊಂಡಿದ್ದಾರೆ ಆಲಿ.

  30 ವರ್ಷದಿಂದ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾ, ನಗಿಸುತ್ತಾ ಬಂದಿರುವ ನಟ ಆಲಿ ಇದೀಗ ಮಗ್ಗಲು ಬದಲಿಸುವ ಪ್ರಯತ್ನದಲ್ಲಿದ್ದಾರೆ. ಹಾಸ್ಯ ನಟನಾಗಿದ್ದ ಆಲಿ ಇದೀಗ ನಿರ್ಮಾಪಕನಾಗಿದ್ದು ತಮ್ಮ ಚೊಚ್ಚಲ ನಿರ್ಮಾದ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಇದಕ್ಕೆ ನಟ ಪ್ರಭಾಸ್ ಬೆಂಬಲ ಸಹ ದೊರೆತಿದೆ.

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ

  ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ

  ಹಲವು ಸಿನಿಮಾಗಳಲ್ಲಿ ಪ್ರಭಾಸ್ ಹಾಗೂ ಆಲಿ ಒಟ್ಟಿಗೆ ನಟಿಸಿದ್ದು, ಇಬ್ಬರೂ ಒಳ್ಳೆಯ ಗೆಳೆಯರು ಸಹ ಹಾಗಾಗಿಯೇ ಆಲಿ ನಿರ್ಮಾಣದ ಮೊದಲ ಸಿನಿಮಾಕ್ಕೆ ವಿಡಿಯೋ ಮೂಲಕ ಶುಭಾಶಯ ಕೋರಿರುವ ನಟ ಪ್ರಭಾಸ್ ಸಿನಿಮಾದ ಮೊದಲ ಲಿರಿಕಲ್ ವಿಡಿಯೋ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

  ಆಲಿಗೆ, ಆಲಿ ಸಿನಿಮಾಕ್ಕೆ ಒಳಿತಾಗಲಿ: ಪ್ರಭಾಸ್

  ಆಲಿಗೆ, ಆಲಿ ಸಿನಿಮಾಕ್ಕೆ ಒಳಿತಾಗಲಿ: ಪ್ರಭಾಸ್

  ''ಆಲಿ ಒಬ್ಬ ಅದ್ಭುತವಾದ ವ್ಯಕ್ತಿ. ಅವರಿಗೆ ಸಾಕಷ್ಟು ಒಳ್ಳೆಯ ಹೆಸರಿದೆ. ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. 'ಅಂದರೂ ಬಾಗುಂಡಾಲಿ, ಅಂದುಲೊ ನೇನುಂಡಾಲಿ' ಸಿನಿಮಾದ ಮೂಲಕ ಒಂದೊಳ್ಳೆ ಸಂದೇಶವನ್ನು ಅವರು ನೀಡಲಿದ್ದಾರೆ. ಅವರಿಗೆ, ಅವರ ಸಿನಿಮಾಕ್ಕೆ ಒಳಿತಾಗಲಿ'' ಎಂದು ಹಾರೈಸಿದ್ದಾರೆ ಪ್ರಭಾಸ್.

  ಪವಿತ್ರ ಲೋಕೇಶ್, ರವಿಶಂಕರ್ ನಟಿಸಿದ್ದಾರೆ

  ಪವಿತ್ರ ಲೋಕೇಶ್, ರವಿಶಂಕರ್ ನಟಿಸಿದ್ದಾರೆ

  'ಅಂದರೂ ಬಾಗುಂಡಾಲಿ, ಅಂದುಲೊ ನೇನುಂಡಾಲಿ' ಹೆಸರಿನ ಸಿನಿಮಾವನ್ನು ಹಾಸ್ಯನಟ ಆಲಿ ನಿರ್ಮಾಣ ಮಾಡಿದ್ದಾರೆ. ಇದೊಂದು ಕೌಟುಂಬಿಕ ಹಾಸ್ಯಚಿತ್ರವಾಗಿದ್ದು ಸಿನಿಮಾ ಈಗಾಗಲೇ ತಯಾರಾಗಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ ಆಲಿ. ಸಿನಿಮಾದಲ್ಲಿ ಆಲಿ ಸೇರಿ ಇನ್ನೂ ಕೆಲವು ಹಾಸ್ಯ ನಟರು ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ಪವಿತ್ರ ಲೋಕೇಶ್ ಸಹ ಇದ್ದಾರೆ. ಜೊತೆಗೆ ವಿಲನ್ ರವಿಶಂಕರ್ ಸಹ ಇದ್ದಾರೆ.

  June 28ಕ್ಕೆ ಪ್ರತಿಭಟನೆಗೆ ಸಜ್ಜಾಗುತ್ತಿರುವ ಕಲಾವಿದರ ಸಂಘ!! | Filmibeat Kannada
  'ಆಲಿವುಡ್' ಸಿನಿಮಾ ನಿರ್ಮಾಣ ಸಂಸ್ಥೆ

  'ಆಲಿವುಡ್' ಸಿನಿಮಾ ನಿರ್ಮಾಣ ಸಂಸ್ಥೆ

  ಆಲಿ ತಮ್ಮ ಸಿನಿಮಾ ನಿರ್ಮಾಣ ಸಂಸ್ಥೆಗೆ 'ಆಲಿವುಡ್' ಎಂದು ವಿಭಿನ್ನವಾಗಿ ಹೆಸರಿಟ್ಟಿದ್ದಾರೆ. ಆಲಿವುಡ್ ಮೂಲಕ ತೆರೆಗೆ ಬರುತ್ತಿರುವ ಮೊದಲ ಸಿನಿಮಾ 'ಅಂದರೂ ಬಾಗುಂಡಾಲಿ, ಅಂದುಲೊ ನೇನುಂಡಾಲಿ' ಸಿನಿಮಾವು ಮಲಯಾಳಂ ಸಿನಿಮಾ 'ವಿಕೃತಿ'ಯ ರೀಮೇಕ್ ಆಗಿದೆ. ಸಿನಿಮಾದಲ್ಲಿ ಆಲಿ, ನರೇಶ್ ಮುಖ್ಯ ಪಾತ್ರದಲ್ಲಿದ್ದಾರೆ. ಸಿನಿಮಾವನ್ನು ಶ್ರೀಪುರಂ ಕಿರಣ್ ನಿರ್ದೇಶನ ಮಾಡಿದ್ದಾರೆ.

  English summary
  Comedy actor Ali producing his first movie 'Andaru Bagundali Andulo Nenundali' Prabhas released the song of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X